ಬ್ರೇಕಿಂಗ್ ನ್ಯೂಸ್
06-10-21 09:14 pm Mangaluru Correspondent ಕ್ರೈಂ
ಉಳ್ಳಾಲ, ಅ.6: ಮುನ್ನೂರು ಗ್ರಾ.ಪಂ. ಕಚೇರಿಯಲ್ಲಿ ನಿವೇಶನ ಕೇಳಲು ಬಂದ ಮಹಿಳೆಯೊಂದಿಗೆ ರಾಸಲೀಲೆಗೈದ ಬಿಜೆಪಿ ಬೆಂಬಲಿತ 75 ವರ್ಷದ ಹಿರಿಯ ಗ್ರಾಮ ಸದಸ್ಯನನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುನ್ನೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಹಿರಿಯ ಸದಸ್ಯ ಬಾಬು ಶೆಟ್ಟಿ ಆರೋಪಿಯಾಗಿದ್ದು ಉಳ್ಳಾಲ ಪೊಲೀಸರು ಸಂತ್ರಸ್ತೆಯ ದೂರಿನ ಮೇರೆಗೆ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಡ್ ಲೈನ್ ಕರ್ನಾಟಕದಲ್ಲಿ ಸುದ್ದಿ ಬಿತ್ತರಗೊಂಡ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಬಡ ಮಹಿಳೆಯೊಂದಿಗೆ ಪಂಚಾಯತ್ ಅಧ್ಯಕ್ಷರ ಕೊಠಡಿಯ ಒಳಗಡೆಯೇ ರಾಸಲೀಲೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶವೂ ಕೇಳಿಬಂದಿತ್ತು. ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ತಮ್ಮ ಕೊಠಡಿಯಲ್ಲಿರದ ವೇಳೆ ಬಾಬು ಶೆಟ್ಟಿ ಮಹಿಳೆಯ ಮಕ್ಕಳನ್ನು ಹೊರಗಿರಿಸಿ ಮಹಿಳೆಯ ಜೊತೆ ರಾಸಲೀಲೆ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು ಇದರ ಚಿತ್ರಣ ಕಚೇರಿಯ ಒಳಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮೆರಾದ ಫೂಟೇಜನ್ನ ವೀಕ್ಷಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಪ್ರೆಡ್ ಡಿ ಸೋಜಾರವರು ಪಿಡಿಒ ಗಮನಕ್ಕೆ ತಂದಿದ್ದರು.
ಸಂತ್ರಸ್ತೆಯಿಂದ ಪೊಲೀಸರಿಗೆ ದೂರು
ನಿವೇಶನ ಕೇಳಿ ಬಂದು ಲೈಂಗಿಕ ಶೋಷಣೆಗೊಳಗಾದ ಸಂತ್ರಸ್ತೆಯು ಇಂದು ಉಳ್ಳಾಲ ಪೊಲೀಸರಿಗೆ ಆರೋಪಿ ಬಾಬು ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ಮುನ್ನೂರು ಪಂಚಾಯತ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ತನ್ನನ್ನ ಪರಿಚಯಿಸಿಕೊಂಡ ಗ್ರಾಮ ಸದಸ್ಯರಾದ ಬಾಬು ಶೆಟ್ಟಿ ನಿವೇಶನ ಕೊಡಿಸುವುದಾಗಿ ಹೇಳಿದ್ದರು. ನಿವೇಶನ ನೀಡುವ ಕುರಿತಂತೆ ಕಳೆದ ಸೆಪ್ಟೆಂಬರ್ 18 ರಂದು ಪಂಚಾಯತ್ ಕಚೇರಿಗೆ ಕರೆದಿದ್ದಾರೆ. ಪಂಚಾಯತ್ ಅಧ್ಯಕ್ಷರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅಧ್ಯಕ್ಷರ ಕೊಠಡಿಗೆ ತನ್ನನ್ನ ಕರೆಸಿದ್ದು ಜೊತೆಗಿದ್ದ ತನ್ನ ಮಕ್ಕಳಿಗೆ ಹತ್ತು ರೂಪಾಯಿ ಕೊಟ್ಟು ಹೊರ ಕಳುಹಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಾನು ವಿರೋಧಿಸಿದರೂ ಬಲವಂತ ಪಡಿಸಿದ್ದಾರೆ. ಆರೋಪಿಯ ವಿರುದ್ಧ ದೂರು ನೀಡಲು ಅಂಜಿದ್ದು ಇದೀಗ ತನ್ನ ಮೇಲಾದ ದೌರ್ಜನ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು ಈ ವಿಚಾರವು ಜಾಲತಾಣಗಳಲ್ಲಿ ಬಂದಿದ್ದರಿಂದ ಮುಜುಗರ ಗೊಂಡಿದ್ದೇನೆ. ಘಟನೆಯ ಕುರಿತು ಪೊಲೀಸ್ ದೂರು ನೀಡಿದರೆ ಮುನ್ನೂರು ಗ್ರಾಮದಲ್ಲಿ ನಿನ್ನನ್ನ ವಾಸಿಸಲು ಬಿಡಲ್ಲ ಎಂದು ಬಾಬು ಶೆಟ್ಟಿ ಧಮ್ಕಿ ನೀಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಆರೋಪಿ ಬಾಬು ಶೆಟ್ಟಿಯನ್ನ ಬಂಧಿಸಿದ್ದಾರೆ.
ಸಿಸಿಟಿವಿ ಫೂಟೇಜ್ ಡಿಲೀಟ್ ಮಾಡಿದರೇ..?
ಕಳೆದ ತಿಂಗಳ ಸೆಪ್ಟೆಂಬರ್ 18 ರಂದು ಮುನ್ನೂರು ಪಂಚಾಯತ್ ಕಚೇರಿಯ ಅಧ್ಯಕ್ಷರ ಕೊಠಡಿಯಲ್ಲಿ ರಾಸಲೀಲೆ ಪ್ರಕರಣ ನಡೆದಿದೆ. ಇದೀಗ ತನಿಖೆ ನಡೆಸುವ ಮೊದಲೇ ಘಟನೆಯ ಕುರಿತಂತೆ ವೀಡಿಯೋ ಫೂಟೇಜ್ ಇಲ್ಲವೆಂಬ ಪೂರ್ವಾಗ್ರಹ ಪೀಡಿತ ಉತ್ತರಗಳು ಅಧಿಕಾರಿಗಳಿಂದ ಬರುತ್ತಿದೆ. ಸಿಸಿಟಿವಿ ಫೂಟೇಜನ್ನ ಪಂಚಾಯತ್ ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುನ್ನೂರು ಗ್ರಾಪಂ ಕಚೇರಿಯಲ್ಲಿ ರಾಸಲೀಲೆ ; 75ರ ಮುದುಕ ಸದಸ್ಯನ ಕಾಮಪುರಾಣ ಬಯಲು
Mangalore Ullal, Munnur Grama Panchayath member, 75-year-old Babu Shetty has been arrested for sex scandal with a woman inside President's office. The incident has been recorded on a CCTV camera.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm