ಬ್ರೇಕಿಂಗ್ ನ್ಯೂಸ್
17-10-21 03:53 pm Headline Karnataka News Network ಕ್ರೈಂ
ರಾಮನಗರ, ಅ.17: ನಗರ ವಾಸದ ಗೀಳಿಗೆ ಬಿದ್ದ ಪತ್ನಿ ಹಾಗೂ ಪತಿಯ ನಡುವಿನ ಜಗಳಕ್ಕೆ ಎರಡು ಜೀವಗಳು ಬಲಿಯಾಗಿವೆ. ಪಟ್ಟಣ ವಾಸದ ಆಸೆಗೆ ಬಿದ್ದ ಪತ್ನಿಯನ್ನು ಕೊಂದು ಪತಿ ತಾನೂ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನ ಹೊಸಹಳ್ಳಿ ನಿವಾಸಿ ದೇಸೀಗೌಡ (38), ಪತ್ನಿ ಇಂದಿರಮ್ಮ (31) ಳನ್ನು ಹತ್ಯೆಗೈದು ಬಳಿಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಊರಿನಲ್ಲಿ ಅಂಗಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ ನಡುವೆ ಬೆಂಗಳೂರಿಗೆ ಹೋಗುವ ಕುರಿತು ಜಗಳ ನಡೆಯುತ್ತಿತ್ತು.
ಇಂದಿರಮ್ಮ ಮತ್ತು ದೇಸೀಗೌಡ ಮಗನೊಂದಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್‌ನಿಂದಾಗಿ ದಂಪತಿ ಬೆಂಗಳೂರು ಬಿಟ್ಟು ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು.
ಇತ್ತೀಚೆಗೆ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದಿದ್ದು, ನಗರ ವಾಸದ ಗೀಳಿಗೆ ಬಿದ್ದ ಪತ್ನಿ ಇಂದಿರಾ ಪದೇ ಪದೇ ಗಂಡನನ್ನು ಮತ್ತೆ ಬೆಂಗಳೂರಿಗೆ ಹೋಗುವಂತೆ ಪೀಡಿಸುತ್ತಿದ್ದಳು. ಗ್ರಾಮದಲ್ಲಿ ಚಿಲ್ಲರೆ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಗಂಡನನ್ನು ಮೂಲೆಗುಂಪು ಮಾಡಿ ಇಂದಿರಾ ತಾನೇ ಸ್ವತಃ ಅಂಗಡಿಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು.
ಕೆಲವು ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಹೋಗೋಣ ಎಂದು ಕ್ಯಾತೆ ತೆಗೆದಿದ್ದ ಪತ್ನಿಯೊಂದಿಗೆ ದೇಸೀಗೌಡ ಜಗಳ ಮಾಡಿಕೊಂಡಿದ್ದ. ಗ್ರಾಮದ ಹಿರಿಯರು ರಾಜಿ ಪಂಚಾಯಿತಿ ಮಾಡಿಸಿದ್ದರು. ಇದರ ಮಧ್ಯೆ ಹೆಂಡತಿಯ ಉಪಟಳದಿಂದ ಬೇಸತ್ತಿದ್ದ ದೇಸೀಗೌಡ ಇಬ್ಬರೂ ಜೀವಂತ ಇರಬಾರದು ಎಂಬ ನಿಧಾರಕ್ಕೆ ಬಂದು ತನ್ನ ಪತ್ನಿಯನ್ನು ಚೂರಿಯಿಂದ ಕತ್ತು ಕೊಯ್ದು ಕೊಲೆಗೈದು, ತಾನು ಊರ ಹೊರಗಿನ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿದ್ದಾನೆ.
ಕ್ಷುಲ್ಲಕ ವಿಚಾರ ವಿಕೋಪಕ್ಕೆ ತಿರುಗಿ ದಂಪತಿ ಜೀವ ಕಳೆದುಕೊಂಡ ದೃಶ್ಯ ಗ್ರಾಮಸ್ಥರ ಮನಕಲಕುವಂತಿತ್ತು. ಕೋಡಿಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
Ramanagara Husband Kills Wife and Commits Suicide in a matter of going to Bangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm