ಬ್ರೇಕಿಂಗ್ ನ್ಯೂಸ್
18-08-21 12:02 pm Mangaluru Correspondent ಕ್ರೈಂ
ಮೂಡುಬಿದ್ರೆ, ಆಗಸ್ಟ್ 18: ಪತ್ನಿಯ ಮೇಲಿನ ಸಂಶಯದಿಂದ ಆಕೆಯನ್ನು ಒನಕೆ ಮಾದರಿಯ ಕಟ್ಟಿಗೆಯಿಂದ ಹೊಡೆದು ಕೊಂದ ಘಟನೆ ಇಲ್ಲಿನ ದರೆಗುಡ್ಡೆಯಲ್ಲಿ ನಡೆದಿದೆ. ಆದರೆ, ತನ್ನ ಕೃತ್ಯ ಮರೆಮಾಚಲು ಮಹಡಿ ಮೇಲಿಂದ ಬಿದ್ದಿರುವುದಾಗಿ ಬಿಂಬಿಸಲು ಯತ್ನಿಸಿದ ವ್ಯಕ್ತಿ ಪೊಲೀಸರಿಂದ ಬಂಧನಕ್ಕೀಡಾಗಿದ್ದಾನೆ.
ಪತಿಯಿಂದಲೇ ತೀವ್ರ ಹಲ್ಲೆಗೀಡಾಗಿದ್ದ ಸುನೀತಾ (29) ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾಳೆ. ಆಕೆಯ ಪತಿ ದಿನರಾಜ್ (35) ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಂಜೆ ಮೂಡುಬಿದ್ರೆ ತಾಲೂಕಿನ ಬೆಳುವಾಯಿ ಬಳಿಯ ದರೆಗುಡ್ಡೆಯಲ್ಲಿ ಘಟನೆ ನಡೆದಿದೆ. ಒಂದೂವರೆ ವರ್ಷದ ಹಿಂದೆ ಸುನೀತಾ - ದಿನರಾಜ್ ಮದುವೆ ನಡೆದಿತ್ತು. ಸುನೀತಾ ಮನೆಯಲ್ಲಿ ತಾಯಿ ಒಬ್ಬರೇ ಇದ್ದುದರಿಂದ ತಾಯಿ ಮನೆಯಲ್ಲೇ ಉಳಿದುಕೊಂಡಿದ್ದಳು. ಅಲ್ಲದೆ, ಗಂಡ ದಿನರಾಜ್ ಕೂಡ ಅಲ್ಲಿಯೇ ಬಂದು ಹೋಗುತ್ತಿದ್ದ.
ಆದರೆ, ಪತ್ನಿಯ ಮೇಲೆ ಸಂಶಯ ದೃಷ್ಟಿಯಿಂದ ನೋಡುತ್ತಿದ್ದ ದಿನರಾಜ್, ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪತ್ನಿ ಮತ್ತು ಆಕೆಯ ತಾಯಿಗೆ ಹೊಡೆಯುತ್ತಿದ್ದ. ಇದೇ ವಿಚಾರದಲ್ಲಿ ಪತಿ, ಪತ್ನಿ ನಡುವೆ ಜಗಳ ನಡೆಯುತ್ತಿತ್ತು.
ನಿನ್ನೆ ಸಂಜೆ ಇವರ ನಡುವೆ ಜಗಳ ನಡೆದಿದ್ದು, ದಿನರಾಜ್ ಹೆಂಡತಿಯ ತಲೆಗೆ ಬಲಾಯಿ ಎನ್ನುವ ಸಲಾಕೆಯ ಹಿಡಿಯಲ್ಲಿ ಹೊಡೆದಿದ್ದಾನೆ. ತಲೆ, ಮುಖ, ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದು ರಕ್ತ ಸೋರತೊಡಗಿದ್ದು ಸುನೀತಾ ನೆಲಕ್ಕೆ ಉರುಳಿದ್ದಾಳೆ. ಬಳಿಕ ಆಕೆಯ ತಾಯಿ ಬೊಬ್ಬೆ ಹೊಡೆದಿದ್ದರಿಂದ ಪತ್ನಿಯನ್ನು ದಿನರಾಜನೇ ಬೆಳುವಾಯಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲು ತಂದಿದ್ದಾನೆ. ಆದರೆ, ಆಸ್ಪತ್ರೆಯಲ್ಲಿ ಪತ್ನಿ ಮಹಡಿ ಮೇಲಿಂದ ಬಿದ್ದು ಗಾಯವಾಗಿದ್ದೆಂದು ಸುಳ್ಳು ಹೇಳಿದ್ದಾನೆ. ಆದರೆ, ವೈದ್ಯರು ನೋಡಿ, ಈಕೆಯ ಸ್ಥಿತಿ ಗಂಭೀರ ಆಗಿರುವುದರಿಂದ ಕೂಡಲೇ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ. ಅಲ್ಲದೆ, ಆತನ ಹೇಳಿಕೆ ಮತ್ತು ಗಾಯದ ಮಾದರಿ ನೋಡಿ ಸಂಶಯಗೊಂಡು ಮೂಡುಬಿದ್ರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾರೀ ರಕ್ತಸ್ರಾವದ ಜೊತೆಗೆ ಮುಖ, ಕುತ್ತಿಗೆಯ ಭಾಗಕ್ಕೆ ಕಡಿದ ರೀತಿಯ ಗಾಯ ಆಗಿದ್ದರಿಂದ ವೈದ್ಯರು ಸಂಶಯಪಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆದರೆ, ನಿನ್ನೆ ರಾತ್ರಿ ಮಂಗಳೂರಿನ ಎಜೆ ಆಸ್ಪತ್ರೆಗೆ ತರುವಷ್ಟರಲ್ಲಿ ಭಾರೀ ರಕ್ತಸ್ರಾವದಿಂದಾಗಿ ಅಲ್ಲಿಗೆ ತಲುಪುವ ಮೊದಲೇ ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ ಮೂಡಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ವೇಳೆ ತಾನೇ ಹೊಡೆದಿದ್ದನ್ನು ಒಪ್ಪಿಕೊಂಡಿದ್ದಾನೆ.
ದಿನರಾಜ್ ಮೂಡುಬಿದ್ರೆಯ ಸ್ವರಾಜ್ಯ ಮೈದಾನದ ಬಳಿಯ ನಿವಾಸಿಯಾಗಿದ್ದು ಮದುವೆಯ ಬಳಿಕ ಪತ್ನಿ ಮನೆಯಲ್ಲೇ ಹೆಚ್ಚು ಇರುತ್ತಿದ್ದ. ದರಗುಡ್ಡೆಯ ರಾಜ್ ಭಟ್ ಎಂಬವರ ಮಠದ ಮನೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಿದ್ದ ಗಂಡ, ಹೆಂಡತಿ ನಡುವೆ ಜಗಳ ನಡೆದಿತ್ತು. ಇದೀಗ ಪತ್ನಿಯ ಕೊಲೆಯಲ್ಲಿ ಜಗಳ ಅಂತ್ಯವಾಗಿದೆ. ಪತಿ ಜೈಲು ಕಂಬಿ ಎಣಿಸುವಂತಾಗಿದೆ.
Video:
Moodbidri Husband kills wife using wooden pestle. The deceased has been identified as Sunitha (29). It is said they got married a year back. Due to suspicion on wife they had fights everyday but yesterday fight has lead to the murder of wife. Husband had fooled the doctors that she fell from the staircase and was severely injured. Husband Dinaraj has been arrested by Moodbidri Police.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am