ಬ್ರೇಕಿಂಗ್ ನ್ಯೂಸ್
23-06-21 12:50 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 23: ಪಿಜಿಯಲ್ಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಮಂದಿ ಡ್ರಗ್ ಪೆಡ್ಲರ್ಸ್ ಗಳನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 300 ಎಂಡಿಎಂಎ ಮಾತ್ರೆ, ಎಕ್ಸ್ಟಸಿ ಮಾತ್ರೆಗಳು, 150 ಎಲ್ಎಸ್ಡಿ ಸ್ಟ್ರಿಪ್ಸ್, 250 ಗ್ರಾಂ ಅಶೀಶ್, 1 ಕೆಜಿ ಗಾಂಜಾ ಸೇರಿದಂತೆ 30 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಡಾರ್ಕ್ ವೆಬ್ ಮುಕಾಂತರ ಡ್ರಗ್ಸ್ ಖರೀದಿಸುತ್ತಿದ್ದರು. ಬಂಧಿತರಲ್ಲಿ ಇಬ್ಬರು ಟೆಕ್ಕಿಗಳು, ಒಬ್ಬ ಕಾನೂನು ವಿದ್ಯಾರ್ಥಿ ಎಂದು ವಿಚಾರಣೆ ತಿಳಿದುಬಂದಿದೆ.
ಫುಡ್ ಪಾರ್ಸೆಲ್ನಂತೆ ಪ್ಯಾಕ್ ಮಾಡಿ ಡ್ರಗ್ಸ್ನ ಐ ಕ್ಲಾಸ್ ವಿದ್ಯಾರ್ಥಿಗಳಿಗೆ ಸಪ್ಲೈ ಮಾಡುತ್ತಿದ್ದರು. ಡ್ರಗ್ಸ್ ಸಪ್ಲೈ ಮಾಡಿ ಆರೋಪಿಗಳು ಗೂಗಲ್ ಪೇ ಮುಕಾಂತರ ಹಣ ಪಡೆಯುತ್ತಿದ್ದರು. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಸಿಸಿಬಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.
ಅಮೇಜಾನ್ ಪಾರ್ಸಲ್ ಬಾಕ್ಸ್ ನಲ್ಲಿ ಡ್ರಗ್ಸ್ ಸಪ್ಲೈ ;
ಆರೋಪಿಗಳು ಡ್ರಗ್ಸ್ನ ಅಮೇಜಾನ್ ಪ್ಯಾಕ್ಗಳಲ್ಲಿ ಹಾಕಿ ಪ್ಯಾಕ್ ಮಾಡುತಿದ್ದರು. ಬಳಿಕ ಅದಕ್ಕೆ ಅಮೇಜಾನ್ ಟೇಪ್ಗಳಿಂದ, ವ್ಯಾಕ್ಯೂಮ್ ಫುಡ್ ಸೀಲ್ಗಳಿಂದ ಸೀಲು ಮಾಡುತಿದ್ದರು. ಅದನ್ನು ಡೊನ್ಜೊ ಮುಖಾಂತರ ಗಿರಾಕಿಗಳಿಗೆ ನೀಡುತಿದ್ದರು.
ಡಾರ್ಕ್ ವೆಬ್ ನಲ್ಲಿ ಡ್ರಗ್ಸ್ ಖರೀದಿ;
ಹಿಮಾಚಲ ಪ್ರದೇಶದಲ್ಲಿ ಕುಳಿತ ಮೂವರು ಆರೋಪಿಗಳು ಡಾರ್ಕ್ ವೆಬ್ನಲ್ಲಿ ಡ್ರಗ್ ಖರೀದಿ ಮಾಡುತಿದ್ದರು. ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಸಿ ಡ್ರಗ್ ಖರೀದಿಸುತ್ತಿದ್ದರು. ಖರೀದಿಸಿದ ಡ್ರಗ್ಗಳು ಕೊರಿಯರ್ ಮುಖಾಂತರ ಹಿಮಾಚಲ ಪ್ರದೇಶಕ್ಕೆ ಬರುತಿತ್ತು. ಬಂದ ಡ್ರಗ್ಗಳನ್ನು ವ್ಯವಸ್ಥಿತವಾಗಿ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಸಾಗಿಸುತ್ತಿದ್ದರು.
Bangalore Byadarahalli police raid on Hostel PG arrest three peddlers 30 lakhs worth drugs seized. The other two techies who were involved have said to be absconding. The drugs were purchased using Dark web.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am