ಬ್ರೇಕಿಂಗ್ ನ್ಯೂಸ್
04-11-21 07:36 pm Headline Karnataka News Desk ಕ್ರೈಂ
ಮೈಸೂರು, ನ.4: ಇಡೀ ದೇಶ ದೀಪಾವಳಿ ಸಂಭ್ರಮದಲ್ಲಿದ್ದರೆ, ಆ ಮಗು ಕೂಡ ಹಬ್ಬಕ್ಕೆ ಪಟಾಕಿ ತರೋದಿಕ್ಕೆ ಹೋಗಿತ್ತು. ಆದರೆ ಪಟಾಕಿ ತರಲು ಹೊರಟಿದ್ದ ಮಗು ಮನೆಗೆ ಬಂದಿರಲಿಲ್ಲ. ಪಟಾಕಿಗೆಂದು ತೆರಳಿದ್ದ ಬಾಲಕನನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಸಿನಿಮಾ ರೀತಿಯಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಕೊನೆಗೆ ಕೊಂದು ಬಿಸಾಡಿದ್ದಾರೆ.
ದೀಪಾವಳಿ ಗುಂಗಿನಲ್ಲಿದ್ದ ಹುಣಸೂರು ತಾಲೂಕಿನ ಹನಗೋಡಿನಲ್ಲಿ ದುರಂತವೇ ನಡೆದುಹೋಗಿದೆ. ಹನಗೋಡು ನಿವಾಸಿ, ತರಕಾರಿ ಉದ್ಯಮಿ ನಾಗರಾಜ್ ಅವರ ಹತ್ತು ವರ್ಷದ ಪುತ್ರ ಕಾರ್ತಿಕ್ ದುಷ್ಕರ್ಮಿಗಳ ಕೈಗೆ ಸಿಕ್ಕಿ ದುರಂತ ಸಾವು ಕಂಡಿದ್ದಾನೆ. ನಿನ್ನೆ ರಾತ್ರಿ 7.30ರ ಸುಮಾರಿಗೆ ಪೋಷಕರಿಂದ 10-15 ರೂ. ಪಡೆದುಕೊಂಡು ಪಟಾಕಿ ತರಲು ಹೊರಟಿದ್ದ. ಈ ವೇಳೆ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
ರಾತ್ರಿಯೇ ಕಾರ್ತಿಕ್ ತಂದೆ ನಾಗರಾಜ್‌ಗೆ ಕರೆ ಮಾಡಿದ್ದ ಕಿಡ್ನಾಪರ್‌ಗಳು, ನಿನ್ನ ಮಗ ನಮ್ಮೊಟ್ಟಿಗೆ ಇದ್ದಾನೆ. ಮಗ ಜೀವಂತವಾಗಿ ಬೇಕಿದ್ದರೆ 4 ಲಕ್ಷ ರೂ. ತೆಗೆದುಕೊಂಡು ಹುಣಸೂರಿಗೆ ಬಾ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಮತ್ತೆ ಕರೆ ಮಾಡಿದಾಗ ಕಿಡ್ನಾಪರ್ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಬಾಲಕನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಎಎಸ್ಪಿ ಶಿವಕುಮಾರ್ ಮತ್ತು ತಂಡ ರಾತ್ರಿಯೇ ಹುಣಸೂರಿಗೆ ತೆರಳಿ ತಲಾಷ್ ಶುರು ಮಾಡಿತ್ತು. ಮೂರು ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಆದರೆ, ಇಂದು ಮಧ್ಯಾಹ್ನದ ಹೊತ್ತಿಗೆ ಆರೋಪಿ ಸಿಕ್ಕಿದ್ದು ಮಗು ಜೀವಂತ ಇರಲಿಲ್ಲ.
ಪಕ್ಕದ ಊರಿನ ನಿವಾಸಿಯೇ ಆರೋಪಿಯಾಗಿದ್ದು ಹನಗೋಡು ಹೋಬಳಿಯ ದಾಸನಪುರ ನಿವಾಸಿ ಜವರಯ್ಯ ಬಂಧಿತ. ಈತನ ಜೊತೆ ಐದಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜವರಯ್ಯ ಹಣದಾಸೆಗಾಗಿ ಮಗುವನ್ನು ಕಿಡ್ನಾಪ್ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಪೊಲೀಸರ ಭಯದಿಂದ ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Kidnap for ransom 9 year boy murdered in Mysuru. Kidnappers who had demanded a ransom of Rs 4 lakh from his father. Later his body was found near Kunterikere in Hunsur on Thursday. He was found murdered and the body was thrown inside a bush.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm