ಬ್ರೇಕಿಂಗ್ ನ್ಯೂಸ್
01-11-21 10:49 am Mangaluru Correspondent ಕ್ರೈಂ
ಮಂಗಳೂರು, ಅ.31: ಇತ್ತೀಚೆಗೆ ಫಿಲಿಪೈನ್ಸ್ ನಲ್ಲಿ ಬಂಧನಕ್ಕೀಡಾಗಿರುವ ಮುಂಬೈನ ಭೂಗತ ಪಾತಕಿ ಸುರೇಶ ಪೂಜಾರಿ ಸಹಚರನಾಗಿದ್ದು ಮೂಡುಬಿದ್ರೆಯಲ್ಲಿ ತಲೆಮರೆಸಿಕೊಂಡಿದ್ದ ಪ್ರವೀಣ್ ಕುಮಾರ್ ಎಂಬ ವ್ಯಕ್ತಿಯನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿ ಛೋಟಾ ರಾಜನ್, ಆಬಳಿಕ ರವಿ ಪೂಜಾರಿ ಜೊತೆಗೆ ಖಾಸಾ ಬಂಟನಾಗಿ ಗುರುತಿಸಲ್ಪಟ್ಟಿದ್ದ ಸುರೇಶ ಪೂಜಾರಿ ಆನಂತರ ತಾನೇ ಅಂಡರ್ ವರ್ಲ್ಡ್ ಡಾನ್ ಎಂದು ಹೇಳಿ ವಿದೇಶದಲ್ಲಿದ್ದುಕೊಂಡು ಮುಂಬೈನಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ. ಹಲವಾರು ಪ್ರಕರಣಗಳು ಮುಂಬೈ ಮತ್ತು ಥಾಣೆಯಲ್ಲಿ ಈತನ ವಿರುದ್ಧ ದಾಖಲಾಗಿದ್ದವು. ಈತ ತನ್ನ ಸಹಚರರ ಮೂಲಕ ಬೆದರಿಸಿ ಹಣ ಕೀಳುತ್ತಿದ್ದ. ತನ್ನ ಕೃತ್ಯಕ್ಕೆ ಮೂಡುಬಿದ್ರೆಯ ಪ್ರವೀಣ್ ಕುಮಾರ್ ಸೇರಿದಂತೆ ಹಲವರನ್ನು ಬಳಸುತ್ತಿದ್ದ. ಹೊಟೇಲ್ ಉದ್ಯಮಿಯ ಮೇಲೆ ಬೆದರಿಕೆ ಕರೆ ಮಾಡಿ ಹಣ ಕೇಳಿದ್ದ ಪ್ರಕರಣದಲ್ಲಿ ಪ್ರವೀಣ್ ಕುಮಾರ್ ಎರಡನೇ ಆರೋಪಿಯಾಗಿದ್ದ. 2020 ರ ಜನವರಿ 15 ರಿಂದ 22 ರ ಮಧ್ಯೆ ಸುರೇಶ್ ಪೂಜಾರಿ ಹಲವಾರು ಬಾರಿ ಕರೆ ಮಾಡಿ ಉದ್ಯಮಿಗೆ ಬೆದರಿಸಿದ್ದಲ್ಲದೆ, ಮೂರು ಲಕ್ಷ ರೂ. ನೀಡುವಂತೆ ಪೀಡಿಸಿದ್ದ ಬಗ್ಗೆ ಮುಂಬೈನಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ಪ್ರವೀಣ್ ಕುಮಾರ್ ಎಂಬಾತನ ಎಸ್ ಬಿಐ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಸುರೇಶ್ ಪೂಜಾರಿ ಹೇಳಿದ್ದು ಬ್ಯಾಂಕ್ ಖಾತೆಯ ನಂಬರನ್ನೂ ನೀಡಿದ್ದ. ಬಳಿಕ ಭಯಗೊಂಡ ದೂರುದಾರ 49 ಸಾವಿರ ರೂ.ವನ್ನು ಆ ಖಾತೆಗೆ ಹಾಕಿದ್ದ. ಪ್ರಕರಣದ ಬಗ್ಗೆ ಮುಂಬೈ ಸಿಐಡಿ ತಂಡ ತನಿಖೆ ನಡೆಸಿದ್ದು ಆರೋಪಿ ಪ್ರವೀಣ್ ಕುಮಾರ್ ಬಂಧನಕ್ಕೆ ಶೋಧ ನಡೆಸಿತ್ತು. ಆದರೆ ಅಂಡರ್ ವರ್ಲ್ಡ್ ಸಂಪರ್ಕ ಹೊಂದಿದ್ದ ಪ್ರವೀಣ್ ಕುಮಾರ್ ತನ್ನ ಊರು ಮೂಡುಬಿದ್ರೆಯಲ್ಲಿ ಬಂದು ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ.
ಈ ಬಗ್ಗೆ ಮುಂಬೈ ಪೊಲೀಸರು ಮೂಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದು ಬಂಧನ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದರು.
ಇದಲ್ಲದೆ, ಮುಂಬೈ ಪೊಲೀಸರು ಎರಡು ಬಾರಿ ಬಂಧನಕ್ಕಾಗಿ ಮೂಡುಬಿದ್ರೆಗೆ ಬಂದು ಕಾರ್ಯಾಚರಣೆ ನಡೆಸಿದ್ದು ಪ್ರವೀಣ್ ಕುಮಾರ್ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ. ಇಂದು ಪ್ರವೀಣ್ ಕುಮಾರ್ ಮೂಡುಬಿದ್ರೆಯ ಕೋಟೆಬಾಗಿಲಿನ ತನ್ನ ಮನೆಯಲ್ಲಿದ್ದಾನೆಂದು ತಿಳಿದು ಮೂಡುಬಿದ್ರೆ ಠಾಣೆಯ ಇಬ್ಬರು ಪೊಲೀಸ್ ಸಿಬಂದಿ ವಶಕ್ಕೆ ಪಡೆಯಲು ತೆರಳಿದ್ದರು. ಈ ವೇಳೆ, ಪೊಲೀಸರನ್ನು ಕೆಳಕ್ಕೆ ದೂಡಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆನಂತರ ಎಸ್ಐ ಸುದೀಪ್ ನೇತೃತ್ವದಲ್ಲಿ ಪೊಲೀಸರು ಬೆನ್ನಟ್ಟಿ ಹಿಡಿದಿದ್ದು ಬಂಧಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕೇಸು ದಾಖಲಿಸಿದ್ದಾರೆ.
Mangaluru city police on Sunday October 31 arrested a 46-year-old aide with alleged connection to the underworld of Suresh Poojary. The police arrested Praveen Kumar, a resident of Kotebagilu under the limits of Moodbidri police station. According to police sources, they received information that the accused possessed lethal weapons and had connection with the underworld. When the police went to his residence for inquiry, the accused saw the cops and allegedly tried to flee. When the cops tried to detain him, he prevented them from discharging their duty.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm