ಬ್ರೇಕಿಂಗ್ ನ್ಯೂಸ್
18-10-21 10:09 pm Bengaluru Correspondent ಕ್ರೈಂ
ಬೆಂಗಳೂರು, ಅ.18: ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಅಕ್ಕನ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಹಿಡಿದು ಆಕೆಯ ತಮ್ಮನೇ ಇನ್ನಿತರ ಗೆಳೆಯರೊಂದಿಗೆ ಸೇರಿ ಹೊಡೆದು ಸಾಯಿಸಿದ್ದಲ್ಲದೇ, ಆತನ ಶವವನ್ನು ಹೊತ್ತುಕೊಂಡೇ ಪೊಲೀಸ್ ಠಾಣೆಗೆ ತಂದು ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 24 ವರ್ಷದ ಭಾಸ್ಕರ್ ಎಂಬಾತನೇ ಕೊಲೆಯಾದ ಯುವಕ. ಆಟೋ ಚಾಲಕ ಮುನಿರಾಜು ಮತ್ತು ಆತನ ಸಹಚರರು ಸೇರಿ ಕೊಲೆ ನಡೆಸಿದವರು. ಮುನಿರಾಜು ಅಕ್ಕನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ನಡುವೆ, ಆಕೆಗೆ ಭಾಸ್ಕರ್ ಎಂಬಾತ ಪರಿಚಯವಾಗಿ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ಗಂಡ – ಹೆಂಡತಿ ಮಧ್ಯೆ ಜಗಳಕ್ಕೆ ಕಾರಣವಾಗಿತ್ತು. 15 ದಿನಗಳ ಹಿಂದೆ ಜಗಳ ನಡೆದು ಆಕೆ ಗಂಡನನ್ನು ಬಿಟ್ಟು ಬಂದು ಮಕ್ಕಳ ಜೊತೆ ನಾಗರಭಾವಿಯ ಚಂದ್ರಶೇಖರ್ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು.
ಈ ಬಗ್ಗೆ ತಿಳಿದ ಭಾಸ್ಕರ್, ತಾನು ಬೇರೆ ಕಡೆ ಬಾಡಿಗೆ ಮನೆ ನೋಡುತ್ತೇನೆ. ಮಕ್ಕಳು ಮತ್ತು ನಿನ್ನನ್ನು ಸಾಕುವುದಾಗಿ ಹೇಳಿ ಬೇರೆ ಕಡೆಗೆ ಕರೆದೊಯ್ಯಲು ಪ್ಲಾನ್ ಹಾಕಿದ್ದ. ಆದರೆ, ಭಾಸ್ಕರ್ ಜೊತೆಗೆ ತೆರಳುವುದಕ್ಕೆ ಆಕೆಯ ಮಕ್ಕಳು ನಿರಾಕರಿಸಿದ್ದಾರೆ. ಒಬ್ಬ ಮಗ ಇದನ್ನು ಮಾವ ಮಂಜುನಾಥನಿಗೆ ತಿಳಿಸಿದ್ದಾನೆ. ಆನಂತರ, ಮಹಿಳೆಯನ್ನು ಮನವೊಲಿಸಿದ ಭಾಸ್ಕರ ಆಟೋದಲ್ಲಿ ಮಕ್ಕಳ ಜೊತೆಗೆ ಬೇರೆ ಕಡೆಗೆ ಕರೆದೊಯ್ಯುತ್ತಿದ್ದಾಗಲೇ ಮಂಜುನಾಥ್ ಅಡ್ಡಹಾಕಿದ್ದಾನೆ. ಮಂಜುನಾಥ್ ತನ್ನ ಇತರ ಮೂವರು ಗೆಳೆಯರೊಂದಿಗೆ ಆಟೋವನ್ನು ಅಡ್ಡಹಾಕಿ ಭಾಸ್ಕರ್ ನನ್ನು ಬೇರೆ ಕಡೆಗೆ ಹೊತ್ತೊಯ್ದಿದ್ದಾರೆ.
ನಾಗರಭಾವಿಯಿಂದ ಸುಂಕದಕಟ್ಟೆ ಬಳಿಯ ಕಬ್ಬಿಹಳ್ಳ ಎಂಬಲ್ಲಿಗೆ ಭಾಸ್ಕರನನ್ನು ಕರೆದೊಯ್ದು ಅಲ್ಲಿನ ದೇವಸ್ಥಾನದ ಬಳಿ ಇರಿಸಿ ಕಪಾಳಮೋಕ್ಷ ಮಾಡಿದ್ದಾರೆ. ತಲೆಗೆ ಬಿದ್ದ ಏಟಿನಿಂದಾಗಿ ಭಾಸ್ಕರ್ ನೆಲಕ್ಕುರಳಿದ್ದು ಇದನ್ನು ನೋಡಿದ ಗ್ಯಾಂಗ್ ಸದಸ್ಯರು ಈತ ಏನೋ ನಾಟಕ ಮಾಡುತ್ತಿದ್ದಾನೆ ಅಂದ್ಕೊಂಡಿದ್ದಾರೆ. ಆದರೆ, ನೆಲಕ್ಕೆ ಬಿದ್ದ ವ್ಯಕ್ತಿ ಮೇಲೇಳದೇ ಇರುವುದನ್ನು ನೋಡಿದಾಗ ಆತ ಅಲ್ಲಿಯೇ ಸಾವು ಕಂಡಿದ್ದು ಕಂಡುಬಂದಿದೆ. ಗಾಬರಿಗೊಂಡ ಮಂಜುನಾಥ್, ಬಳಿಕ ಭಾಸ್ಕರ್ ತಾಯಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಲದೆ, ಭಾಸ್ಕರ್ ಶವವನ್ನು ಅನ್ನಪೂರ್ಣೇಶ್ವರಿ ಠಾಣೆಗೆ ತಾನೇ ಹೊತ್ತು ತಂದು ನಿಜ ವಿಚಾರ ಹೇಳಿ ಪೊಲೀಸರಿಗೆ ಶರಣಾಗಿದ್ದಾನೆ. ಆತನ ಜೊತೆಗಿದ್ದ ಮಾರುತಿ(22), ನಾಗೇಶ್ (22), ಪ್ರಶಾಂತ್ (20) ಎಂಬವರು ಕೂಡ ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
A 24-year-old garment factory supervisor was tortured and beaten to death by a gang of four over an extra marital affair,who later carried his dead body in an autorickshaw to the police station to surrender in Annapoorneshwari nagara police station on Saturday night . The deceased a victim has been identified as, Bhaskar,24 year old a garment factory supervisor.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm