ಬ್ರೇಕಿಂಗ್ ನ್ಯೂಸ್
26-10-21 06:07 pm Headline Karnataka News Network ಕ್ರೈಂ
ಮಡಿಕೇರಿ, ಅ.26 : ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಬಳ್ಳಾರಿ ಮೂಲದ ಯುವತಿ ಹೋಂಸ್ಟೇಯಲ್ಲಿ ಕುಸಿದು ಬಿದ್ದು ಸಾವನಪ್ಪಿದ ಪ್ರಕರಣದಲ್ಲಿ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ ನಿವಾಸಿ ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿಘ್ನೇಶ್ವರಿ ಈಶ್ವರನ್(24) ಮೃತ ಯುವತಿ. ಮಡಿಕೇರಿಯ ಅಗ್ನಿಶಾಮಕ ದಳದ ಕಚೇರಿ ಬಳಿಯ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಬಾತ್ ರೂಮಿನಲ್ಲಿದ್ದಾಗ ಕುಸಿದು ಬಿದ್ದು ಘಟನೆ ಸಂಭವಿಸಿದ್ದರಿಂದ ಗ್ಯಾಸ್ ಗೀಸರ್ ನಿಂದ ಕಾರ್ಬನ್ ಸೋರಿಕೆಯಾಗಿ ಸಾವು ಸಂಭವಿಸಿರಬಹುದು ಎನ್ನಲಾಗುತ್ತಿದೆ.
ಬಳ್ಳಾರಿ ಮೂಲದ ಯುವತಿ ವಿಘ್ನೇಶ್ವರಿ ಈಶ್ವರನ್ ಎಂಬಿಎ ಪೂರೈಸಿದ್ದು, 9 ತಿಂಗಳಿಂದ ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ‘ವರ್ಕ್ ಫ್ರಂ ಹೋಂ’ ಇದ್ದುದರಿಂದ ಮನೆಯಲ್ಲಿದ್ದೇ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ವಿಘ್ನೇಶ್ವರಿ ಮುಂಬೈನಿಂದ ಹೊರಟು ಬೆಂಗಳೂರಿಗೆ ಆಗಮಿಸಿದ್ದು ಅಲ್ಲಿ ಕೆಲಸದಲ್ಲಿದ್ದ ನಾಲ್ವರು ಗೆಳತಿಯರ ಜೊತೆ ಶನಿವಾರ ಮಡಿಕೇರಿಗೆ ತೆರಳಿದ್ದರು. ಮಡಿಕೇರಿಯಲ್ಲಿ ಉಳಿದುಕೊಳ್ಳಲು ಹೋಂ ಸ್ಟೇಯನ್ನು ಆನ್‍ಲೈನ್ ಮೂಲಕ ಬುಕ್ ಮಾಡಿದ್ದರು. ನಗರಕ್ಕೆ ಆಗಮಿಸಿದ 5 ಮಂದಿ ಯುವತಿಯರು ಹೋಂ ಸ್ಟೇಯಲ್ಲಿ ತಂಗಿದ್ದರಲ್ಲದೆ, ಶನಿವಾರ ಮತ್ತು ರವಿವಾರ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಯುವತಿಯರ ಬಳಗ ಸೋಮವಾರ ಬೆಳಗ್ಗೆ ಹೋಂಸ್ಟೇಯನ್ನು ಖಾಲಿ ಮಾಡಿ ಜೀಪ್‍ನಲ್ಲಿ ಮಾಂದಲ್ ಪಟ್ಟಿಗೆ ತೆರಳುವ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ.
ಆದರೆ, ಭಾನುವಾರ ರಾತ್ರಿ 9 ಗಂಟೆಯ ವೇಳೆಗೆ ವಿಘ್ನೇಶ್ವರಿ ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ್ದ ವೇಳೆ ಘಟನೆ ನಡೆದಿತ್ತು. ಸ್ನಾನಕ್ಕೆ ಹೋಗಿ ಹಲವು ಸಮಯ ಕಳೆದರೂ ಹೊರಬರದೇ ಇದ್ದರಿಂದ ಬಾಗಿಲು ತೆರದು ನೋಡಿದಾಗ ವಿಘ್ನೇಶ್ವರಿ ಕುಸಿದು ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಆಕೆಯನ್ನು ವಾಹನದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದರು.
ನಗರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಮೃತ ಯುವತಿಯ ತಂದೆ ಈಶ್ವರನ್ ಸೋಮವಾರ ಬೆಳಗ್ಗೆ ಮಡಿಕೇರಿಗೆ ಆಗಮಿಸಿದ್ದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಮಗಳು ದೈಹಿಕವಾಗಿ ಆರೋಗ್ಯದಿಂದಿದ್ದು, ಯಾವುದೇ ಸಮಸ್ಯೆ ಆಕೆಗೆ ಇರಲಿಲ್ಲ. ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
Girl from Bellary found dead in Lodge at Madikeri. The deceased has been identified as Vigneshwari (24).
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm