ಬ್ರೇಕಿಂಗ್ ನ್ಯೂಸ್
29-10-21 11:17 am Mangaluru Correspondent ಕ್ರೈಂ
ಉಳ್ಳಾಲ, ಅ.29: ಮಧ್ಯರಾತ್ರಿಯಲ್ಲಿ ತೊಕ್ಕೊಟ್ಟಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಮುಂದೆ ನಿಲ್ಲಿಸಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರ ಬೈಕನ್ನು ಕಳವಿಗೆ ಯತ್ನಿಸಿದವನಿಗೆ ಸ್ಥಳೀಯರು ಸೇರಿ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಬೈಕ್ ಕಳವಿಗೆತ್ನಿಸಿದ ಯುವಕ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ನಿನ್ನೆ ರಾತ್ರಿ ಅದೇ ಕಟ್ಟಡದಲ್ಲಿ ಮುತ್ತೂಟ್ ಫೈನಾನ್ಸ್ ಕಚೇರಿಯ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ತನ್ನ (ಪಲ್ಸರ್ NS 200) ಬೈಕನ್ನ ನಿಲ್ಲಿಸಿದ್ದರು. ಕಟ್ಟಡದ ಮುಂದೆ ನಿಲ್ಲಿಸಿದ್ದ ಬೈಕನ್ನ ನೌಫಾಲ್ ಕಳವಿಗೆತ್ನಿಸುತ್ತಿರುವುದನ್ನ ಮೇಲಂತಸ್ತಿನಲ್ಲಿ ಗಸ್ತಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಮನಿಸಿದ್ದು ಕೂಡಲೇ ಕೆಳಗಡೆ ಓಡಿ ಬಂದಿದ್ದಾರೆ.
ಆರೋಪಿ ನೌಫಾಲ್ ನಿಂದ ಬೈಕ್ ಕಳವು ಸಾಧ್ಯವಾಗದೆ ಕೊನೆಗೆ ಬೈಕಿಗೆ ಅಳವಡಿಸಿದ್ದ ದುಬಾರಿ ಎರಡು ಫ್ಯಾಶನ್ ಮಿರರ್ ಗಳನ್ನ ಕದ್ದು ಓಡಲು ಮುಂದಾಗಿದ್ದಾನೆ. ತಕ್ಷಣ ಹತ್ತಿರ ತಲುಪಿ ಬೈಕ್ ಕಳವಿಗೆತ್ನಿಸಿದ ನೌಫಾಲ್ ಗೆ ಸೆಕ್ಯೂರಿಟಿ ಗಾರ್ಡ್ ತನ್ನ ಹೆಲ್ಮೆಟಲ್ಲೇ ಎರಡೇಟು ಹೊಡೆದಿದ್ದು, ಸ್ಥಳದಲ್ಲಿ ಜಮಾಯಿಸಿದ ಜನರೂ ಸೇರಿ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಆರೋಪಿ ನೌಫಾಲನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೈಕ್ ಕಳವಿಗೆ ಯತ್ನಿಸಿದ್ದ ನೌಫಾಲ್ ಬಂದಿದ್ದ ಬೈಕ್ ಯಮಹ FZ ಆಗಿದ್ದು ಅದಕ್ಕೆ ಅಳವಡಿಸಿರುವ ನಂಬರ್ ಪ್ಲೇಟ್ ನೋಂದಣಿ ಸಂಖ್ಯೆ ಮಾತ್ರ(KL-14 T 5662) ಹೀರೊ ಮ್ಯಾಸ್ಟ್ರೋ ಕಂಪನಿಯದ್ದಾಗಿದ್ದು, ರಾಜೇಶ್ ಎಂ. ಎಂಬವರಿಗೆ ಸೇರಿದ್ದಾಗಿದೆ. ಅಷ್ಟಲ್ಲದೆ ಬೈಕಲ್ಲಿ ಎರಡು ಹೆಲ್ಮೆಟ್ ಗಳಿದ್ದು ದೂರದಲ್ಲಿದ್ದ ಇನ್ನೋರ್ವ ಕಳ್ಳ ತಪ್ಪಿಸಿಕೊಂಡಿರುವ ಸಾಧ್ಯತೆ ಇದೆ. ತೊಕ್ಕೊಟ್ಟು, ಕಾಪಿಕಾಡು, ಕೊಲ್ಯ ಪರಿಸರದಲ್ಲಿ ಅನೇಕ ಮನೆ, ಕಮರ್ಷಿಯಲ್ ಕಾಂಪ್ಲೆಕ್ಸ್ ಗಳ ಮುಂಭಾಗದಿಂದ ಬೈಕ್ ಕಳ್ಳತನ ನಡೆದಿದ್ದು ಇದರ ಹಿಂದೆ ನೌಫಾಲ್ ಪಾತ್ರ ಇದೆಯೇ ಎಂದು ಉಳ್ಳಾಲ ಪೊಲೀಸರು ತನಿಖೆ ನಡೆಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Mangalore Bike thief caught and thrashed by security Gaurd and localites at Thokottu and have handed over him to the Ullal Police.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm