ಬ್ರೇಕಿಂಗ್ ನ್ಯೂಸ್
24-09-21 12:50 pm Headline Karnataka News Network ಕ್ರೈಂ
ಮುಂಬೈ, ಸೆ.24: ಅಪ್ರಾಪ್ತ ಹುಡುಗಿಯನ್ನು 33 ಮಂದಿ ದುರುಳರು ಸೇರಿಕೊಂಡು ಕಳೆದ ಎಂಟು ತಿಂಗಳಲ್ಲಿ ವಿವಿಧ ಕಡೆಗಳಿಗೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನುಷ ಘಟನೆ ಥಾಣೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು 24 ಮಂದಿಯನ್ನು ಬಂಧಿಸಿದ್ದಾರೆ.
ಬಾಲಕಿಯ ದೂರಿನಂತೆ ಎರಡು ದಿನಗಳ ಹಿಂದೆ ದೊಂಬಿವಿಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪೋಕ್ಸೋ ಸೇರಿದಂತೆ ಗ್ಯಾಂಗ್ ರೇಪ್ ಇನ್ನಿತರ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದರು. ಕಳೆದ ಜನವರಿ 29ರಿಂದ ತೊಡಗಿ ಸೆಪ್ಟಂಬರ್ 22ರ ವರೆಗೂ ಬಾಲಕಿಯನ್ನು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ಪಾರ್ಟಿಯೊಂದಕ್ಕೆ ಕರೆದು ಅಲ್ಲಿ ಮದ್ಯಪಾನ ಮಾಡಿಸಿ, ಗೆಳೆಯನೇ ರೇಪ್ ಮಾಡಿದ್ದ. ಆನಂತರ, ಆಕೆಯ ವಿಡಿಯೋವನ್ನು ಮಾಡಿದ್ದು, ಅದೇ ವಿಡಿಯೋ ಮುಂದಿಟ್ಟು ಬೇರೆ ಬೇರೆ ಕಡೆಗೆ ಕರೆದೊಯ್ದು ತನ್ನ ಇತರ ಗೆಳೆಯರಿಂದಲೂ ರೇಪ್ ಮಾಡಿಸಿದ್ದಾನೆ. ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡುತ್ತಲೇ ಎಂಟು ತಿಂಗಳಲ್ಲಿ ಥಾಣೆ ಜಿಲ್ಲೆಯ ದೊಂಬಿವಿಲಿ, ಬದ್ಲಾಪುರ್, ಮುರ್ಬಾದ್ ಮತ್ತು ರಬಾಲೆ ಮುಂತಾದ ಕಡೆಗೆ ಕೊಂಡೊಯ್ದು ಅಲ್ಲಲ್ಲಾ ಗ್ಯಾಂಗ್ ರೇಪ್ ಮಾಡಿದ್ದಾರೆ. ಹುಡುಗರ ಕುಕೃತ್ಯದಿಂದ ಬೇಸತ್ತ ಬಾಲಕಿ ಮೊನ್ನೆ ಸೆ.22ರಂದು ಮನೆಯವರಿಗೆ ವಿಚಾರ ತಿಳಿಸಿ, ಪೊಲೀಸ್ ದೂರು ನೀಡಿದ್ದಾಳೆ ಎಂದು ಪೂರ್ವ ವಲಯ ಎಸಿಪಿ ದತ್ತಾತ್ರೇಯ ಕರಾಳೆ ತಿಳಿಸಿದ್ದಾರೆ.
33 ಮಂದಿಯ ಹೆಸರನ್ನು ಸಂತ್ರಸ್ತ ಬಾಲಕಿ ನೀಡಿದ್ದಾಳೆ. ಅದರಲ್ಲಿ 24 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಈ ಪೈಕಿ ಇಬ್ಬರು ಅಪ್ರಾಪ್ತರು ಇದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಸೆ.29ರ ವರೆಗೆ ಪೊಲೀಸ್ ಕಸ್ಟಡಿ ಪಡೆಯಲಾಗಿದೆ. ಒಟ್ಟು ಪ್ರಕರಣದ ಬಗ್ಗೆ ತನಿಖೆ ನಡೆಸಲು ಮಹಿಳಾ ಅಧಿಕಾರಿ ಎಸಿಪಿ ಸೋನಾಲಿ ಧೋಳೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಕರಾಳೆ ತಿಳಿಸಿದ್ದಾರೆ.ದೆ.
A 15-year-old girl was allegedly gang-raped multiple times over a period of eight months in Maharashtra's Thane district and the police have arrested 24 persons and detained two minors in the case, an official said on Thursday.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm