ಬ್ರೇಕಿಂಗ್ ನ್ಯೂಸ್
19-10-21 06:50 pm Mangaluru Correspondent ಕ್ರೈಂ
ಉಳ್ಳಾಲ, ಅ.19: ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಪದೇ ಪದೇ ಪೊಲೀಸ್ ದೂರು ನೀಡುತ್ತಿದ್ದ ಕರಾಟೆ ಮಾಸ್ಟರ್ ಓರ್ವರನ್ನ ಹಾಡು ಹಗಲೇ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಇರಿದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಉಳಿಯ ನಿವಾಸಿ ಹರೀಶ್ ಗಾಣಿಗ(42) ಇರಿತಕ್ಕೊಳಗಾದ ವ್ಯಕ್ತಿ. ಉಳ್ಳಾಲ ವೀರಭದ್ರ ದೇವಸ್ಥಾನದ ಬಳಿಯಲ್ಲಿರುವ ಹರೀಶ್ ಅವರ ಗ್ಯಾಸ್ ಅಕ್ಸೆಸರೀಸ್ ಅಂಗಡಿಯಲ್ಲಿ ಇರಿತ ನಡೆದಿದೆ.
ಸ್ಥಳೀಯ ನಿವಾಸಿ ಗಾಂಜಾ ವ್ಯಸನಿ ವಿಶಾಲ್ ಯಾನೆ ವಿಕಾಸ್ ಎಂಬಾತ ಇಂದು ಸಂಜೆ ಹರೀಶ್ ಅವರ ಅಂಗಡಿಗೆ ನುಗ್ಗಿ ಸೀಯಾಳ ಕೆತ್ತುವ ಕತ್ತಿ ಮತ್ತು ಹರಿತ ಚಾಕುವಿನಿಂದ ಇರಿದಿದ್ದಾನೆಂದು ಆರೋಪಿಸಲಾಗಿದೆ. ಗಾಯಾಳು ಹರೀಶ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



ಪೊಲೀಸ್ ದೂರು ಕೊಟ್ಟಿದ್ದಕ್ಕೇ ಪ್ರತೀಕಾರ;
ಉಳ್ಳಾಲದ ಉಳಿಯದಲ್ಲಿ ವಿಶಾಲ್ ಸೇರಿದಂತೆ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿ ಕುಕೃತ್ಯಗಳನ್ನ ನಡೆಸುತ್ತಿದ್ದು ಈ ಬಗ್ಗೆ ಉಳಿಯ ನಿವಾಸಿ ಕರಾಟೆ ಮಾಸ್ಟರ್ ಆಗಿರುವ ಹರೀಶ್ ಅವರು ಎರಡು ಬಾರಿ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಜೀವ ಬೆದರಿಕೆ ಇದೆ ಎಂದೂ ಪೊಲೀಸರಿಗೆ ತಿಳಿಸಿದ್ದರು. ಆದರೆ ಪೊಲೀಸರು ಗಾಂಜಾ ಮಾಫಿಯಾದ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಒಂದು ತಿಂಗಳ ಹಿಂದೆ ಗಾಂಜಾ ವ್ಯಸನಿ ವಿಶಾಲ್ ವಿರುದ್ಧ ಹರೀಶ್ ಅವರು ಉಳ್ಳಾಲ ಠಾಣೆಗೆ ದೂರು ನೀಡಿದ್ದು ಅಸಡ್ಡೆ ತೋರಿದ ಪೊಲೀಸರು ಇಂದು ಬೆಳಗ್ಗೆ ವಿಶಾಲನ್ನ ಠಾಣೆಗೆ ವಿಚಾರಣೆಗೆ ಕರೆಸಿದ್ದರು. ಅಷ್ಟಕ್ಕೇ ವ್ಯಘ್ರನಾದ ವಿಶಾಲ್ ಇಂದು ಸಂಜೆ ಒಬ್ಬನೇ ಎರಡು ಮಾರಕಾಸ್ತ್ರಗಳನ್ನ ಹಿಡಿದು ಹರೀಶ್ ಅವರ ಅಂಗಡಿಗೆ ನುಗ್ಗಿ ಇರಿದಿದ್ದಾನೆ.
ಉಳ್ಳಾಲದಲ್ಲಿ ಗಾಂಜಾ ಮಾಫಿಯಾ ವ್ಯಾಪಕವಾಗಿದ್ದು ಪೊಲೀಸರು ವ್ಯಸನಿಗಳ ವಿರುದ್ಧ ದೂರು ನೀಡಿ ಅಂತ ಒಂದು ಕಡೆ ಹೇಳುತ್ತಿದ್ದರೆ, ದೂರು ಕೊಟ್ಟವರು ಹೀನಾಯವಾಗಿ ಇರಿತಕ್ಕೊಳಗಾಗುತ್ತಿದ್ದು ಪೊಲೀಸರ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.
Mangalore Karate Master Stabbed by Drug addict youth at his shop in Ullal. Harish Ganiga is the person being stabbed. Recently Harish had lodged a complaint against Drug addicts in the locality to Ullal Police but the cops who failed to take action had to witness a stabbing incident. Drug addict Vishal is the youth who came to the shop of Harish and stabbed him using sharp weapons.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 09:42 pm
HK News Desk
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm