ಬ್ರೇಕಿಂಗ್ ನ್ಯೂಸ್
07-10-21 12:23 pm Mangaluru Correspondent ಕ್ರೈಂ
ಉಳ್ಳಾಲ, ಅ.7: ರಬ್ಬರ್ ತೋಟದ ನಡುವಲ್ಲಿರುವ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಹಿತ್ತಾಳೆಯ ದೀಪಗಳನ್ನ ಕದ್ದೊಯ್ದ ಘಟನೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಯಾರೂ ವಾಸವಿಲ್ಲದ ಒಂಟಿ ಬಂಗಲೆ ಮನೆಯ ಹಿಂಬಾಗಿಲನ್ನ ಪಿಕ್ಕಾಸಲ್ಲಿ ಮುರಿದು ಕಳ್ಳತನ ನಡೆಸಲಾಗಿದೆ. ಮೊನ್ನೆ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಬಂಗಲೆಯ ಕೋಣೆಯ ದೀಪ ಉರಿಯುವುದನ್ನ ಹತ್ತಿರದ ನಿವಾಸಿಯಾಗಿರುವ ಸುಜಾತ ಅವರ ಅಣ್ಣ ವಕೀಲ ಗಂಗಾಧರ್ ಉಳ್ಳಾಲ್ ಅವರು ಗಮಿನಿಸಿದ್ದು ಬಂಗಲೆಯೊಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.









ಬಂಗಲೆಯ ಹಿಂಬಾಗಿಲಿನ ಬಳಿಯಲ್ಲೇ ಇದ್ದ ಪಿಕ್ಕಾಸಿನಲ್ಲಿ ಕಬ್ಬಿಣದ ಸಲಾಕೆಯ ಗೇಟನ್ನು ಮುರಿದು ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯ ಹಾಲಲ್ಲಿದ್ದ ಎತ್ತರದ ಮೂರು ಹಿತ್ತಾಳೆಯ ದೀಪ ಮತ್ತು ದೇವರ ಕೋಣೆಯಲ್ಲಿದ್ದ ಎರಡು ಸಣ್ಣ ಹಿತ್ತಾಳೆಯ ದೀಪಗಳನ್ನ ಕದ್ದೊಯ್ದಿದ್ದಾರೆ. ಮನೆಯ ಕಪಾಟುಗಳನ್ನ ಕಳ್ಳರು ತಡಕಾಡಿದ್ದು ಮನೆಯೊಳಗೆ ಯಾವುದೇ ನಗ, ನಗದು ಸಿಗದೆ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ನಿರ್ಜನ ಎಸ್ಟೇಟಲ್ಲಿ ಸಿಸಿ ಕ್ಯಾಮೆರಾ ವರ್ಕಿಂಗ್ ಇಲ್ಲ
ಬಬ್ಬಕಟ್ಟೆಯಿಂದ-ರಾಣಿಪುರ ಸಂಪರ್ಕದ ಒಳ ನಿರ್ಜನ ರಸ್ತೆಯ ನಡುವಲ್ಲಿ ಚಂದಪ್ಪ ಎಸ್ಟೇಟ್ ಇದ್ದು ಇಲ್ಲಿ ಉಳ್ಳಾಲ ನಗರಸಭೆ ಆಡಳಿತ ಹಾಕಿಸಿದ್ದ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ನಿರ್ಜನ ಪ್ರದೇಶದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಕಳ್ಳತನ ನಡೆದ ಮನೆ ಮಾಲಕಿ ಸುಜಾತ ಅವರ ಸಹೋದರ ನಗರ ಸದಸ್ಯರಾದ ದಿನಕರ ಉಳ್ಳಾಲ್ ಆಗ್ರಹಿಸಿದ್ದಾರೆ.
Thokottu Burglars enter bungalow, FIve steal brass lamps worth lakhs have been stolen. Ullal police have visited the spot and are now investigating the case.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 02:16 pm
HK News Staffer
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm