ಬ್ರೇಕಿಂಗ್ ನ್ಯೂಸ್
24-10-21 02:24 pm Headline Karnataka News Network ಕ್ರೈಂ
ಹಾವೇರಿ, ಅ.24 : ನಿಧಿ ಆಸೆಗಾಗಿ ವೈದ್ಯನೊಬ್ಬ ಪತ್ನಿಯನ್ನೇ ಕೊಲೆ ಮಾಡಿದ್ದ ಪ್ರಕರಣವನ್ನು 9 ತಿಂಗಳ ಬಳಿಕ ಹೊನ್ನಾಳಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಚನ್ನೇಶಪ್ಪನಿಗೆ 18 ವರ್ಷಗಳ ಹಿಂದೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಚಂದ್ರಪ್ಪ ಎಂಬುವರ ಮಗಳು ಶಿಲ್ಪಾ ಅವರನ್ನು ಮದುವೆ ಮಾಡಲಾಗಿತ್ತು. ಮದುವೆ ವೇಳೆ 700 ಗ್ರಾಂ ಬಂಗಾರ, 1 ಕೆ.ಜಿ. ಬೆಳ್ಳಿ, 7 ಲಕ್ಷ ನಗದು ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ದರು.
ವೃತ್ತಿಯಲ್ಲಿ ವೈದ್ಯನಾಗಿದ್ದರೂ ಚನ್ನೇಶಪ್ಪನಿಗೆ ವಾಮಾಚಾರ, ಮಾಟ, ಮಂತ್ರದಲ್ಲಿ ನಂಬಿಕೆ ಇತ್ತು. ಮನೆಗೆ ಪೂಜಾರಿಗಳನ್ನು ಕರೆಸಿ ಪೂಜೆ ಮಾಡಿಸುತ್ತಿದ್ದ. ನಿಧಿ ಆಸೆಗಾಗಿ ಕೆಲ ಪೂಜಾರಿಗಳ ಮಾತು ಕೇಳಿ, ಫೆ.11ರಂದು ಪತ್ನಿಗೆ ಹೈಡೋಸ್ ಚುಚ್ಚುಮದ್ದು ನೀಡಿ ಕೊಲೆ ಮಾಡಿದ್ದ. ಇದೀಗ ಎಫ್‌ಎಸ್‌ಎಲ್ ವರದಿ ಬಂದಿದ್ದು, ಆರೋಪ ಸಾಬೀತಾದ ಹಿನ್ನೆಲೆ ನ್ಯಾಮತಿ ಪೊಲೀಸರು ಆರೋಪಿಯನ್ನು ಬಂಧಿಸಿ ದಾವಣಗೆರೆ ಕಾರಾಗೃಹದಲ್ಲಿರಿಸಿ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.
ಬಂಧಿತ ಆರೋಪಿ ವೈದ್ಯ ಡಾ.ಚನ್ನೇಶಪ್ಪ 38 ಎಕರೆ ಜಮೀನು ಹೊಂದಿದ್ದ. ಶ್ರೀಮಂತನಾಗಿದ್ದ ಆತ ಕುಡಿತ, ಕ್ಯಾಸಿನೋ, ಜೂಜಾಟದ ಚಟಕ್ಕೆ ಬಿದ್ದು ಹಣ ಕಳಕೊಂಡಿದ್ದ. ಪದೇ ಪದೆ ಪತ್ನಿ ಶಿಲ್ಪಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ನಿಧಿ ಸಿಗುತ್ತದೆಂಬ ಆಸೆಯಲ್ಲಿ ರಾತ್ರೋರಾತ್ರಿ ತನ್ನ ಮನೆಯಲ್ಲೇ ಪೂಜೆ ಮಾಡಿಸುತ್ತಿದ್ದ. ಕೆಲ ಪೂಜಾರಿಗಳು ನಿಧಿಗಾಗಿ ಬಲಿ ಬೇಕಾಗಿರುವುದಾಗಿ ಹೇಳಿದ್ದರಿಂದ, ಪತ್ನಿ ಶಿಲ್ಪಾಳನ್ನೇ ಬಲಿ ನೀಡಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.
Haveri Husband desires for Tressure and wealth kills his wife witchcraft suspected. Cops of arrested the accused husband after nine month of crime.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm