ಬ್ರೇಕಿಂಗ್ ನ್ಯೂಸ್
30-09-21 05:54 pm Headline Karnataka News Network ಕ್ರೈಂ
ಕ್ವಿಟೊ, ಸೆ. 30: ದಕ್ಷಿಣ ಅಮೆರಿಕದ ಈಕ್ವೆಡಾರ್ ಜೈಲಿನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 5 ಮಂದಿಯ ಶಿರಚ್ಛೇದ ಮಾಡಲಾಗಿದೆ. ಉಳಿದವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಇದು ಈಕ್ವೆಡಾರ್ ಇತಿಹಾಸದಲ್ಲೇ ಅತ್ಯಂತ ಕರಾಳ ಹತ್ಯಾಕಾಂಡ ಎಂದು ಹೇಳಲಾಗುತ್ತಿದೆ. ಈಕ್ವೆಡಾರ್ ಜೈಲಿನಲ್ಲಿ ಪ್ರಮುಖ ಡ್ರಗ್ ಮಾಫಿಯಾದ ಕೈದಿಗಳನ್ನು ಬಂಧಿಸಿ ಇಡಲಾಗಿತ್ತು.
ಆದರೆ, ಈ ಡ್ರಗ್ ಮಾಫಿಯಾದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ಈ ಹತ್ಯಾಕಾಂಡ ನಡೆದಿದೆ. ಈ ಹತ್ಯಾಕಾಂಡದಲ್ಲಿ 116 ಜನ ಮೃತಪಟ್ಟಿದ್ದು, ಕೈದಿಗಳು ಗ್ರೆನೇಡ್‌ಗಳನ್ನು ಎಸೆದಿದ್ದಾರೆ ಎಂದು ಪೊಲೀಸ್ ಕಮಾಂಡರ್ ಫೌಸ್ಟೊ ಬ್ಯೂನಾನೊ ಮಾಹಿತಿ ನೀಡಿದ್ದಾರೆ. ಹೀಗಾಗಿ ಈಕ್ವೆಡಾರ್ ದೇಶದಲ್ಲೇ ಅತ್ಯಂತ ಕೆಟ್ಟ ಜೈಲು ಹಿಂಸಾಚಾರ ಎನ್ನಲಾಗುತ್ತಿದೆ.
ಜೈಲಿನ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ಈಕ್ವೆಡಾರ್ ನ ಕಾರಾಗೃಹ ಸೇವಾ ನಿರ್ದೇಶಕ ಬೊಲಿವಾರ್ ಗಾರ್ಜೋನ್, "ಜೈಲಿನಲ್ಲಿ ಡ್ರಗ್ಸ್ ಮಾಫಿಯಾದ ನಡುವೆ ಇದ್ದಕ್ಕಿದ್ದಂತೆ ಗ್ಯಾಂಗ್ ವಾರ್ ಆರಂಭವಾಗಿತ್ತು. ಕಾರಾಗೃಹಗಳ ನಿಯಂತ್ರಣಕ್ಕಾಗಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ಹೋರಾಡುತ್ತಿರುವ ಮಾರಕ ಘಟನೆಗಳ ಸರಣಿಯಲ್ಲಿ ಇದು ಇತ್ತೀಚಿನದು. ಫೆಬ್ರವರಿಯಲ್ಲೂ ಸಹ ಇಂತಹದ್ದೇ ಘಟನೆ ನಡೆದಿದ್ದು, ಈ ವೇಳೆ 79 ಕೈದಿಗಳು ಏಕಕಾಲದ ಕೊಲ್ಲಲ್ಪಟ್ಟಿದ್ದರು ಎಂದು ತಿಳಿದುಬಂದಿದೆ.
ಜೈಲಿನ ಸಾಮರ್ಥ್ಯಕ್ಕಿಂತ ಶೇ.30 ರಷ್ಟು ಅಧಿಕ ಖೈದಿಗಳನ್ನು ಈ ಜೈಲಿನಲ್ಲಿ ಬಂಧಿಸಿ ಇಟ್ಟಿದ್ದೆ ಈ ದುರ್ಘಟನೆ ಮತ್ತೊಂದು ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೆ, ಈ ಘಟನೆ ಬೆನ್ನಿಗೆ ಈಕ್ವೆಡಾರ್ ದೇಶದ ಅಧ್ಯಕ್ಷ ಗಿಲ್ಲೆರ್ಮೊ ಲಾಸೊ ದೇಶದ ಜೈಲು ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಈ ಗಲಭೆಯಲ್ಲಿ ಸ್ಪೋಟಕ ಮತ್ತು ಬಂದೂಕನ್ನು ಬಳಕೆ ಮಾಡಲಾಗಿದೆ. ಹಲವು ಕೈದಿಗಳು ಗ್ರಾನೇಡ್ ಗಳನ್ನೂ ಸಹ ಎಸೆದಿದ್ದಾರೆ. ಈ ಘರ್ಷಣೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ಕೊನೆಗೆ ಜೈಲಿಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಈಗ ನಾವು ಜೈಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಅಲ್ಲದೆ, ಜೈಲಿನಲ್ಲಿ ಅನೇಕ ಶವಗಳು ಪತ್ತೆಯಾಗುತ್ತಿದ್ದು, ಅದನ್ನು ಹೊರತೆಗೆಯಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಪ್ರಸ್ತುತ ಈಕ್ವೆಡಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಬಲ ಮೆಕ್ಸಿಕನ್ ಮಾದಕವಸ್ತು ಕಳ್ಳಸಾಗಣೆ ತಂಡಗಳಿಂದ ದಂಗೆಯನ್ನು ಆದೇಶಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಕ್ವೆಡಾರ್ ನ ಕಾರಾಗೃಹ ಸೇವಾ ನಿರ್ದೇಶಕ ಬೊಲಿವಾರ್ ಗಾರ್ಜೋನ್ ಸ್ಥಳೀಯ ರೇಡಿಯೋಗೆ ಪರಿಸ್ಥಿತಿ ಭಯಾನಕವಾಗಿದೆ ಎಂದು ಹೇಳಿಕೆ ನೀಡಿದ್ದಾರೆ
ಹೀಗಾಗಿ ಜೈಲಿನ ನಿಯಂತ್ರಣವನ್ನು ಮರಳಿ ಪಡೆಯುವ ಸಲುವಾಗಿ ಅಲ್ಲಿನ ಸರ್ಕಾರ 400 ಜನ ಹೆಚ್ಚವರಿ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಲೋಬೋಸ್ ಮತ್ತು ಲಾಸ್ ಚೊನೆರೋಸ್ ಗ್ಯಾಂಗ್ಗಳ ನಡುವೆ ವಿವಾದದಿಂದಾಗಿ ಹಿಂಸಾಚಾರ ನಡೆದಿದ್ದು, ಹಿಂಸಾಚಾರದಲ್ಲಿ ಗನ್, ಚಾಕುಗಳು, ಸ್ಫೋಟಕಗಳನ್ನು ಬಳಸಲಾಗಿದೆ. ಇದರಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಯಸ್ ರಾಜ್ಯ ಗವರ್ನರ್ ಪ್ಯಾಬ್ಲೊ ಅರೋಸೆಮೆನಾ ಮಾಹಿತಿ ನೀಡಿದ್ದಾರೆ. ಕೆಲವೊಂದು ಟಿವಿಗಳಲ್ಲಿ ಜೈಲಿನ ಕಿಟಕಿಯಿಂದ ಸ್ಫೋಟಕವನ್ನು ಎಸೆಯುತ್ತಿರುವುದು ಮತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಜೈಲಿನ ಅಡುಗೆ ಸಿಬ್ಬಂದಿಯನ್ನು ಹೊರಗೆ ಕರೆ ತಂದು ರಕ್ಷಣೆ ಮಾಡಲಾಗಿದೆ.
ಇದಕ್ಕೂ ಮೊದಲು ಜುಲೈನಲ್ಲಿ ಇದೇ ರೀತಿಯ ಮಾರಾಮಾರಿ ನಡೆದಿದ್ದು, ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ವೇಳೆ, ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಈಕ್ವೆಡಾರ್ನ ಜೈಲು ವ್ಯವಸ್ಥೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಫೆಬ್ರವರಿಯಲ್ಲಿ ದೇಶದ ಮೂರು ಕಾರಾಗೃಹಗಳಲ್ಲಿ ಏಕಕಾಲದಲ್ಲಿ ನಡೆದ ಗಲಭೆಯಲ್ಲಿ 79 ಕೈದಿಗಳು ಸಾವನ್ನಪ್ಪಿದ್ದರು. ಜುಲೈನಲ್ಲಿ ಲಿಟೋರಲ್ ಎಂಬಲ್ಲಿ 22 ಕೈದಿಗಳು ಪ್ರಾಣ ಕಳೆದುಕೊಂಡಿದ್ದರು.
Ecuador's president has declared a state of emergency in the prison system following a battle among gang members in a coastal lockup that killed at least 116 people and injured 80 in what authorities say was the worst prison bloodbath ever in the country.
22-08-25 10:28 pm
Bangalore Correspondent
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
Dharmasthala Case, Minister Eshwar Khandre: ಧ...
21-08-25 10:31 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 03:04 pm
Mangalore Correspondent
Mervin Mendonca Accident, Udupi, Mangalore: ರ...
23-08-25 01:29 pm
ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸ...
22-08-25 05:07 pm
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ; ಬೆಳ್ತಂಗಡಿ ಠಾಣೆಯಲ್ಲ...
22-08-25 04:21 pm
Activist Mahesh Shetty Timarodi Arrest: ಬಿ.ಎಲ...
21-08-25 09:35 pm
23-08-25 11:11 am
Mangaluru Correspondent
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm
ಶೀಲ ಶಂಕೆ ; ಕ್ರಿಮಿನಾಶಕ ಕೊಡಿಸಿ ಕೊಲೆ, ಪ್ರಿಯಕರನೊ...
21-08-25 10:39 pm