ಬ್ರೇಕಿಂಗ್ ನ್ಯೂಸ್
01-10-21 08:06 pm Mangaluru Correspondent ಕ್ರೈಂ
ಉಳ್ಳಾಲ, ಅ.1: ಕಳೆದ ವಾರವಷ್ಟೇ ಅಪರಿಚಿತ ವ್ಯಕ್ತಿಯೊಬ್ಬ ಸೋಮೇಶ್ವರದ ಮನೆ, ಮನೆಗಳಿಗೆ ಕ್ರೈಸ್ತ ಧರ್ಮ ಪ್ರಚಾರದ ಕರಪತ್ರಗಳನ್ನ ಹಂಚಿದ ಪ್ರಕರಣ ನಡೆದಿದ್ದು ಇದರ ಬೆನ್ನಲ್ಲೇ ಇಂದು ತೊಕ್ಕೊಟ್ಟಿನ ಮನೆಗಳಿಗೂ ವ್ಯಕ್ತಿಯೋರ್ವ ಅಂತಹದೇ ಕರಪತ್ರಗಳನ್ನ ಹಂಚಿದ್ದಾನೆ.
ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ವಿನಮ್ರ ಬಾರಿನ ಪಕ್ಕದ ಕಿರು ರಸ್ತೆಯಲ್ಲಿರುವ ಆರು ಮನೆಗಳಿಗೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನ ಹಂಚಿದ್ದಾನೆ. ಸ್ಥಳೀಯರಾದ ದಯಾನಂದ್ ಎಂಬವರ ಮನೆಗೇಟಲ್ಲಿ ಅಪರಿಚಿತ ವ್ಯಕ್ತಿ ಸ್ಟಿಕ್ಕರ್, ಕರಪತ್ರಗಳನ್ನ ಇರಿಸಿದ್ದು ಅದನ್ನು ಕಿತ್ತೆಸೆದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಕರಪತ್ರ, ಪುಸ್ತಕಗಳನ್ನ ವಶಕ್ಕೆ ಪಡೆದಿದ್ದಾರೆ.


ಹೆಗಲಿಗೆ ಬ್ಯಾಗ್ ಹಾಕಿದ್ದ ಸುಮಾರು 45 ವರ್ಷದ ವ್ಯಕ್ತಿಯೋರ್ವ ಕರಪತ್ರ, ಪುಸ್ತಕಗಳನ್ನ ಗೇಟಲ್ಲಿ ಇರಿಸಿದ್ದಾನೆಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ, ವಿಚಾರವನ್ನ ಬಜರಂಗದಳದ ಪ್ರಮುಖರಿಗೂ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿ ತೊಕ್ಕೊಟ್ಟು ಪರಿಸರದ ಇನ್ನಷ್ಟು ಮನೆಗಳಿಗೆ ಕರಪತ್ರಗಳನ್ನು ಹಂಚಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರು ಸಂಶಯ ವ್ಯಕ್ತಪಡಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ವಾರ ಸೆ.24ರಂದು ಸೋಮೇಶ್ವರದ ರೈಲ್ವೇ ನಿಲ್ದಾಣದ ಹಿಂದಿನ ಬೀಚ್ ರಸ್ತೆಯ ಮನೆಗಳ ಗೇಟ್ ಗಳಲ್ಲಿ ಸಂಪರ್ಕದ ಮೊಬೈಲ್ ಸಂಖ್ಯೆ ನಮೂದಿಸಿದ ಕನ್ನಡ, ಮಳಯಾಲಂನಲ್ಲಿ ಮುದ್ರಿತ ಕರಪತ್ರ, ಪುಸ್ತಕ, ಸ್ಟಿಕ್ಕರ್ ಗಳನ್ನ ಅಪರಿಚಿತನೊಬ್ಬ ಇರಿಸಿ ಹೋಗಿದ್ದ. ಬಜರಂಗದಳ ಕಾರ್ಯಕರ್ತರು ಕರಪತ್ರ ಹಂಚಿದ್ದ ವ್ಯಕ್ತಿಯ ಶೋಧ ಕಾರ್ಯವನ್ನೂ ನಡೆಸಿದ್ದರು.
ಇಂದು ಅದೇ ರೀತಿಯ ಪುಸ್ತಕ, ಕರಪತ್ರಗಳನ್ನು ತೊಕ್ಕೊಟ್ಟಿನ ಪರಿಸರದ ಮನೆಗಳ ಗೇಟ್ ಗಳಲ್ಲಿ ಇರಿಸಲಾಗಿದೆ. ಘಟನೆ ಕುರಿತಂತೆ ಬಜರಂಗದಳ ಉಳ್ಳಾಲ ನಗರ ಸಂಚಾಲಕ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದು ಅಪರಿಚಿತ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ಸೋಮೇಶ್ವರ ; ಮನೆ, ಮನೆಗೆ ಕ್ರೈಸ್ತ ಧರ್ಮ ಪ್ರಚೋದಿತ ಕರಪತ್ರ, ಪುಸ್ತಕ ಹಂಚಿದ ಅಪರಿಚಿತ ! ಬಜರಂಗದಳ ಕಾರ್ಯಕರ್ತರ ಆಕ್ರೋಶ
Christian Letters, Bible, and Magazine found at outside homes in Thokottu after Someshwara VHP demands arrest. Recently the same were found in houses at Someshwara.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
02-11-25 05:13 pm
HK News Desk
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm