ಬ್ರೇಕಿಂಗ್ ನ್ಯೂಸ್
31-10-21 12:57 pm Mangaluru Correspondent ಕ್ರೈಂ
ಮಂಗಳೂರು, ಅ.31: ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಎರಡು ತಂಡಗಳು ಬೀದಿ ಕಾಳಗ ನಡೆಸಿದ್ದು ಅಲ್ಲಿ ನಿಲ್ಲಿಸಿದ್ದ ಐದಾರು ವಾಹನಗಳನ್ನು ಜಖಂಗೊಳಿಸಿದ್ದಲ್ಲದೆ ಕಾನೂನು ಕ್ರಮಕ್ಕೆ ಮುಂದಾದ ಪೊಲೀಸರ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬಳ್ಳಾಲ್ ಬಾಗ್ ಫ್ರೆಂಡ್ಸ್ ಮತ್ತು ಬಿರುವೆರ್ ಕುಡ್ಲ ಸಂಘಟನೆಗಳ ಕಾರ್ಯಕರ್ತರು ಹೊಡೆದಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೊದಲಿಗೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಗಲಾಟೆ ಶುರುವಾಗಿದ್ದು ಗುರಾಯಿಸಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಆನಂತರ, ಅಲ್ಲಿಂದ ಮೂರ್ನಾಲ್ಕು ಯುವಕರು ಸೇರಿ ಬಳ್ಳಾಲ್ ಬಾಗ್ ವರೆಗೆ ಬೆನ್ನಟ್ಟಿ ಬಂದಿದ್ದು ಅಲ್ಲಿ ಬೀದಿ ಕಾಳಗ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಬಳ್ಳಾಲ್ ಬಾಗ್ ಸಾಯಿ ನೆಕ್ಸ್ಟ್ ಸೆಂಟರ್ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪುಡಿಗಟ್ಟಿದ್ದಾರೆ.
ಆರು ದ್ವಿಚಕ್ರ ವಾಹನಗಳು ಮತ್ತು ಒಂದು ಕಾರಿನ ಮೇಲೆ ಹಾನಿ ಮಾಡಿದ್ದು ಬ್ಯಾಟ್, ವಿಕೆಟ್, ದೊಣ್ಣೆಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಪುಡಿಗಟ್ಟಿದ್ದಾರೆ. ಎರಡೂ ತಂಡಗಳ ಯುವಕರು ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಮಾಹಿತಿ ತಿಳಿದ ಬರ್ಕೆ ಪೊಲೀಸರು ಬಂದಿದ್ದು ಪರಿಚಿತ ಯುವಕರೇ ಆಗಿದ್ದರಿಂದ ಸಮಾಧಾನ ಪಡಿಸಿದ್ದಾರೆ. ಆದರೆ, ಪೊಲೀಸರ ಮಾತು ಕೇಳದ ಅವರ ಮೇಲೇ ಕೈಮಾಡಿದ್ದಾರೆ.
ಬರ್ಕೆ ಮಹಿಳಾ ಎಸ್ಐ ಶೋಭಾ ಮೇಲೆ ಕೈಮಾಡಿದ್ದು ಅವರ ಕೈಯಲ್ಲಿದ್ದ ವಾಕಿ ಟಾಕಿಯನ್ನು ನೆಲಕ್ಕೆ ಬಿಸಾಡಿದ್ದಾರೆ. ಇತರ ಪೊಲೀಸರ ಮೇಲೂ ಕೈಮಾಡಿದ್ದಾರೆ. ಎರಡು ತಂಡಗಳ ವೈಯಕ್ತಿಕ ದ್ವೇಷದಲ್ಲಿ ಪೊಲೀಸರ ಮೇಲೆ ಕೈಮಾಡಿದ್ದು ಆನಂತರ ಹೆಚ್ಚಿನ ಪೊಲೀಸರು ಬಂದು ಆರು ಮಂದಿಯನ್ನು ಸ್ಥಳದಿಂದ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಎಸ್ಐ ಮೇಲೆ ಕೈಮಾಡಿದ ಧೀರಜ್ ಶೆಟ್ಟಿ, ರಕ್ಷಿತ್, ರೋಹಿತ್ ಶೆಟ್ಟಿ, ಹರ್ಷಿತ್, ಕೀರ್ತಿರಾಜ್, ವಿವೇಕ್, ರಾಹುಲ್ ಎಂಬವರನ್ನು ಬಂಧಿಸಿದ್ದಾರೆ. ಇತರರು ಅಲ್ಲಿಂದ ಓಡಿ ತಪ್ಪಿಸಿದ್ದಾರೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಎಸ್ಐ ಶೋಭಾ ದೂರು ನೀಡಿದ್ದು ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ.
Seven youths have been arrested after two groups clash at ballalbagh late night on Saturday October 30. It is said that late on Saturday night, two groups of youth engaged in fight as a result of which, one Seven vehicles were damaged. Police commissioner N Shashi Kumar informed that police have up take suo moto cognizance of the incident and arrested seven persons.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm