ಬ್ರೇಕಿಂಗ್ ನ್ಯೂಸ್
10-08-21 01:00 pm Mangaluru Correspondent ಕ್ರೈಂ
ಉಳ್ಳಾಲ, ಆ.10: ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಖಾತೆಯಿಂದ 3 ಲಕ್ಷ ಅವ್ಯವಹಾರ ನಡೆಸಿದ್ದ ಆರೋಪ ಹೊತ್ತಿರುವ ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ದೇವಸ್ಥಾನದ ವಿಚಾರದಲ್ಲಿ ವಾಗ್ವಾದ ನಡೆಸುತ್ತಾ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರ ಮನೆಗೆ ನುಗ್ಗಿ ಜೀವಬೆದರಿಕೆ ಹಾಕಿದ್ದಾರೆ.
ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯಲ್ಲಿ ಕಾರ್ಯದರ್ಶಿಯಾಗಿದ್ದ ಮೋಹನದಾಸ್ ಶೆಟ್ಟಿ ಕಿನ್ಯ ಎಂಬವರು ಬ್ರಹ್ಮರಥ ನಿರ್ಮಾಣಕ್ಕೆಂದು ಮುಂಗಡ ಹಣ 3 ಲಕ್ಷ ರೂಪಾಯಿಗಳನ್ನು ಪಡೆದಿದ್ದು ಅದನ್ನು ತನ್ನ ಖಾತೆಗೆ ವರ್ಗಾಯಿಸಿದ್ದರು. ಈ ವಿಚಾರದಲ್ಲಿ ವಿವಾದ ಉಂಟಾಗಿ ಇತ್ತೀಚೆಗೆ 3 ಲಕ್ಷ ರೂ. ಹಣವನ್ನ ನಗದು ರೂಪದಲ್ಲಿ ಹಿಂದಿರುಗಿಸಿದ್ದರು. ಈ ಎಲ್ಲ ವಿದ್ಯಮಾನಗಳ ಬಗ್ಗೆ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ಥಳೀಯ ಭಕ್ತರ ವಾಟ್ಸಪ್ ಗ್ರೂಪಲ್ಲಿ ಬಂದ ಪತ್ರಿಕೆಯೊಂದರ ವರದಿಗೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಅವರು ಪ್ರತಿಕ್ರಿಯೆಯಾಗಿ 'ಮೀಟಿಂಗ್ ಡು ಆತಿನವೇ ಬೇತೆ,ಪೇಪರ್ ಡ್ ಬತ್ತಿನವೇ ಬೇತೆ, ಅಪ್ಪೆಗ್ ಸರಿ ತೋಜುಂಡ ಅವ್ವೆ ಸರಿ' (ದೇವಸ್ಥಾನದ ಸಭೆಯಲ್ಲಿ ನಡೆದದ್ದೇ ಬೇರೆ. ಪತ್ರಿಕೆಯಲ್ಲಿ ಬಂದದ್ದೇ ಬೇರೆ, ದೇವಿಗೆ ಸರಿ ಕಂಡರೆ ಅದೇ ಸರಿ) ಎಂದು ಕಮೆಂಟ್ ಹಾಕಿದ್ದರು. ಇದರಿಂದ ಕ್ರುದ್ಧಗೊಂಡ ಮೋಹನ್ ದಾಸ್ ಶೆಟ್ಟಿ ಮತ್ತು ಆತನ ಬಾವ ಉದಯ್ ಶೆಟ್ಟಿ ನಿನ್ನೆ ಸಂಜೆ ಪಾನಮತ್ತರಾಗಿ ಯಶು ಪಕ್ಕಳ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನ ಜೀವವನ್ನು ನಾನೇ ತೆಗೆಯೋದು ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ಯಶು ಪಕ್ಕಳ ದೂರು ನೀಡಿದ್ದಾರೆ.
ಯಶು ಪಕ್ಳಳರನ್ನು ಉದ್ದೇಶಿಸಿ ಮಾತನಾಡಿದ ಮೋಹನದಾಸ್ ಅವರು ನನ್ನಿಂದಲೇ ನಿನ್ನ ಪ್ರಾಣ ಹೋಗುವುದು, ಪೊಲೀಸರಿಗೆ ನೀನು ದೂರು ನೀಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಯಶು ಅವರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಮೋಹನ್ ದಾಸ್ ಮತ್ತು ಆತನ ಬಾವ ಮನೆ ಆವರಣದೊಳಗೆ ನುಗ್ಗಿ ಬೆದರಿಕೆ ಹಾಕಿದ ವೀಡಿಯೋವನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.
ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ದಿಗಾಗಿ ಜಮೀನು ಬಿಟ್ಟು ಕೊಟ್ಟ ಕುಟುಂಬ ಯಶು ಪಕ್ಕಳ ಅವರಾಗಿದೆ. ಅಲ್ಲದೆ ಸ್ಥಳೀಯವಾಗಿ ನಡೆಯುವ ಅಕ್ರಮ ಮರಳುಗಾರಿಕೆ ಮತ್ತು ಇತರ ಅಕ್ರಮಗಳ ಬಗ್ಗೆ ಯಶು ಪಕ್ಕಳ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದು ಅಕ್ರಮಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
Talapdy Mohan das Shetty of Shree Durgaparameshwari Temple frightens life threat to social activist Yashu Pakkala.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm