ಬ್ರೇಕಿಂಗ್ ನ್ಯೂಸ್
16-07-21 07:34 pm Mangaluru Correspondent ಕ್ರೈಂ
ಮಂಗಳೂರು, ಜುಲೈ 16: ಕಿರಿಯ ವಿದ್ಯಾರ್ಥಿಯೊಬ್ಬನಿಗೆ ರ್ಯಾಗಿಂಗ್ ಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಆರು ಮಂದಿ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಇಂದಿರಾ ನರ್ಸಿಂಗ್ ಕಾಲೇಜಿನ 2ನೇ ವರ್ಷದ ಬಿಎಸ್ಸಿ ವಿದ್ಯಾರ್ಥಿ ಆಗಿರುವ ಕೇರಳ ಮೂಲದ ಮ್ಯಾನುಯಲ್ ಬಾಬು ಎಂಬಾತ ದೂರುದಾರನಾಗಿದ್ದು, ಪೊಲೀಸರು ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೈನ್ ಮತ್ತು ಲಿಮ್ಸ್ ಎಂಬ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಮ್ಯಾನುಯಲ್ ಬಾಬು ಅತ್ತಾವರದ ಫ್ಲಾಟ್ ಒಂದರಲ್ಲಿ ಇತರ ಸ್ನೇಹಿತರೊಂದಿಗೆ ವಾಸವಿದ್ದು, ಜುಲೈ 14ರಂದು ರಾತ್ರಿ 8 ಗಂಟೆಗೆ ಫಳ್ನೀರಿನ ಹೊಟೇಲ್ ಒಂದಕ್ಕೆ ತೆರಳಿದ್ದ. ಅವಿನಾಶ್, ಅಶ್ವಿನ್, ಜೋಬಿನ್ ಹಾಗೂ ಶಾಕೀರ್ ಎಂಬವರ ಜೊತೆ ಹೊಟೇಲಿನಲ್ಲಿದ್ದಾಗ, ಸೀನಿಯರ್ ವಿದ್ಯಾರ್ಥಿಗಳಾಗಿರುವ ಶ್ರೀಲಾಲ್ ಮತ್ತು ಆತನ ಸ್ನೇಹಿತರು ಬಂದು ರಾಗಿಂಗ್ ಮಾಡಿದ್ದಾರೆ. ಏಯ್, ನಾನು ಕಾಲೇಜಿನಲ್ಲಿ ಸೀನಿಯರ್ ಇದ್ದೀನಿ. ನಾವು ಬರುವಾಗ ನೀನು ಎದ್ದು ನಿಂತು ರೆಸ್ಪೆಕ್ಟ್ ಕೊಡಬೇಕು, ಏನ್ ಮುಖ ನೋಡ್ತೀಯಾ ಎಂದು ದಬಾಯಿಸಿದ್ದಾರೆ.
ಆಬಳಿಕ ರಾತ್ರಿ 10 ಗಂಟೆ ವೇಳೆಗೆ ಮ್ಯಾನುಯಲ್ ಬಾಬು ನೆಲೆಸಿದ್ದ ಫ್ಲಾಟಿಗೆ ನುಗ್ಗಿ, ಅಲ್ಲಿಯೂ ಅದೇ ರೀತಿ ರಾಗಿಂಗ್ ಮಾಡಿ, ಕಿರುಕುಳ ನೀಡಿದ್ದಾರೆ. ನಾವು ಸೀನಿಯರ್. ನಾವು ಬರುವಾಗ ನೀನು ತಲೆತಗ್ಗಿಸಿ ಕುಳಿತುಕೊಳ್ಳಬೇಕು. ನಾವು ಹೇಳಿದಂತೆ ಕೇಳಬೇಕು ಎಂದು ಹೇಳಿದ್ದಲ್ಲದೆ, ಶರ್ಟ್ ಬಿಚ್ಚಿಸಿ ಚಡ್ಡಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಪದೇ ಪದೇ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಹೇಳಿದ್ದು ಕೇಳದೇ ಇದ್ದುದಕ್ಕೆ ಶ್ರೀಲಾಲ್ ಮತ್ತು ಲಿಮ್ಸ್ ಎಂಬವರು ಸೇರಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ನೀನು ಕಾಲೇಜಿಗೆ ಬರುವಾಗಲೂ ನಮ್ಮನ್ನು ನೋಡಿ ತಲೆ ಅಡಿಗೆ ಹಾಕ್ಕೊಂಡು ಹೋಗಬೇಕು. ಇಲ್ಲದೇ ಇದ್ದಲ್ಲಿ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದರು ಎಂದು ಮ್ಯಾನುವಲ್ ಪೊಲೀಸರಿಗೆ ದೂರು ನೀಡಿದ್ದ.
ರಾಗಿಂಗ್ ಮಾಡಿರುವ ವಿದ್ಯಾರ್ಥಿಗಳು ಕೂಡ ಕೇರಳದವರಾಗಿದ್ದು, ಪೊಲೀಸರು ಅವರನ್ನು ಬಂಧಿಸಿ ಕಲಂ 143, 147, 148, 448, 323, 324, 504, 506 ಮತ್ತು 149 ಹಾಗೂ ಕಲಂ 116 ಎಜುಕೇಶನ್ ಆಕ್ಟ್ ಪ್ರಕಾರ ಕ್ರಮ ಜರುಗಿಸಿದ್ದಾರೆ.
Mangaluru city police have arrested six students of a private nursing college in the city here on Friday, July 16 for allegedly ragging the junior students. The arrested accused are identified as 20-year-olds Shreelal, Shahid, Amjad, Juraij, Hussain and Lims. As per the complaint filed by the complainants, on July 14 at 8 pm they had been to dinner at the Fil Fil restaurant in Falnir When the victims were having their dinner, accused Shreelal, who is also their senior in college, abused them. He said to have used foul language and made a comment stating that 'juniors should respect the seniors'.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am