ಬ್ರೇಕಿಂಗ್ ನ್ಯೂಸ್
27-10-21 03:03 pm Mangalore Reporter ಕ್ರೈಂ
ಬಂಟ್ವಾಳ, ಅ.27: ಬಿಜೆಪಿ ಕಾರ್ಯಕರ್ತನ ಮೇಲೆ ಅದೇ ಪಕ್ಷದ ಕಾರ್ಯಕರ್ತರು ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನಲ್ಲಿ ನಡೆದಿದೆ. ಬಡಗಬೆಳ್ಳೂರು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಪ್ರಕಾಶ್ ಬೆಳ್ಳೂರು ಮೇಲೆ ಆತನ ಮನೆಗೇ ನುಗ್ಗಿ ಹಲ್ಲೆ ನಡೆಸಿ, ತಲವಾರು ದಾಳಿ ನಡೆಸಲಾಗಿದೆ.
ಕಿವಿಯ ಭಾಗಕ್ಕೆ ತಲವಾರು ಏಟು ಬಿದ್ದು ಗಾಯಗೊಂಡಿರುವ ಪ್ರಕಾಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಪರಿಸರದ ನಿತಿನ್, ನಿಶಾಂತ್ ಮತ್ತಿತರ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ಇವರ ನಡುವೆ, ಹಣದ ವಿಚಾರದಲ್ಲಿ ಗಲಾಟೆ ನಡೆದಿತ್ತು. ವರ್ಷದ ಹಿಂದೆ ನಿತಿನ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿತ್ತು. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲೆಂದು ಸ್ಥಳೀಯ ಪುಢಾರಿ ಆಗಿರುವ ಪ್ರಕಾಶ್ ಬೆಳ್ಳೂರುಗೆ ನಿತಿನ್ 25 ಸಾವಿರ ರೂ. ಹಣವನ್ನು ನೀಡಿದ್ದಾನೆ ಎನ್ನಲಾಗಿದೆ.
ಇದೇ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ವಾಗ್ವಾದ, ಫೇಸ್ಬುಕ್ ನಲ್ಲೂ ಮುಂದುವರಿದಿತ್ತು. ಪ್ರಕಾಶ್ ಬೆಳ್ಳೂರು ತಾನು ಹಣ ಪಡೆದಿಲ್ಲ. ಬೇಕಾದರೆ ಪಣೋಲಿಬೈಲಿಗೆ ಬಂದು ಪ್ರಮಾಣ ಮಾಡುತ್ತೇನೆ. ಹಣ ಕೊಟ್ಟಿದ್ದಾರೆ ಎಂದವರು ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಫೇಸ್ಬುಕ್ ನಲ್ಲಿ ಸವಾಲು ಹಾಕಿದ್ದಾರೆ. ಅದೇ ಪೋಸ್ಟ್ ನಲ್ಲಿ ನಿಶಾಂತ್ ಮತ್ತು ಆತನ ಗೆಳೆಯರು ಹೀನಾಯವಾಗಿ ನಿಂದಿಸಿ ಪ್ರಕಾಶ್ ಬಗ್ಗೆ ಬರೆದಿದ್ದರು. ಇದೇ ವಿಚಾರ ಮಾತಿಗೆ ಮಾತು ಬೆಳೆದಿದ್ದು, ನಿತಿನ್, ನಿಶಾಂತ್ ಮತ್ತಿತರರು ಮಂಗಳವಾರ ಸಂಜೆ ಪ್ರಕಾಶ್ ಬೆಳ್ಳೂರು ಮನೆಗೆ ನುಗ್ಗಿ ತಲವಾರು ದಾಳಿ ನಡೆಸಿದ್ದಾರೆ.
ಆದರೆ, ಈ ವೇಳೆ ಪ್ರಕಾಶ್ ತಲವಾರು ಕಡಿತದಿಂದ ತಪ್ಪಿಸಿಕೊಂಡಿದ್ದು ಕಿವಿಗೆ ಮಾತ್ರ ಗಾಯವಾಗಿತ್ತು. ಆನಂತರ, ನೆಲಕ್ಕೆ ಹಾಕಿ ತುಳಿದು ಹಲ್ಲೆ ನಡೆಸಿದ್ದಾರೆ. ಬಳಿಕ ಪ್ರಕಾಶ್ ಸಂಬಂಧಿಕರು ಬಂದು ಸಮಾಧಾನ ಹೇಳಿ, ಕಡಿಯಲು ಬಂದವರನ್ನು ಕಳಿಸಿಕೊಟ್ಟಿದ್ದರು. ಘಟನೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.
Mangalore Bjp member attacked by BJP members in Bantwal over financial dispute. Prakash is said to be admitted in the hospital and is said to be out of danger.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm