ಬ್ರೇಕಿಂಗ್ ನ್ಯೂಸ್
15-10-21 09:20 pm Headline Karnataka News Network ಕ್ರೈಂ
ಲಕ್ನೋ, ಅ.15: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷನೇ ತನ್ನ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಹಣಕ್ಕಾಗಿ ರಾಜಕೀಯ ನಾಯಕರ ಜೊತೆಗೆ ಸಹಕರಿಸುವಂತೆ ಬಲವಂತ ಪಡಿಸಿದ ಘಟನೆ ಬೆಳಕಿಗೆ ಬಂದಿದ್ದು 28 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಲಲಿತ್ ಪುರ ಜಿಲ್ಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. 11ನೇ ಕ್ಲಾಸ್ ಓದುತ್ತಿರುವ ಅಪ್ರಾಪ್ತ ಬಾಲಕಿ ಸಂತ್ರಸ್ತೆಯಾಗಿದ್ದು, ತನ್ನ ಮೇಲೆ ಅತ್ಯಾಚಾರ ನಡೆಸಿರುವ 28 ಮಂದಿ ವಿರುದ್ಧ ದೂರು ನೀಡಿದ್ದಾಳೆ. ಈಕೆಯ ತಂದೆ ತಿಲಕ್ ಯಾದವ್ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷನಾಗಿದ್ದು, ಆತನೇ ಮೊದಲ ಬಾರಿಗೆ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ. 6ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದು, ಆನಂತರ ಆಗಿಂದಾಗ್ಗೆ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಆನಂತರ ತನ್ನ ರಾಜಕೀಯ ಸ್ನೇಹಿತರಿಗೆ ಹಣಕ್ಕಾಗಿ ತನ್ನನ್ನು ಒಪ್ಪಿಸಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಅಲ್ಲದೆ, ತಂದೆಯೇ ತಾನು ಹೇಳುತ್ತಿದ್ದ ಎಲ್ಲರ ಜೊತೆಗೂ ಲೈಂಗಿಕ ಸಂಬಂಧ ಒಪ್ಪಿಸುವಂತೆ ಬಲವಂತ ಪಡಿಸುತ್ತಿದ್ದ. ಸಮಾಜವಾದಿ ಪಾರ್ಟಿಯ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಆತನ ಮೂವರು ಕಿರಿಯ ಸೋದರರು, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ದೀಪಕ್ ಅಹಿರ್ವಾರ್, ಮತ್ತೊಬ್ಬ ಬಿಎಸ್ಪಿ ಲೀಡರ್ ನೀರಜ್ ತಿವಾರಿ, ಆತನ ಸಂಬಂಧಿಕರು ಕೂಡ ಅತ್ಯಾಚಾರ ನಡೆಸಿದ ಆರೋಪಿಗಳಲ್ಲಿ ಸೇರಿದ್ದಾರೆ.
ಈ ಬಗ್ಗೆ ಯಾರಿಗಾದ್ರೂ ಮಾಹಿತಿ ನೀಡಿದರೆ, ತಾಯಿಯನ್ನು ಕೊಲ್ಲುವುದಾಗಿ ತಂದೆ ಬೆದರಿಸಿದ್ದ. ಬಾಲಕಿಯ ದೂರಿನಂತೆ ತಿಲಕ್ ಯಾದವ್ ಸೇರಿ 28 ಮಂದಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಅತ್ಯಾಚಾರ, ಹಲ್ಲೆ, ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯ ಹೇಳಿಕೆಯನ್ನು ದಾಖಲಿಸಿದ್ದೇವೆ. ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತೇವೆ. ಗಂಭೀರ ವಿಚಾರ ಆಗಿರುವ ಕಾರಣ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುವುದು. ಸಾಕ್ಷ್ಯಾಧಾರ ಕಲೆಹಾಕಿ, ಕ್ರಮ ಜರುಗಿಸಲಾಗುವುದು ಎಎಸ್ಪಿ ಗಿರಿಜೇಶ್ ಕುಮಾರ್ ತಿಳಿಸಿದ್ದಾರೆ. ಇದೇ ವೇಳೆ, ಬಾಲಕಿಯ ತಂದೆ, ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ತಿಲಕ್ ಯಾದವ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯ ವಿಡಿಯೋ ಹಂಚಿಕೊಂಡಿರುವ, ಆರೋಪಗಳೆಲ್ಲ ಆಧಾರರಹಿತ. ನನ್ನ ಹೆಸರು ಕೆಡಿಸಲು ಯಾರೋ ತಂತ್ರ ಹೆಣೆದಿದ್ದಾರೆ. ಆದರೂ ತನಿಖೆ ಎದುರಿಸುತ್ತೇನೆ ಎಂದಿದ್ದಾರೆ.
The Uttar Pradesh Police booked 28 people for allegedly raping a Class 11 student in the state's Lalitpur district. The father of the victim, the Samajwadi Party (SP) district president and Bahujan Samaj Party (BSP) district president are among the 28 accused.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm