ಬ್ರೇಕಿಂಗ್ ನ್ಯೂಸ್
11-07-21 09:34 pm Bengaluru Correspondent ಕ್ರೈಂ
ಮೈಸೂರು, ಜುಲೈ 11: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಬಳಸಿಕೊಂಡು ಪೋರ್ಜರಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚಿಸುವ ಪ್ರಯತ್ನ ನಡೆದಿದ್ದು ಬೆಳಕಿಗೆ ಬಂದಿದ್ದು ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಖುದ್ದು ನಟ ದರ್ಶನ್ ಅವರನ್ನೂ ಕರೆಸಿಕೊಂಡು ಪೊಲೀಸರು ಹೇಳಿಕೆ ದಾಖಲಿಸಿದ್ದಾರೆ.
ನಟ ದರ್ಶನ್ ಹೆಸರಲ್ಲಿ ಫೋರ್ಜರಿ ದಾಖಲೆ ಸೃಷ್ಟಿಸಿ, ಅವರ ಅಭಿಮಾನಿಗಳ ಹೆಸರಲ್ಲಿ 25 ಕೋಟಿ ರೂ. ಬ್ಯಾಂಕ್ ಸಾಲ ಪಡೆಯಲು ಪ್ರಯತ್ನ ನಡೆದಿದೆ ಎನ್ನೋದು ಮೇಲ್ನೋಟಕ್ಕೆ ತಿಳಿದುಬಂದಿದೆ. ಇದೇ ತಿಂಗಳು ಮೂರರಂದು ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಆಪ್ತ ಹರ್ಷ ಮೇಲಂಟ ದೂರು ನೀಡಿದ್ದರು. ಬೆಂಗಳೂರು ಮೂಲದ ಅರುಣಾ ಕುಮಾರಿ ಅನ್ನೋ ಮಹಿಳೆ, ತಾವೊಬ್ಬ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಮೈಸೂರಿನಲ್ಲಿ ದರ್ಶನ್ ಸ್ನೇಹಿತರನ್ನು ಭೇಟಿ ಮಾಡಿದ್ದು ದರ್ಶನ್ ಅವರ ದಾಖಲೆ ಫೋರ್ಜರಿ ಮಾಡಿದ್ದೀರಾ ಅಂತ ಕೇಳಿದ್ದಾರೆ. ನಾವು ಯಾವುದೇ ಲೋನ್ ಗೆ ಅರ್ಜಿ ಹಾಕಿಲ್ಲ ಎಂದು ಹರ್ಷ ಹೇಳಿದ್ದರು. ಜತೆಗೆ ಮಹಿಳೆ ಅರುಣ ಕುಮಾರಿ ಫೋರ್ಜರಿ ದಾಖಲೆ ನೀಡಲು ಹರ್ಷ ಅನ್ನುವವರ ಬಳಿ 25 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಪ್ರಕರಣ ಸಂಬಂಧ ಹರ್ಷ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಿದ್ದರು.
ಈ ನಡುವೆ, ಪ್ರಕರಣದ ಬಗ್ಗೆ ತಿಳಿದು ಮೈಸೂರಿನ ಎಸಿಪಿ ಕಚೇರಿಗೆ ಆಗಮಿಸಿ ನಟ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದರ್ಶನ್, ನನ್ನ ದಾಖಲೆ ಫೋರ್ಜರಿ ಆಗಿದೆ ಅಂತ ತಿಳಿದು ಎಸಿಪಿ ಕಚೇರಿಗೆ ಬಂದಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆ ಮಹಿಳೆ ನಕಲಿ ಬ್ಯಾಂಕ್ ಅಧಿಕಾರಿ ಅಂತಾನೂ ಗೊತ್ತಾಗಿದೆ. ಒಂದು ವೇಳೆ ತನ್ನ ಜೊತೆಗಿದ್ದವ್ರೆ ಈ ಷಡ್ಯಂತ್ರ ಮಾಡಿದ್ದಾರೆ ಅನ್ನೋದು ಗೊತ್ತಾದ್ರೆ ಅವರ ತಲೆಯನ್ನೇ ತಗೆಯುತ್ತೇನೆ ಅಂತ ವಾರ್ನ್ ಮಾಡಿದ್ದಾರೆ.
ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿಯೇ ಈ ನಕಲಿ ಬ್ಯಾಂಕ್ ಅಧಿಕಾರಿಯನ್ನು ನಟ ದರ್ಶನ್ ಸ್ನೇಹಿತರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಆಪ್ತರಾಗಿರೋ ಮೈಸೂರಿನ ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ಅವರನ್ನು ದರ್ಶನ್ ಅವರಿಂದ ದೂರ ಮಾಡಲು ನಕಲಿ ಬ್ಯಾಂಕ್ ಅಧಿಕಾರಿ ಸೃಷ್ಟಿ ಮಾಡಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ. ಪೊಲೀಸರ ವಿಚಾರಣೆಯಲ್ಲಿ ಮಹಿಳೆ ಅರುಣಾ ಕುಮಾರಿ, ನಿರ್ಮಾಪಕ ಉಮಾಪತಿ ಹೆಸರು ಹೇಳಿದ್ದಾಳೆ. ಹೀಗಾಗಿ ಉಮಾಪತಿಯನ್ನು ಕೂಡ ಪೊಲೀಸರು ವಿಚಾರಣೆಗೆ ಕರೆದಿದ್ದರು.
ಪ್ರಕರಣದ ಬಗ್ಗೆ ವಿವರ ನೀಡಲು ಡಿಸಿಪಿ ಪ್ರದೀಪ್ ಗುಂಟಿ ನಿರಾಕರಿಸಿದ್ದಾರೆ. ಆಸ್ತಿಗೆ ಸಂಬಂಧಪಟ್ಟ ನಕಲಿ ದಾಖಲೆ ಸೃಷ್ಟಿಸಿ, ಲೋನ್ ಕೊಡಿಸುವ ನೆಪದಲ್ಲಿ ವಂಚನೆಗೆ ಪ್ರಯತ್ನ ಮಾಡಲಾಗಿದೆ. ಇದುವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದಿದ್ದಾರೆ.
Kannada Actor Darshan name Misused to create Fake documents by Woman bank Manager. She had plotted to take a loan of 25 cores by suing fake forgery documents in the name of Actor. A case has been registered the Hebbal Police station.
20-08-25 12:33 pm
Bangalore Correspondent
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
20-08-25 11:01 am
HK News Desk
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm