ಬ್ರೇಕಿಂಗ್ ನ್ಯೂಸ್
19-01-22 03:51 pm HK Desk news ಕ್ರೈಂ
ಢಾಕಾ, ಜ.19 : ನಾಪತ್ತೆಯಾದ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ಸಿನಿಮಾ ನಟಿ ರೈಮಾ ಇಸ್ಲಾಮ್ ಶಿಮು(45) ಪ್ರಕರಣದಲ್ಲಿ ಸ್ಫೋಟಕ ತಿರುವು ಲಭಿಸಿದ್ದು, ಆಕೆಯನ್ನು ಗಂಡನೇ ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆಗೈದ ವಿಚಾರವನ್ನು ಹೇಳಿಕೊಂಡಿದ್ದಾನೆ.
ಜನವರಿ 17ರಂದು ಬೆಳಗ್ಗೆ ನಟಿ ರೈಮಾ ಇಸ್ಲಾಮ್ ಶಿಮು ಶವ ಢಾಕಾ ನಗರದ ಕಿರಾಣಿಗಂಜ್ ಏರಿಯಾದಲ್ಲಿ ರಸ್ತೆ ಬದಿಯ ಮೋರಿಯೊಂದರಲ್ಲಿ ಪತ್ತೆಯಾಗಿತ್ತು. ಗೋಣಿ ಚೀಲದಲ್ಲಿ ಕಟ್ಟಿ ಎಸೆಯಲಾಗಿದ್ದ ಶವವನ್ನು ಸ್ಥಳೀಯರು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಶವವನ್ನು ಪೋಸ್ಟ್ ಮಾರ್ಟಂ ನಡೆಸಲು ರವಾನಿಸಲಾಗಿತ್ತು. ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಶಿಮು ಗಂಡ ಶೆಖಾವತ್ ಆಲಿ ನೋಬಲ್, ತನ್ನ ಪತ್ನಿ ನಾಪತ್ತೆಯಾಗಿದ್ದಾಗಿ ಪೊಲೀಸ್ ದೂರು ನೀಡಿದ್ದ.

ನಟಿಯ ಶವ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಆಕೆಯ ಪತಿ ಶೆಖಾವತ್ ಮತ್ತು ಆತನ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದರು. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಟಿಯನ್ನು ಶೆಖಾವತ್ ಸೂಚನೆಯಂತೆ ದುಷ್ಕರ್ಮಿಗಳ ತಂಡ, ಕೊಲೆಗೈದು ಕಿರಾಣಿಗಂಜ್ ಏರಿಯಾದ ಮೋರಿಯೊಂದರಲ್ಲಿ ಎಸೆದಿದೆ ಎನ್ನಲಾಗುತ್ತಿದೆ. ಕೊಲೆ ಕೃತ್ಯದ ಬಗ್ಗೆ ಗಂಡ ಒಪ್ಪಿಕೊಂಡಿದ್ದು, ಯಾಕಾಗಿ ಈ ಕೃತ್ಯ ನಡೆಸಿದ್ದಾನೆ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ನಟಿಯ ಕೊಲೆ ಪ್ರಕರಣ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸುವಂತೆ ಆಕೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಶವದ ಮೇಲೆ ಗಾಯದ ಗುರುತುಗಳಿದ್ದುದರಿಂದ ಕೊಲೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಪ್ರಾಥಮಿಕ ಮಾಹಿತಿ ಕಲೆಹಾಕುವುದಕ್ಕಾಗಿ ಗಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಲವು ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಕೆಲವು ನಟರು ಕೊಲೆಯಲ್ಲಿ ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. 1998ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ್ದ ರೈಮಾ ಶಿಮು ಬಾಂಗ್ಲಾದಲ್ಲಿ ಹೆಸರಾಂತ ನಟಿಯಾಗಿದ್ದು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ, ಟಿವಿ ಸೀರಿಯಲ್, ನಾಟಕಗಳ ನಿರ್ಮಾಣದಲ್ಲಿಯೂ ತೊಡಗಿಸಿದ್ದರು. ಬಾಂಗ್ಲಾದೇಶ ಸಿನಿಮಾ ಕಲಾವಿದರ ಸಂಘದ ಗೌರವ ಸದಸ್ಯೆಯೂ ಆಗಿದ್ದರು.
In a shocking turn of events, Bangladeshi actress Raima Islam Shimu was found dead in a sack. She went missing a few days back and her dead body was found in a sack near a bridge in Keraniganj, Dhaka, on Monday (January 17, 2022). Her husband, Shakhawat Ali Nobel, was interrogated by the police after they found injury marks on the late actress' body. Nobel has confessed to murdering his wife Raima.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 03:30 pm
HK News Staffer
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
31-03-26 09:02 pm
Mangalurur Staffer
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm