ಬ್ರೇಕಿಂಗ್ ನ್ಯೂಸ್
14-10-21 09:58 pm Headline Karnataka News Network ಕ್ರೈಂ
ಕಾರವಾರ, ಅ.14: ಸಾಂಬಾರ್ ರುಚಿಯಾಗಿಲ್ಲ ಎಂದು ಹೇಳಿ 24 ವರ್ಷದ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕೂಡುಗೋಡು ಎಂಬಲ್ಲಿ ನಡೆದಿದೆ.
ಬುಧವಾರ ಸಂಜೆ ಘಟನೆ ನಡೆದಿದ್ದು ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ತಾಯಿ ಪಾರ್ವತಿ ಹಸ್ಲಾರ್ (42) ಮತ್ತು ರಮ್ಯಾ ಹಸ್ಲಾರ್ (19) ಮೃತರು.
ಮಂಜುನಾಥ್ ಕುಡಿತದ ಚಟ ಹೊಂದಿದ್ದು ಕುಡಿದ ಮತ್ತಿನಲ್ಲಿ ಮನೆಗೆ ಬಂದು ಸಾಂಬಾರ್ ವಿಷಯದಲ್ಲಿ ತಾಯಿ ಜೊತೆ ರಂಪ ನಡೆಸಿದ್ದಾನೆ. ಸಾಂಬಾರ್ ರುಚಿಯಾಗಿಲ್ಲ ಎಂದು ವಾಗ್ವಾದ ನಡೆಸಿದ್ದು ಬಳಿಕ ತಾಯಿ, ತಂಗಿಗೆ ಲೋನ್ ಮಾಡಿ ಮೊಬೈಲ್ ತೆಗೆಸಿಕೊಡುವ ವಿಚಾರದಲ್ಲಿ ರಂಪ ಮಾಡಿದ್ದಾನೆ.
ಆದರೆ, ತಾಯಿ ಪಾರ್ವತಿ ತಾನು ಮೊಬೈಲ್ ತೆಗೆಸಿಕೊಡುತ್ತೇನೆಂದು ಯಾರಿಗೂ ಹೇಳಿಲ್ಲ. ನಿನಗೆ ಯಾರು ಹೇಳಿದ್ದು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಕೋವಿಯನ್ನು ಎತ್ತಿಕೊಂಡು ತಾಯಿ ತಲೆಗೆ ಗುಂಡಿಟ್ಟಿದ್ದಾನೆ. ಆನಂತರ ತಂಗಿಯ ಮೇಲೂ ಗುಂಡು ಹಾರಿಸಿದ್ದು ಇಬ್ಬರೂ ಮನೆಯಲ್ಲೇ ಸಾವು ಕಂಡಿದ್ದಾರೆ.
ಕೊಲೆ ಕೃತ್ಯ ನಡೆದ ಬಳಿಕ ಮಂಜುನಾಥ್ ತಂದೆ ಮನೆಗೆ ಆಗಮಿಸಿದ್ದು ವಿಷಯ ಬೆಳಕಿಗೆ ಬಂದಿದೆ. ತಂದೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದ. ಇಂದು ಆತನನ್ನು ಬಂಧಿಸಲಾಗಿದೆ.
A youth shot his mother and sister dead on Thursday apparently for not cooking tasty sambar at Kodagodu in Karnataka's Uttara Kannada district. The incident took place on Wednesday and the accused, Manjunath Haslar (24), was arrested on Thursday. The deceased have been identified as Manjunath's mother Parvathi Narayana Haslar (42) and sister Ramya Narayana Haslar (19).
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 02:16 pm
HK News Staffer
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm