ಬ್ರೇಕಿಂಗ್ ನ್ಯೂಸ್
11-11-21 11:02 pm Mangaluru Correspondent ಕ್ರೈಂ
ಮಂಗಳೂರು, ನ.11: ಉಪ್ಪಳ ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದ ನಟೋರಿಯಸ್ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಮತ್ತು ಕಾಸರಗೋಡು ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಅದೇ ಗ್ಯಾಂಗ್ ಸದಸ್ಯ ಜಿಯಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.



ಐದು ವರ್ಷಗಳ ಹಿಂದೆ ಕೋಟೆಕಾರಿನಲ್ಲಿ ನಡೆದಿದ್ದ ಉಪ್ಪಳದ ಗ್ಯಾಂಗ್ ಲೀಡರ್ ಕಾಲಿಯಾ ರಫೀಕ್ ನನ್ನು ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಕೆಲವರನ್ನು ಬಂಧಿಸಿದ್ದರೆ ಪ್ರಮುಖ ಆರೋಪಿಯಾಗಿದ್ದ ಜಿಯಾ ತಪ್ಪಿಸಿಕೊಂಡಿದ್ದ. ಆನಂತರ, ಉಪ್ಪಳ ಮೂಲದ ಡಾನ್ ತಸ್ಲಿಂ ಎಂಬಾತನ್ನೂ ಕೊಲ್ಲಲಾಗಿತ್ತು. ಇದಲ್ಲದೆ, ಬಾಲಿಕಾ ಅಜೀಜ್ ಕೊಲೆ ಪ್ರಕರಣದಲ್ಲಿಯೂ ಮಂಜೇಶ್ವರ ಪೊಲೀಸರಿಗೆ ಜಿಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಟ್ಲ ಬಳಿಯ ಕೇರಳ ಗಡಿಭಾಗ ಕನ್ಯಾನದಲ್ಲಿ ನಡೆದ ಆಸೀಫ್ ಬಾಯಿಕಟ್ಟೆ ಕೊಲೆ ಪ್ರಕರಣದಲ್ಲಿಯೂ ಜಿಯಾ ಆರೋಪಿಯಾಗಿದ್ದ. ಪೈವಳಿಕೆ ನಿವಾಸಿಯಾಗಿರುವ ಜಿಯಾ, ಪ್ರಕರಣದ ಬಳಿಕ ವಿದೇಶಕ್ಕೆ ತೆರಳಿ ಅಲ್ಲಿಯೇ ತಲೆಮರೆಸಿಕೊಂಡಿದ್ದ.
ಕೆಲವು ದಿನಗಳ ಹಿಂದೆ ರಹಸ್ಯವಾಗಿ ತವರಿಗೆ ಮರಳಿದ್ದ ಜಿಯಾ ಗುರುವಾರ ಬೆಳಗ್ಗೆ ವಿದೇಶಕ್ಕೆ ಮರಳುವುದಕ್ಕಾಗಿ ಮುಂಬೈನ ಸಹಾರಾ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಈ ವೇಳೆ, ಕೇರಳದ ಎಟಿಎಸ್ ಪೊಲೀಸ್ ತಂಡ ವಿಷಯ ತಿಳಿದು ಶಸ್ತ್ರ ಸಜ್ಜಿತರಾಗಿ ದಾಳಿ ನಡೆಸಿ ಬಂಧಿಸಿದೆ.
Natorious Rowdy Jiya Murder accused of Kalia Rafiq arrested in Mumbai. Rowdy Sheeter Kalia Rafiq was murdered brutally at Kotekar on February 14 in 2017.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 01:01 pm
HK News Staffer
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm