ಬ್ರೇಕಿಂಗ್ ನ್ಯೂಸ್
22-06-21 08:07 pm Satish, Bengaluru ಕ್ರೈಂ
ಬೆಂಗಳೂರು, ಜೂನ್ 22: ಟೆಕ್ಕಿಯೊಬ್ಬರು ಕೊರೊನಾ ಸೋಂಕಿನಿಂದ ತನ್ನ ಹೆಂಡತಿಯನ್ನು ಕಳೆದುಕೊಂಡಿರುವ ನಡುವಲ್ಲೇ ಆತನ ಸ್ವಂತ ಕುಟುಂಬಸ್ಥರೇ ಬೆನ್ನಿಗೆ ಚೂರಿ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜರಾಜೇಶ್ವರಿ ನಗರದ ಪ್ರವೀಣ್ ಹಾಗೂ ನಿಮಿತಾ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಗಳಾಗಿದ್ದರು. ಈ ನಡುವೆ ನಿಮಿತಾ ಕಳೆದ ಏಪ್ರಿಲ್ 20ರಂದು ಕೊರೊನಾ ಸೋಂಕಿಗೆ ಒಳಗಾಗಿ ಉಸಿರಾಟದ ಸಮಸ್ಯೆಗೆ ಸಿಲುಕಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 2ರಂದು ಮೃತಪಟ್ಟಿದ್ದರು.

ಆಬಳಿಕ ಮೇ 13ಕ್ಕೆ ಪತ್ನಿಯ ಸಾವಿನ ತಿಥಿ ಕಾರ್ಯ ಮಾಡಲು ಪತಿ ಪ್ರವೀಣ್ ಹಾಗೂ ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ, ಪತ್ನಿಯ ಕುಟುಂಬಸ್ಥರು ನಿಮಿತಾ ಮೃತಪಟ್ಟ ಸಮಯ ಸರಿಯಿಲ್ಲ. ಅಪಶಕುನ ಇದೆ. ಮೂರು ತಿಂಗಳ ಕಾಲ ನೀನು ಮನೆಗೆ ಬರುವುದು ಬೇಡ ಎಂದು ಪ್ರವೀಣ್ ಅವರನ್ನು ನಿಮಿತಾ ಕುಟುಂಬಸ್ಥರು ಬೇರೆಡೆ ಕಳುಹಿಸಿದ್ದಾರೆ.
ಆದರೆ, ಪ್ರವೀಣ್ ಒಂದು ತಿಂಗಳು ಆಗುವಷ್ಟರಲ್ಲಿ ಮನೆಗೆ ಮರಳಿದ್ದಾರೆ. ಮನೆಗೆ ಬಂದು ನೋಡಿದಾಗ, ಪ್ರವೀಣ್ ಗೆ ಆಘಾತ ಕಾದಿತ್ತು. ಮನೆಯಲ್ಲಿದ್ದ ಆರು ಲಕ್ಷ ರೂ. ಮೌಲ್ಯದ ಪತ್ನಿಯ ಚಿನ್ನಾಭರಣ ಹಾಗೂ ಮೂರು ಲಕ್ಷ ರೂ. ನಗದು, ಕಾರನ್ನು ಸಂಬಂಧಿಕರು ದೋಚಿದ್ದು ಕಂಡುಬಂದಿದೆ. ಪತ್ನಿಯ ಬಾವ ಶಿವಪ್ಪ ಹಾಗೂ ಆಕೆಯ ಸೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ಪ್ರವೀಣ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ಬದಲು ಎನ್‌ಸಿಆರ್ ದಾಖಲಿಸಿ ರಾಜಿಯಲ್ಲಿ ಮುಗಿಸಲು ನೋಡಿದ್ದಾರೆ. ದೂರಿನ ಬಗ್ಗೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸದೇ ಆರೋಪಿಗಳ ಪರ ವಕಾಲತ್ತು ವಹಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.
Bangalore Family loots Gold cash and car from Man who lost his wife due to Covid. A case has been registered at the R R Nagar Police Station.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm