ಬ್ರೇಕಿಂಗ್ ನ್ಯೂಸ್
25-09-21 03:35 pm Headline Karnataka News Network ಕ್ರೈಂ
ನವದೆಹಲಿ, ಸೆ.25: ನವರಾತ್ರಿ ಉತ್ಸವದ ದಿನಗಳಲ್ಲಿ ಪಾಕಿಸ್ಥಾನದ ಐಎಸ್ಐ ಪ್ರೇರಿತ ಉಗ್ರರು ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಕೇಂದ್ರೀಯ ಗುಪ್ತಚರ ಏಜನ್ಸಿಗಳು ಮತ್ತೆ ಎಚ್ಚರಿಕೆ ನೀಡಿವೆ. ಇದರಂತೆ, ದೇಶಾದ್ಯಂತ ಅಲರ್ಟ್ ಘೋಷಣೆ ಮಾಡಲಾಗಿದ್ದು, ಎಲ್ಲ ರೀತಿಯ ಭದ್ರತಾ ಏಜನ್ಸಿಗಳನ್ನು ಕಟ್ಟೆಚ್ಚರ ಇರುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಸೆ.18ರಂದು ಸೆಂಟ್ರಲ್ ಇಂಟೆಲಿಜೆನ್ಸಿಯಿಂದ ಅಧಿಕೃತ ಸೂಚನೆ ಬಂದಿದ್ದು, ದೇಶದ ಎಲ್ಲ ರಾಜ್ಯಗಳ ಪ್ರಮುಖ ನಗರಗಳು, ಜನನಿಬಿಡ ಪ್ರದೇಶಗಳಲ್ಲಿ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಟಿಫಿನ್ ಮಾದರಿಯಲ್ಲಿ ಬಾಂಬ್ ಇಡುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಐಇಡಿ ಸ್ಫೋಟಕಗಳನ್ನು ಟಿಫಿನ್ ಬಾಕ್ಸ್ ನಲ್ಲಿಟ್ಟು ಸ್ಫೋಟಿಸಲು ಸಂಚು ಮಾಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.
ನವರಾತ್ರಿ ಸಂದರ್ಭದಲ್ಲಿ ಜನರು ಹೆಚ್ಚು ಸೇರುವ ಪ್ರದೇಶಗಳಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ನಿಗಾ ಇಡಬೇಕು. ಟಿಫಿನ್ ಬಾಕ್ಸ್ ಆಗಿರಬಹುದು ಅಥವಾ ಲಾಜಿಸ್ಟಿಕ್ಸ್ ಗಳಲ್ಲಿ ಬರುವಂತಹ ಪಾರ್ಸಲ್ ಬಾಕ್ಸ್ ಗಳಲ್ಲಿಯೂ ಬಾಂಬ್ ಇರಬಹುದು ಎಂದು ಗುಪ್ತಚರ ಏಜನ್ಸಿ ಎಲರ್ಟ್ ಸಂದೇಶದಲ್ಲಿ ಹೇಳಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಇತ್ತೀಚೆಗಷ್ಟೇ, ಕಳೆದ ಸೆ.14ರಂದು ದೆಹಲಿ ಪೊಲೀಸರು ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಆರು ಮಂದಿಯನ್ನು ಬಂಧಿಸಿದ್ದರು. ಪ್ರಕರಣ ಸಂಬಂಧಿಸಿ ಹಲವರನ್ನು ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲಿ ಇಬ್ಬರು ಉಗ್ರರು ಪಾಕಿಸ್ಥಾನದಲ್ಲಿ ಐಎಸ್ಐ ಪ್ರೇರಿತರಾಗಿ ಬಾಂಬ್ ಸ್ಫೋಟ, ರೈಫಲ್ ಬಳಕೆ ಬಗ್ಗೆ ತರಬೇತಿ ಪಡೆದು ಬಂದಿದ್ದರು ಎನ್ನುವುದು ಬಯಲಾಗಿತ್ತು. ಅದರ ಬೆನ್ನಲ್ಲೇ ನವರಾತ್ರಿ ಮತ್ತು ಉತ್ಸವ ಸಂದರ್ಭದಲ್ಲಿ ಭಾರೀ ಸ್ಫೋಟಕ್ಕೆ ಪಾಕಿಸ್ಥಾನದ ಐಎಸ್ಐ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಏಜನ್ಸಿಗಳು ದೇಶದಲ್ಲಿ ಮತ್ತೆ ಎಲರ್ಟ್ ಘೋಷಣೆ ಮಾಡಿದೆ.
Pakistan's spy agency Inter-Services Intelligence (ISI) is reportedly planning to carry out a big terror strike in the country during the festival season, a crucial Intelligence alert has revealed.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm