ಬ್ರೇಕಿಂಗ್ ನ್ಯೂಸ್
23-09-21 08:45 pm Mangaluru Correspondent ಕ್ರೈಂ
ಪುತ್ತೂರು, ಸೆ.23: ದೆಹಲಿ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರ ಪೈಕಿ, ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ವಾಸವಿದ್ದ ವ್ಯಕ್ತಿಯೂ ಇದ್ದಾನೆಂದು ಭಾರೀ ಸುದ್ದಿಯಾಗಿತ್ತು. ಎರಡು ತಿಂಗಳ ಹಿಂದೆ ಬೆಂಗಳೂರಿಗೆಂದು ತೆರಳಿದ್ದ ಮೊಹಮ್ಮದ್ ರಫೀಕ್ ಎನ್ನುವ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬಂಧಿತನಾಗಿದ್ದಾನೆಂದು ವದಂತಿಯೂ ಹರಡಿತ್ತು. ಯಾಕಂದ್ರೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಅಲ್ಲದೆ, ಆತನ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ಈ ಬಗ್ಗೆ ನಾಪತ್ತೆ ದೂರನ್ನೂ ಕೊಟ್ಟಿದ್ದಳು.
ಈ ರೀತಿಯ ಸುದ್ದಿ ಹಬ್ಬುತ್ತಲೇ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನವಾಣೆ ಬಳಿ ಕೇಳಿದರೆ, ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದರು. ಅಷ್ಟೇ ಅಲ್ಲ, ದೆಹಲಿ ಪೊಲೀಸರು ಉಗ್ರವಾದ ಆರೋಪದಲ್ಲಿ ಬಂಧಿಸಿದ್ದರೆ ನಮಗೆ ಮಾಹಿತಿ ನೀಡುತ್ತಿದ್ದರು. ಅಂಥ ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದರು. ಆದರೂ, ದೆಹಲಿ ಪೊಲೀಸರು ಉತ್ತರ ಪ್ರದೇಶ, ಮಹಾರಾಷ್ಟ್ರ ಭಾಗದಲ್ಲಿ ಹಲವರನ್ನು ವಶಕ್ಕೆ ಪಡೆದಿದ್ದರು. ಹೀಗಾಗಿ ನಾಪತ್ತೆಯಾದ ಮೊಹಮ್ಮದ್ ರಫೀಕ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಮತ್ತು ಆತ ಬೆಂಗಳೂರಿಗೆಂದು ತೆರಳಿದವನು ದಿಢೀರ್ ಆಗಿ ಕಾಣೆಯಾಗಿದ್ದು ಹಲವು ಸಂಶಯಗಳನ್ನು ಹುಟ್ಟುಹಾಕಿತ್ತು.
ಏಳು ವರ್ಷಗಳ ಹಿಂದೆ ಉಪ್ಪಿನಂಗಡಿಯ ನೆಕ್ಕಿಲಾಡಿಗೆ ಬಂದು ನೆಲೆಸಿದ್ದ ಮೊಹಮ್ಮದ್ ರಫೀಕ್ ಖಾನ್, ಸ್ಥಳೀಯ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಆತನಿಗೆ ಬೇರೆ ಮದುವೆಯಾಗಿತ್ತು ಎನ್ನಲಾಗಿತ್ತು. ಆತನ ವರ್ತನೆಯ ಬಗ್ಗೆಯೂ ಸ್ಥಳೀಯರು ಸಂಶಯಪಟ್ಟಿದ್ದು ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ವಿಚಾರ ಜಿಲ್ಲಾ ಪೊಲೀಸರ ತಲೆನೋವಿಗೆ ಕಾರಣವಾಗುತ್ತಲೇ ಆತನ ಪತ್ತೆಗಾಗಿ ತಡಕಾಡಿದ್ದರು. ಈತನ ಹಿಂದೆ ಬಿದ್ದ ಉಪ್ಪಿನಂಗಡಿ ಪೊಲೀಸರು, ಆತ ಹಿಮಾಚಲ ಪ್ರದೇಶದಲ್ಲಿ ಇರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ, ಆತನ ಜೊತೆ ವಿಡಿಯೋ ಕರೆ ಮಾಡಿ, ಆತನೇ ಎನ್ನುವುದನ್ನು ಪತ್ನಿಯ ಮೂಲಕ ಪೊಲೀಸರು ದೃಢಪಡಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಎಸ್ಪಿ ಸೋನವಾಣೆ ಬಳಿ ಕೇಳಿದರೆ, ಆತನ ಬಗ್ಗೆ ಮಾಧ್ಯಮಗಳು ಸಂಶಯ ಪಟ್ಟಿದ್ದವು. ದೆಹಲಿ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಈತನೂ ಒಬ್ಬ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ನಾವು ಸ್ಪಷ್ಟನೆ ಕೊಟ್ಟಿದ್ದೇವೆ. ದೆಹಲಿ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಆತ ಇಲ್ಲವೆಂದು ದೃಢಪಟ್ಟಿದೆ. ಆತನ ಜೊತೆ ಪೊಲೀಸರು ಮಾತನಾಡಿದ್ದು, ಯಾವುದೋ ಕಾರಣಕ್ಕೆ ಆತನ ಊರಿಗೆ ಹೋಗಿದ್ದಾನೆ. ಆತನ ಸ್ವಂತ ಊರು ಹಿಮಾಚಲ ಪ್ರದೇಶ ಎನ್ನುವ ಮಾಹಿತಿ ಇದೆ, ಹೀಗಾಗಿ ಹೋಗಿರಬೇಕು. ಒಂದು ತಿಂಗಳ ನಂತರ ಮರಳಿ ಬರುತ್ತೇನೆ ಎಂದಿದ್ದಾಗಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪರಿಸರದಲ್ಲಿ ಭಯೋತ್ಪಾದಕ ನೆಲೆಸಿದ್ದ ಎನ್ನುವ ಸುದ್ದಿ ಕರಾವಳಿಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆದರೆ, ಈಗ ಈ ವಿಚಾರದ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಭಯೋತ್ಪಾದನೆ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ಬಂಧಿತನಾದರೆ, ಆತನ ಚಲನವಲನ ಮತ್ತು ಆತ ಎಲ್ಲೆಲ್ಲಿ ಓಡಾಡಿದ್ದಾನೆ. ಎಲ್ಲಿ ನೆಲೆಸಿದ್ದ ಅನ್ನುವ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಾರೆ. ಆಯಾ ಭಾಗದ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ. ದೆಹಲಿಯಲ್ಲಿ ಬಂಧಿತರ ಬಗ್ಗೆ ಯಾವುದೇ ಮಾಹಿತಿ ದ.ಕ. ಜಿಲ್ಲೆಯ ಪೊಲೀಸರಿಗೆ ಲಭಿಸಿರಲಿಲ್ಲ.
ಬಿಡಿ ಭಾಗಗಳನ್ನು ತರುವುದಕ್ಕಾಗಿ ಜುಲೈ 12ರಂದು ಬೆಂಗಳೂರಿಗೆ ಹೋಗಿದ್ದ ರಫೀಕ್, 18ರಂದು ಮರಳಿ ಬರುವುದಾಗಿ ಹೇಳಿದ್ದ. ಬಸ್ಸಿನಲ್ಲಿ ಕುಳಿತು ಬರುತ್ತಿದ್ದೇನೆಂದು ಹೇಳಿದ್ದ. ಆದರೆ, ಮರಳಿ ಬಂದಿರಲಿಲ್ಲ ಎಂದು ಆತನ ಪತ್ನಿ ಆಗಸ್ಟ್ 6ರಂದು ಉಪ್ಪಿನಂಗಡಿ ಠಾಣೆಯಲ್ಲಿ ದೂರು ನೀಡಿದ್ದರು.
Missing Uppinangady man arrested for terrorist activities in Delhi turns to be fake states SP Mangalore. Some Newspaper had stated that the missing man was arrested in Delhi due to terror links. But the Mangalore police have tracked him in Himachal and have started that the reports are fake.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm