ಬ್ರೇಕಿಂಗ್ ನ್ಯೂಸ್
20-09-21 02:54 pm Mangaluru Correspondent ಕ್ರೈಂ
ಮಂಗಳೂರು, ಸೆ.20: ನಗರದ ಕೊಡಿಯಾಲ್ ಬೈಲಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಕಚೇರಿಗೆ ನುಗ್ಗಿದ ಆಗಂತುಕನೊಬ್ಬ ಅಲ್ಲಿದ್ದ ಮೂವರು ಸಿಬಂದಿಗೆ ಕತ್ತಿಯಿಂದ ಕಡಿದು ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ತಾನು ಇಲ್ಲಿನ ಹಳೆ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದಾನೆ. ಬಳಿಕ ಯಾರೋ ಸ್ಟಾಫ್ ಒಬ್ಬರನ್ನು ಕೇಳಿದ್ದು ಅವರು ಈಗ ಇಲ್ಲ ಎಂದು ಸಿಬಂದಿ ಪ್ರತಿಕ್ರಿಯಿಸಿದ್ದಾರೆ. ಅವರಿಗೊಂದು ಗಿಫ್ಟ್ ಕೊಡಲಿಕ್ಕಿದೆ ಎಂದು ಹೇಳುತ್ತಾ ಹರಿತ ಕತ್ತಿ ಹೊರ ತೆಗೆದಿದ್ದು ಅಲ್ಲಿದ್ದವರ ಮೇಲೆ ಬೀಸಿದ್ದಾನೆ. ಮೂವರು ಸಿಬಂದಿ ಕತ್ತಿಯೇಟಿನಿಂ ಗಾಯಗೊಂಡಿದ್ದಾರೆ.







ಸ್ಟೆನೋ ಗ್ರಾಫರ್ ಆಗಿರುವ ನಿರ್ಮಲಾ (43) ತಲೆ ಮತ್ತು ಕೈಗೆ ಗಂಭೀರ ಗಾಯಗೊಂಡಿದ್ದಾರೆ. ಪ್ರಥಮ ದರ್ಜೆ ಸಹಾಯಕಿ ಆಗಿರುವ ರೀನಾ ರಾಯ್(45) ಮತ್ತು ಅಟೆಂಡರ್ ಗುಣವತಿ (58) ಅವರಿಗೂ ಕತ್ತಿಯೇಟು ಬಿದ್ದಿದ್ದು ತಲೆ, ಕೈ, ಬೆನ್ನಿಗೆ ಕಡಿದ ಗಾಯಕ್ಕೀಡಾಗಿದ್ದಾರೆ. ಕತ್ತಿ ತೆಗೆದು ಬೀಸಿದ್ದನ್ನು ನೋಡಿದ ಮಹಿಳಾ ಸಿಬಂದಿಯೊಬ್ಬರು ಹೊರಗೆ ಬಂದಿದ್ದು ಕಟ್ಟಡದ ಹೊರಗೆ ಇದ್ದ ಜೈಲು ಸೆಕ್ಯುರಿಟಿಗೆ ತಿಳಿಸಿದ್ದಾರೆ. ಕೂಡಲೇ ಆ ಸಿಬಂದಿ ತಮ್ಮ ಜೈಲು ಸಿಬಂದಿ ಪೊಲೀಸರನ್ನು ಕರೆದಿದ್ದು ಅಲ್ಲಿಗೆ ತೆರಳುವಷ್ಟರಲ್ಲಿ ಮೂವರಿಗೆ ಹಲ್ಲೆ ಮಾಡಿ, ಚೇರ್ ಒಂದರಲ್ಲಿ ಕತ್ತಿ ಹಿಡಿದು ಕುಳಿತಿದ್ದ.
ಬಳಿಕ ಪೊಲೀಸರು ಆಗಂತುಕ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಪಂ ಸಿಇಓ ಕುಮಾರ್, ಡಿಡಿಪಿಐ ಸೇರಿದಂತೆ ಅಧಿಕಾರಿಗಳು ವಿಷಯ ತಿಳಿದು ದೌಡಾಯಿಸಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ. ಆರೋಪಿ 35 ವರ್ಷದ ಯುವಕನಾಗಿದ್ದು ಯಾಕಾಗಿ ಈ ಕೃತ್ಯ ನಡೆಸಿದ್ದಾನೆ. ಆತನ ಉದ್ದೇಶ ಏನಿತ್ತು ಎಂಬುದನ್ನು ತನಿಖೆ ನಡೆಸಬೇಕಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಗಾಯಾಳು ಮೂವರು ಸಿಬಂದಿಯನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು ಅಗತ್ಯ ಚಿಕಿತ್ಸೆ ನೀಡಲಾಗುವುದು. ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಪಂ ಸಿಇಓ ಕುಮಾರ್ ತಿಳಿಸಿದ್ದಾರೆ. ಯುವಕನ ಕೃತ್ಯದಿಂದ ಅಲ್ಲಿನ ಇತರ ಸಿಬಂದಿ ಭಯಭೀತರಾಗಿದ್ದಾರೆ.
Video:
Miscrent attacks three woman staffs of DIET institute, District Institute of education and training brutally in Mangalore inside their office using knife. The The accused has been arrested by police and has been Interrogated by police. The incident took place in broad daylight inside their office.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm