ಬ್ರೇಕಿಂಗ್ ನ್ಯೂಸ್
14-09-20 11:08 am Headline Karnataka News Network ಕ್ರೈಂ
ಹೊಸದಿಲ್ಲಿ, ಸೆಪ್ಟೆಂಬರ್ 14: ಕಳೆದ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿದೆ.
ಕನಿಷ್ಠ 53 ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಪಡೆಯ ವಿಶೇಷ ಘಟಕ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿತ್ತು. ಖಾಲಿದ್ ಅವರನ್ನು ರವಿವಾರ ವಿಚಾರಣೆ ಸಲುವಾಗಿ ಕರೆಸಿಕೊಳ್ಳಲಾಗಿತ್ತು ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದಕ್ಕೂ ಮುನ್ನ ಎರಡು ತಿಂಗಳಲ್ಲಿ ಎರಡು ಬಾರಿ ಖಾಲಿದ್ ಅವರನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. "ರವಿವಾರ ರಾತ್ರಿ ಖಾಲಿದ್ ಅವರನ್ನು ಬಂಧಿಸಲಾಗಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಘಟಕ ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪಟ್ಟಿ ಪ್ರಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಮುನ್ನ ಖಾಲಿದ್ ಅವರು ಮಾಜಿ ಎಎಪಿ ಕೌನ್ಸಿಲರ್ ತಾಹೀರ್ ಹುಸೈನ್ ಮತ್ತು ಹೋರಾಟಗಾರರಾದ ಖಾಲಿದ್ ಸೈಫಿ ಜತೆ ಸೇರಿ ದೆಹಲಿ ಗಲಭೆಯ ಸಂಚು ರೂಪಿಸಿದ್ದರು. ನಾಲ್ಕು ಆರೋಪಪಟ್ಟಿಗಳಲ್ಲಿ ವಿವರಿಸಿದಂತೆ ಎಎಪಿ ಮಾಜಿ ಕೌನ್ಸಿಲರ್ ಹುಸೈನ್ ಹಾಗೂ ಸೈಫಿಯವರನ್ನು ಖಾಲಿದ್ ಜನವರಿ 8ರಂದು ಶಹೀನ್ ಭಾಗ್ ಧರಣಿ ಸ್ಥಳದಲ್ಲಿ ಭೇಟಿ ಮಾಡಿ ದಂಗೆಯ ಯೋಜನೆ ರೂಪಿಸಿದ್ದರು. ಆದರೆ ಖಾಲಿದ್ ಪತ್ರಿಕಾ ಹೇಳಿಕೆ ನೀಡಿ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.
ತಾಹೀರ್ ಹುಸೈನ್, ಜಾಮಿಯಾ ವಿದ್ಯಾರ್ಥಿ ಮೀರನ್ ಹೈದರ್, ಜಾಮಿಯಾ ಸಂಚಾಲನಾ ಸಮಿತಿಯ ಮಾಧ್ಯಮ ಸಂಯೋಜಕರಾದ ಸಫೂರಾ ಝರ್ಗರ್ ಮತ್ತು ಪಿಂಜ್ರಾ ಟೋಡ್ ಹೋರಾಟಗಾರ್ತಿ ನತಾಶಾ ನರ್ವಾಲ್ ಹಾಗೂ ದೇವಾಂಗನಾ ಕಲಿತಾ ಅವರನ್ನು ಈಗಾಗಲೇ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದೆ.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 07:35 pm
Mangalore Correspondent
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
23-10-25 07:29 pm
Mangalore Correspondent
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm