ಬ್ರೇಕಿಂಗ್ ನ್ಯೂಸ್
26-08-21 12:59 pm Headline Karnataka News Network ಕ್ರೈಂ
Photo credits : mathrubhumi
ತಿರುವನಂತಪುರ, ಆಗಸ್ಟ್ 26: ಕೇರಳದಲ್ಲಿ ತಾಲಿಬಾನ್ ವಿರೋಧಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದ ಮುಸ್ಲಿಂ ಲೀಗ್ ಶಾಸಕರೊಬ್ಬರಿಗೆ ಜೀವ ಬೆದರಿಕೆ ಒಡ್ಡಲಾಗಿದೆ. ಮುಸ್ಲಿಂ ಲೀಗ್ ನಾಯಕ ಮತ್ತು ಮಾಜಿ ಸಚಿವರೂ ಆಗಿರುವ ಎಂ.ಕೆ. ಮುನೀರ್ ತಾಲಿಬಾನ್ ಬೆಳವಣಿಗೆಯನ್ನು ಖಂಡಿಸಿ ಕಳೆದ ಆಗಸ್ಟ್ 17ರಂದು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಫೇಸ್ಬುಕ್ ಪೋಸ್ಟ್ ಹಾಕಿದ ವಾರದ ನಂತರ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಜೀವ ಬೆದರಿಕೆ ಒಡ್ಡಲಾಗಿದೆ.
ಕೊಡುವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಂ.ಕೆ.ಮುನೀರ್ ಬುಧವಾರ ಬೆಳಗ್ಗೆ ಪೋಸ್ಟ್ ಮೂಲಕ ಪತ್ರವನ್ನು ಪಡೆದಿದ್ದು, ಮುಂದಿನ 24 ಗಂಟೆಯ ಒಳಗೆ ಫೇಸ್ಬುಕ್ ಪೋಸ್ಟನ್ನು ತೆಗೆದು ಹಾಕಬೇಕು. ಅದರ ಜೊತೆಗೆ ಬಹಿರಂಗ ಕ್ಷಮೆಯನ್ನೂ ಕೇಳಬೇಕು. ಇಲ್ಲದಿದ್ದರೆ ನೀವು ಮತ್ತು ನಿಮ್ಮ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಪತ್ರ ಕೈಸೇರುತ್ತಿದ್ದಂತೆ ಮುನೀರ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲಿಬಾನ್ ಒಂದು ವಿಸ್ಮಯ ಎಂದು ಪತ್ರ ಬರೆಯಲಾಗಿದ್ದು, ನಿಮ್ಮ ಪೋಸ್ಟ್ ಕೇವಲ ತಾಲಿಬಾನ್ ವಿರೋಧಿಯಾಗಿಲ್ಲ. ಇಡೀ ಮುಸ್ಲಿಂ ಸಮುದಾಯಕ್ಕೆ ವಿರೋಧಿಯಾಗಿದೆ. ನಮ್ಮ ಮಹಿಳೆಯರು ಹೇಗಿರಬೇಕು ಎನ್ನುವ ಬಗ್ಗೆ ನಾವು ನಿರ್ಧಾರ ಮಾಡುತ್ತೀವಿ. ನಿನ್ನ ವಿಚಾರಗಳನ್ನು ನೀನು ಮನೆಯಲ್ಲಿ ಮಾತ್ರ ಇಟ್ಟುಕೊಳ್ಳು ಎಂದು ಬರೆದಿದ್ದಾರೆ. ಈ ಪತ್ರವನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಏರಿಯಾದಿಂದ ಪೋಸ್ಟ್ ಮಾಡಲಾಗಿತ್ತು. ಅಲ್ಲದೆ, 2010ರಲ್ಲಿ ಪ್ರೊ.ಟಿ.ಜೆ. ಜೋಸೆಫ್ ಗೆ ಯಾವ ರೀತಿಯ ಗತಿಯಾಗಿತ್ತು ಎನ್ನುವುದನ್ನು ತಿಳಿದುಕೊಳ್ಳು ಎನ್ನುವ ಮೂಲಕ ಅದೇ ಗತಿ ನಿನಗೂ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಇಡುಕ್ಕಿ ಜಿಲ್ಲೆಯ ತೊಡುಪ್ಪುಝ ಎಂಬಲ್ಲಿ ನ್ಯೂಮ್ಯಾನ್ಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಟಿ.ಜೆ.ಜೋಸೆಫ್, ತನ್ನ ತರಗತಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಈ ವಿಚಾರ ಬಳಿಕ ದೇವನಿಂದೆ ಮಾಡಿದರು ಎನ್ನುವ ಆರೋಪಕ್ಕೀಡಾಗಿತ್ತು. ಅದೇ ದ್ವೇಷದಲ್ಲೇ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಟಿ.ಜೆ.ಜೋಸೆಫ್ ಕೈಗಳನ್ನು ಕಡಿದು ಹಾಕಿದ್ದ ಘಟನೆ ನಡೆದಿತ್ತು.
ಮುನೀರ್ ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಅಫ್ಘಾನಿಸ್ತಾನದ ಜನರು ಮತ್ತೆ ಅಪಾಯಕ್ಕೆ ಸಿಲುಕಿದ್ದಾರೆ. ತಾಲಿಬಾನಿಗಳು ಯಾವುದೇ ಕಾರಣಕ್ಕೂ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವುದಿಲ್ಲ. ಅತ್ಯಂತ ಕಟುವಾದ ಮೂಲಭೂತವಾತ ಮತ್ತು ತಾರತಮ್ಯವನ್ನು ಅನುಸರಿಸುತ್ತಾರೆ. ತಾಲಿಬಾನಿಗಳು ಏಂಟಿ ಹ್ಯೂಮನ್ ಮತ್ತು ಏಂಟಿ ವುಮೆನ್ ಎಂದು ಹೇಳಿ ಪೋಸ್ಟ್ ಮಾಡಿದ್ದರು. ತಾಲಿಬಾನಿಗಳ ನಡೆಯನ್ನು ಬಹಿರಂಗವಾಗಿ ವಿರೋಧಿಸಿ ಪೋಸ್ಟ್ ಮಾಡಿದ್ದಕ್ಕೆ ತಾಲಿಬಾನ್ ಬೆಂಬಲಿತರು ಬೆದರಿಕೆ ಒಡ್ಡಿದ್ದಾರೆ.
ಆದರೆ, ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಕೆ.ಮುನೀರ್, ಮೂಲಭೂತವಾದ ಮತ್ತು ಉಗ್ರವಾದ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ. ಯಾವುದೇ ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಹೇಳಿದ್ದಾರೆ. ನಾನು ಸಿಎಂ ಪಿಣರಾಯಿ ವಿಜಯನ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಅವರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
Senior legislator of the Indian Union Muslim League (IUML) and former Kerala minister MK Muneer on August 25, Wednesday, received an anonymous threat letter for posting a message against the brutalities committed by the Taliban against the people of Afghanistan, on social media. Muneer stated that the letter he received in the morning said that if he failed to withdraw the anti-Taliban post from his Facebook page in 24 hours, he and his family would be eliminated.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am