ಬ್ರೇಕಿಂಗ್ ನ್ಯೂಸ್
23-09-21 12:10 pm Udupi Correspondent ಕ್ರೈಂ
ಕುಂದಾಪುರ, ಸೆ.23 : ಮೊಬೈಲ್ ಅಂಗಡಿ ಮಾಲೀಕನನ್ನು ಅಪಹರಿಸಿದ ತಂಡವೊಂದು ಲಕ್ಷಾಂತರ ರೂ. ಹಣ ಹಾಗೂ ಸೊತ್ತುಗಳನ್ನು ಲೂಟಿ ಮಾಡಿರುವ ಘಟನೆ ನಡೆದಿದ್ದು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ಕಿರಿಮಂಜೇಶ್ವರದ ಅರೆಹೊಳೆ ಕ್ರಾಸ್‌ನ ಮುಸ್ತಫ(34) ಎಂಬವರು ಕುಂದಾಪುರದ ಚಿಕನ್ ಸ್ಟಾಲ್ ರಸ್ತೆಯಲ್ಲಿ ಮೊಬೈಲ್ ಅಂಗಡಿಯನ್ನು ಹೊಂದಿದ್ದು, ಕುಂದಾಪುರದಲ್ಲಿ ವಾಸವಾಗಿದ್ದರು. ಸೆ.17ರಂದು ರಾತ್ರಿ ಅಂಗಡಿ ಬಂದ್ ಮಾಡಿ ವ್ಯವಹಾರದ ಹಣ ಹಾಗೂ ಇತರ ದಾಖಲಾತಿಗಳ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನೇರಂಬಳ್ಳಿಯ ಮುಖ್ತಾರ್ ಸೇರಿದಂತೆ ಮೂವರು ಆರೋಪಿಗಳು, ಹಲ್ಲೆಗೈದು ರಿವಾಲ್ವರ್ ತೋರಿಸಿ ಬೆದರಿಸಿ, ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.18ರಂದು ನಸುಕಿನ ವೇಳೆ ಬೆಂಗಳೂರಿನ ಸರ್ಜಾಪುರದ ವಸತಿಗೃಹವೊಂದಕ್ಕೆ ಕರೆದೊಯ್ದಿದ್ದು, 25 ವರ್ಷ ಪ್ರಾಯದ ಓರ್ವ ಮಹಿಳೆ ಮನೆಯವರಿಗೆ ಫೋನ್ ಮಾಡಿ 50,000 ರೂ. ಹಣವನ್ನು ಹಾಕಬೇಕೆಂದು ಬೆದರಿಕೆ ಹಾಕಿದ್ದಾರೆ. ಆನಂತರ ಮುಸ್ತಫ ಅವರ ಮೊಬೈಲಿನಿಂದಲೇ ಖಾತೆಯಿಂದ ತಮ್ಮ ಖಾತೆಗೆ 50000 ರೂ. ಹಣ ಜಮಾ ಮಾಡಿಕೊಂಡಿದ್ದು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಎಟಿಎಂನಿಂದ 3,14,175 ರೂ.ವನ್ನು ಡ್ರಾ ಮಾಡಿದ್ದಾರೆ ಎಂದು ದೂರಲಾಗಿದೆ.
ಬಳಿಕ ಚೆಕ್ ಪುಸ್ತಕಕ್ಕೆ ಸಹಿ ಮಾಡಿಸಿ, ಊರಿಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು, ಮಾಡಿದರೆ ಮಾತ್ರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ನೀಡುವುದಾಗಿ ಹೇಳಿದ್ದಾರೆ. ಸೆ.18ರಂದು ರಾತ್ರಿ ಆರೋಪಿಗಳು ಮುಸ್ತಫ ಅವರನ್ನು ಬಿಟ್ಟಿದ್ದಾರೆ ಎನ್ನಲಾಗಿದೆ. ಸೆ.19ರಂದು ಮುಸ್ತಫಾ ಊರಿಗೆ ಬಂದಿದ್ದು ಆರೋಪಿಗಳ ವಿರುದ್ಧ ಒಟ್ಟು 4,64,175 ರೂ. ಹಣ ಹಾಗೂ 1,00,000 ರೂ. ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
A youth running a mobile phone shop here has alleged that a six-member gang kidnapped him and robbed money and valuables from him. Musthafa (34), a native of Arehole in Byndoor taluk, and presently residing in a flat in Kundapur, was kidnapped by the gang.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm