ಬ್ರೇಕಿಂಗ್ ನ್ಯೂಸ್
10-08-21 11:41 am Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 10: ಆನ್ಲೈನ್ ಮೂಲಕ ಉದ್ಯೋಗ ಕೊಡಿಸುವ ಆಮಿಷವೊಡ್ಡಿದ ಖದೀಮರು ಮಹಿಳೆಯೊಬ್ಬರನ್ನು ಸಂಪರ್ಕಿಸಿ, 5.61 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಲ್ಕಣಿ ಜಾನ್ಸ್ ವೀವ್ ನಿವಾಸಿ ರವಿಶಂಕರ್ ಡಿ.ಕೆ. ಅವರ ಪತ್ನಿ ಪೂರ್ಣಿಮಾ ಆರ್. ವಂಚನೆಗೆ ಒಳಗಾದ ಮಹಿಳೆ. ಖದೀಮರು ಪೂರ್ಣಿಮಾ ಅವರ ಮೊಬೈಲ್‌ಗೆ ಜೂನ್ 28ರಂದು ಅಪರಿಚಿತ 9324118159 ಸಂಖ್ಯೆಯಿಂದ ಕರೆ ಮಾಡಿ ನಾನು ಕಾರ್ತಿಕ್, ಪಾರ್ಟ್ ಟೈಮ್ ಕೆಲಸಕ್ಕೆ ತುರ್ತಾಗಿ ನೇಮಕಾತಿ ಮಾಡುತ್ತಿದ್ದು, ನೀವು ಪ್ರತಿದಿನ 3,000ದಿಂದ 8,000 ರೂ. ವರೆಗೆ ಗಳಿಸಬಹುದು ಎಂದು ಹೇಳಿದ್ದರು.


ಉದ್ಯೋಗಕ್ಕಾಗಿ ಆನ್ ಲೈನ್ ಮೂಲಕ (hhtps://wa.me/+917259213629) ಸಂಪರ್ಕಿಸುವಂತೆ ಸಂದೇಶ ಕಳುಹಿಸಲಾಗಿತ್ತು. ಇದನ್ನು ನಂಬಿದ್ದ ಮಹಿಳೆ ಅದೇ ಸಂಖ್ಯೆಗೆ ಸಂಪರ್ಕಿಸಿದಾಗ (hhtps://fun-earn.com/Home/Public/reg/smid/478150) ಲಿಂಕ್ ಕಳುಹಿಸಲಾಗಿದೆ. ಲಿಂಕ್‌ನಲ್ಲಿ ರಿಜಿಸ್ಟರ್ ಮಾಡಿದಾಗ ಪೂರ್ಣಿಮಾ ಖಾತೆಗೆ 100 ರೂ. ಜಮೆಯಾಗಿದೆ.
ಅನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್‌ಸೈಟ್‌ನಲ್ಲಿ ಮಹಿಳೆಗೆ ಒಂದೊಂದೇ ಟಾಸ್ಕ್ ನೀಡಿ 8 ಟಾಸ್ಕ್‌ಗಳ ಮೂಲಕ ಒಟ್ಟು 5,61,537 ರೂ. ಲಪಟಾಯಿಸಿ ವಂಚಿಸಿದ್ದಾನೆ. ಈ ಸಂಬಂಧ ಪೂರ್ಣಿಮಾ ಆರ್. ಅವರು ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Belthanagady Online job offer fraud woman loses 51 lakhs case filed at cyber crime police station.
30-10-25 11:00 pm
Bangalore Correspondent
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ನ.5ರಂದು ಮತ್ತೊಂದ...
30-10-25 06:22 pm
ಸಿದ್ದರಾಮಯ್ಯ ಅವರೇ ಐದು ವರ್ಷಗಳಿಗೆ ಮುಖ್ಯಮಂತ್ರಿಯೆಂ...
30-10-25 04:34 pm
ಬೆಂಗಳೂರು ; ಕಾರಿನ ಮಿರ್ರ್ಗೆ ಬೈಕ್ ಟಚ್ ಆಗಿದ್ದ...
29-10-25 09:12 pm
30-10-25 03:20 pm
HK News Desk
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
30-10-25 08:06 pm
Mangalore Correspondent
ರಸ್ತೆ ಗುಂಡಿ ಮುಚ್ಚಿಸಲು ಹಣವಿಲ್ಲದ ಸರ್ಕಾರಕ್ಕೆ ಶಾಸ...
30-10-25 07:28 pm
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮದುವೆಗೆ ಬರುತ್ತಿದ್ದ ಟೆ...
30-10-25 03:23 pm
ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರಧಾನಿ...
30-10-25 11:28 am
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm