ಬ್ರೇಕಿಂಗ್ ನ್ಯೂಸ್
02-12-21 12:47 pm HK Desk news ಕ್ರೈಂ
ಉಳ್ಳಾಲ, ಡಿ.2: ತಲಪಾಡಿಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯ ಕೈಹಿಡಿದೆಳೆದು ಲೈಂಗಿಕ ಕಿರುಕುಳ ನೀಡಿದ್ದ ವಿಕೃತ ಕಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಸಿ.ರೋಡ್ ಮುಳ್ಳುಗುಡ್ಡೆ ನಿವಾಸಿ ರಾಶಿಕ್ (22) ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ತಲಪಾಡಿ ಅಲಂಕಾರ ಗುಡ್ಡೆಯಿಂದ 14 ವರ್ಷದ ಬಾಲಕಿಯೋರ್ವಳು ತನ್ನ ತಂಗಿಯೊಂದಿಗೆ ಒಳರಸ್ತೆಯಾಗಿ ಕಾಲ್ನಡಿಗೆಯಲ್ಲಿ ತಲಪಾಡಿ ಚೆಕ್ ಪೋಸ್ಟ್ ರಸ್ತೆಯಾಗಿ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಲ್ಲಿ ಬಂದಿದ್ದ ರಾಶಿಕ್ ಬಾಲಕಿಯ ಕೈ ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಬಗ್ಗೆ ಸಂತ್ರಸ್ತ ಬಾಲಕಿಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧಿಸಿ ಉಳ್ಳಾಲ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸ್ಕೂಟರಲ್ಲಿ ಬಂದು ಹೋಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೇ ಆರೋಪಿ, ಇದಕ್ಕೂ ಮುನ್ನ ಉಚ್ಚಿಲದಲ್ಲಿಯೂ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಬಾಲಕಿ ಇಂದು ಉಳ್ಳಾಲ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಸಿಸಿಟಿವಿ ಆಧಾರದಲ್ಲಿ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಕಾಮುಕ ರಾಶಿಕ್ ನನ್ನ ಬಂಧಿಸಿದ್ದಾರೆ. ದೂರಿನನ್ವಯ ಆರೋಪಿ ರಾಶಿಕ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
City crime branch (CCB) apprehended the culprit, who is accused of sexually harassing a minor girl, who was on her way to school. The arrested is identified as Abdul Rashiq, resident of K C Road. He is also accused of molesting one more minor girl at Ucchila. Two cases are registered against accused Rashiq in Ullal police station. CCB sleuths are interrogating the accused to know his involvement in more crimes of this nature.
25-08-25 10:37 am
HK News Desk
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
25-08-25 02:29 am
Mangaluru Correspondent
ಮುಸ್ಲಿಂ ಗಂಡನನ್ನು ರಾಡ್ ನಲ್ಲಿ ಹೊಡೆದು ಕೊಲೆಗೈದು ಶ...
24-08-25 10:33 pm
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm