ಬ್ರೇಕಿಂಗ್ ನ್ಯೂಸ್
28-05-21 04:44 pm Mangalore Correspondent ಕ್ರೈಂ
ಮಂಗಳೂರು, ಮೇ 28: ಭಾರೀ ಪ್ರಮಾಣದ ಚಿನ್ನದ ಪಾರ್ಸೆಲನ್ನು ಮೂಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ದರೋಡೆಗೈದ ಪ್ರಕರಣ ಬೆಳಕಿಗೆ ಬಂದಿದ್ದು ಈ ಸಂಬಂಧ ಕಾಸರಗೋಡಿನ ಉಪ್ಪಳ ಮೂಲದ ಕತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದಾರೆ. ಇದೇ ವೇಳೆ, ದರೋಡೆಗೈದ ಚಿನ್ನವನ್ನು ವಸೂಲಿ ಮಾಡುವುದಾಗಿ ಹೇಳಿ 5 ಲಕ್ಷ ಸುಪಾರಿ ಪಡೆದು ಹೊಂಚು ಹಾಕಿದ್ದ ರೌಡಿಗಳ ತಂಡವನ್ನೂ ಪೊಲೀಸರು ಸೆರೆಹಿಡಿದಿದ್ದಾರೆ. ಮೂಡುಬಿದ್ರೆ ಮತ್ತು ಮಂಗಳೂರಿನ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಪ್ರತ್ಯೇಕ ರೌಡಿ ಗ್ಯಾಂಗಿನ ಖದೀಮರು ಸಿಕ್ಕಿಬಿದ್ದಿದ್ದಾರೆ.
ಮೇ 21ರಂದು 440 ಗ್ರಾಂ ಚಿನ್ನದ ಪಾರ್ಸೆಲ್ ದರೋಡೆ ಆಗಿರುವ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಂಬೈ ಮೂಲದ ರೆಹಮಾನ್ ಶೇಖ್ ಎಂಬಾತ ಬೆಂಗಳೂರಿನ ತನ್ನ ಸಂಬಂಧಿಕ ಹೈದರಾಲಿಗೆ ನೀಡುವಂತೆ ಹೇಳಿ ಮೂಡುಬಿದ್ರಿ ನಿವಾಸಿ ವಕಾರ್ ಯೂನುಸ್ ಬಳಿ ಚಿನ್ನದ ಪಾರ್ಸೆಲ್ ಕಳುಹಿಸಿದ್ದ. ವಕಾರ್ ಯೂನುಸ್ ಚಿನ್ನದ ಪಾರ್ಸೆಲನ್ನು ಒಯ್ಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಆತನ ಸ್ನೇಹಿತ ಮೊಹಮ್ಮದ್ ಮಹಜ್, ಪಾರ್ಸೆಲ್ ಸಹಿತ ಮೂಡುಬಿದ್ರೆಯ ಬೆಳುವಾಯಿಗೆ ಬರುವಂತೆ ತಿಳಿಸಿದ್ದ. ಅದರಂತೆ, ಕಾರಿನಲ್ಲಿ ಮೂಡುಬಿದ್ರೆಯ ಪುಚ್ಚೆಮೊಗರಿಗೆ ಬರುತ್ತಿದ್ದಂತೆ ಯೂನುಸನ್ನು ಕಾರು ಸಹಿತ ಮಹಜ್ ಅಪಹರಿಸಿದ್ದು, ಕೇರಳಕ್ಕೆ ಒಯ್ದಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಯೂನುಸನ್ನು ಬಿಟ್ಟು ಕಳುಹಿಸಿ, ಚಿನ್ನದ ಗಟ್ಟಿಯ ಪಾರ್ಸೆಲನ್ನು ದರೋಡೆ ಮಾಡಿದ್ದರು.
ಚಿನ್ನದ ಗಟ್ಟಿಯ ವಸೂಲಿಗೆ ಸುಪಾರಿ
ಇದೇ ವೇಳೆ, ವಕಾರ್ ಯೂನುಸ್ ಬಳಿ ರೆಹಮಾನ್ ಶೇಖ್ ಮತ್ತು ಹೈದರಾಲಿ ಚಿನ್ನದ ಗಟ್ಟಿಯ ಪಾರ್ಸೆಲ್ ಬಗ್ಗೆ ಕೇಳಿದ್ದು, ತಮ್ಮ ಚಿನ್ನವನ್ನು ವಾಪಸ್ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ, ಪಣಂಬೂರಿನ ಕುಖ್ಯಾತ ರೌಡಿ ಪಟ್ಟೋಡಿ ಸಲಾಂಗೆ ಚಿನ್ನ ವಸೂಲಿ ಮಾಡಿಕೊಡುವಂತೆ ರೆಹಮಾನ್ ಶೇಖ್ 5 ಲಕ್ಷ ಸುಪಾರಿ ನೀಡಿದ್ದು, ವಕಾರ್ ಮನೆಗೆ ಬಂದು ಸಲಾಂ ಬೆದರಿಕೆ ಹಾಕಿದ್ದ. ಇತ್ತ ಒತ್ತಡ ಬೀಳುತ್ತಿದ್ದಂತೆ ಭಯಗೊಂಡ ವಕಾರ್ ಮೂಡುಬಿದ್ರೆ ಠಾಣೆಯಲ್ಲಿ ಕೇಸು ದಾಖಲಿಸಿದ್ದ. ಹಾಗಾಗಿ, ಮೇ 6ರಂದು ದರೋಡೆ ಘಟನೆ ನಡೆದಿದ್ದರೂ, 15 ದಿನಗಳ ನಂತರ ಮೇ 21ರಂದು ಪ್ರಕರಣ ದಾಖಲಾಗಿತ್ತು.
ಮೂಡುಬಿದ್ರೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಎರಡೇ ದಿನದಲ್ಲಿ ಉಪ್ಪಳದಲ್ಲಿ ಅಡಗಿಕೊಂಡಿದ್ದ ಮೊಹಮ್ಮದ್ ಮಹಜ್(20) ಮತ್ತು ಮೊಹಮ್ಮದ್ ಆದಿಲ್(25) ನನ್ನು ಬಂಧಿಸುತ್ತಾರೆ. ಮಹಜ್ ಮೂಡುಬಿದ್ರೆಯ ಬೆಳುವಾಯಿ ನಿವಾಸಿಯಾಗಿದ್ದರೆ, ಆದಿಲ್ ಉಪ್ಪಳ ಬಳಿಯ ಮನಿಮುಂಡ ನಿವಾಸಿ. ಇವರಿಬ್ಬರೂ ಕುಖ್ಯಾತ ಕ್ರಿಮಿನಲ್, ದಿವಂಗತ ಕಾಲಿಯಾ ರಫೀಕ್ ಎಂಬಾತನ ಮಗ ಕಾಲಿಯಾ ಸುಹೈಲ್ ಜೊತೆಗೆ ಗ್ಯಾಂಗಿನಲ್ಲಿ ಗುರುತಿಸಿದ್ದಾರೆ. ಸುಹೈಲ್ ಪ್ರಮುಖ ಆರೋಪಿಯಾಗಿದ್ದು ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದಾನೆ. ಇಬ್ಬರನ್ನು ವಶಕ್ಕೆ ಪಡೆದಾಗ, ಅವರು ಚಿನ್ನವನ್ನು ಕಾಞಂಗಾಡಿನ ಜುವೆಲ್ಲರಿಗೆ ಮಾರಿದ್ದು ಗೊತ್ತಾಗಿದ್ದು ಪೊಲೀಸರು ಅಲ್ಲಿಂದ 13,86,600 ರೂ. ಮೌಲ್ಯದ 300 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಚಿನ್ನ ವಸೂಲಿಗಿಳಿದು ತಾವೇ ಸಿಕ್ಕಿಬಿದ್ದ ಖದೀಮರು !
ಇದೇ ವೇಳೆ, ಸುಪಾರಿ ಪಡೆದು ಚಿನ್ನ ವಸೂಲಿಗಾಗಿ ಫೀಲ್ಡಿಗಿಳಿದಿದ್ದ ರೌಡಿ ಅಬ್ದುಲ್ ಸಲಾಂ ಅಲಿಯಾಸ್ ಪಟ್ಟೋಡಿ ಸಲಾಂ ಮತ್ತಾತನ ಗ್ಯಾಂಗ್ ಮಂಗಳೂರು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಜೋಕಟ್ಟೆಯ ಅಬ್ದುಲ್ ಸಲಾಂ ತನ್ನ ಸಹಚರ ಮಹಮ್ಮದ್ ಶಾರೂಕ್ (26) ಜೊತೆ ಸೇರಿ ಸುರತ್ಕಲ್ ನ ಮೌಲಾನಾ ಒಬ್ಬರ ಇನ್ನೋವಾ ಕಾರನ್ನು ಬುಕ್ ಮಾಡಿಕೊಂಡು ವಕಾರ್ ಯೂನುಸ್ ಮತ್ತು ಮಹಜ್ ಅವರನ್ನು ಅಪಹರಿಸಲು ಪ್ಲಾನ್ ಹಾಕಿದ್ದರು. ಇದಕ್ಕಾಗಿ ಮುಂಬೈನ ಚಿನ್ನದ ರೂವಾರಿ ರೆಹಮಾನ್ ಶೇಖನ ತಮ್ಮ ಅಬ್ದುಲ್ ಶೇಖ್ ಮುಂಬೈನ ನಾಲ್ಕು ಮಂದಿ ರೌಡಿಗಳನ್ನು ಕಟ್ಟಿಕೊಂಡು ಮಂಗಳೂರಿಗೆ ಬಂದಿದ್ದ. ಇದಲ್ಲದೆ, ಬೆಂಗಳೂರಿನ ಇಬ್ಬರು ರೌಡಿಗಳನ್ನೂ ಕರೆದು ಮಾರುತಿ ಸ್ವಿಫ್ಟ್ ಮತ್ತು ಇನ್ನೋವಾ ಕಾರಿನಲ್ಲಿ ಬೆಳುವಾಯಿ ಬಳಿ ಹೊಂಚು ಹಾಕಿದ್ದರು. ಇಬ್ಬರನ್ನೂ ಅಪಹರಿಸಿ, ಚಿನ್ನ ವಸೂಲಿಯಾಗದಿದ್ದರೆ ಕೊಲೆ ಮಾಡಲು ಪ್ಲಾನ್ ಹಾಕಿದ್ದ ತಂಡ ತಮಗೇ ಗೊತ್ತಿಲ್ಲದ ರೀತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿದ್ದ ಐದು ತಲವಾರು, ಹತ್ತು ಮೊಬೈಲ್ ಫೋನ್, ಎರಡು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಜೋಕಟ್ಟೆಯ ಅಬ್ದುಲ್ ಸಲಾಂ ಅಲಿಯಾಸ್ ಪಟ್ಟೋಡಿ ಸಲಾಂ (34), ಮಹಮ್ಮದ್ ಶಾರೂಕ್ (26), ಬೆಂಗಳೂರು ಜೆಪಿ ನಗರದ ಸೈಯದ್ ಹೈದರಾಲಿ(29), ಆಸಿಫ್ ಆಲಿ (28), ಮುಂಬೈ ಮೂಲದ ಅಬ್ದುಲ್ಲಾ ಶೇಖ್(22), ಶಾಬಾಸ್ ಹುಸೈನ್ (49), ಮುಶಾಹಿದ್ ಅನ್ಸಾರಿ(38), ಶೇಖ್ ಸಾಜಿದ್ ಹುಸೈನ್ (49), ಮುಸ್ತಾಕ್ ಖುರೇಷಿ (42) ಬಂಧಿತರು. ಪಟ್ಟೋಡಿ ಸಲಾಂ ವಿರುದ್ಧ ಕೊಲೆಯತ್ನ, ಹಲ್ಲೆ, ಜೀವ ಬೆದರಿಕೆ, ದರೋಡೆ ಇತ್ಯಾದಿ ಸೇರಿ ಹತ್ತಕ್ಕೂ ಹೆಚ್ಚು ಪ್ರಕರಣ ಇದ್ದು ಪಣಂಬೂರಿನಲ್ಲಿ ರೌಡಿಶೀಟರ್ ಆಗಿದ್ದಾನೆ. ಇವರನ್ನು ಸಿಸಿಬಿ ಪೊಲೀಸರು ಮೇ 24ರಂದು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದಾರೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮುಂಬೈ ಹವಾಲಾ ಚಿನ್ನದ ಜಾಲದ ಶಂಕೆ
ಚಿನ್ನ ಎಲ್ಲಿಂದ ಮತ್ತು ಯಾಕಾಗಿ ತರುತ್ತಿದ್ದ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಮುಂಬೈನ ರೆಹಮಾನ್ ಶೇಖ್ ಯಾರು, ಆತನ ಹಿನ್ನೆಲೆಯೇನು ? ಆತನಿಗೂ ವಕಾರ್ ಯೂನಿಸನಿಗೂ ಏನು ಸಂಬಂಧ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಮುಂಬೈನಿಂದ ಮಂಗಳೂರು, ಬೆಂಗಳೂರಿಗೆ ಹವಾಲಾ ರೂಪದಲ್ಲಿ ಹಣ, ಚಿನ್ನದ ಸಾಗಾಟ ನಡೆಯುತ್ತಿದ್ದು ಈ ಪ್ರಕರಣದಲ್ಲಿಯೂ ಅದೇ ರೀತಿಯ ಹವಾಲಾ ಆಗಿರುವ ಸಾಧ್ಯತೆಯಿದೆ. ಹವಾಲಾ ಸಾಗಾಟದ ಬಗ್ಗೆ ಗೊತ್ತಿದ್ದವರೇ ಸೇರಿಕೊಂಡು ದರೋಡೆಗೆ ಸ್ಕೆಚ್ ಹಾಕಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ. ಎರಡು ತಿಂಗಳ ಹಿಂದೆ ಮಂಗಳೂರಿನಲ್ಲಿ ಹವಾಲಾ ಜಾಲದ ಹಣವನ್ನು ಅಪಹರಿಸಲು ಯತ್ನಿಸಿ, ಆರು ಮಂದಿ ಸಿಕ್ಕಿಬಿದ್ದಿದ್ದರು. ಒಟ್ಟಿನಲ್ಲಿ ಅತ್ಯಂತ ಅಪರೂಪದ ದರೋಡೆ ಪ್ರಕರಣವನ್ನು ಮೂಡುಬಿದ್ರೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.
In a joint operation, sleuths of the city crime branch and Moodbidri police Sub Inspector Sudeep have arrested 11 persons for dacoity, kidnap, plotting to kidnap and attempt to murder and mainly who were involved in Gold Smuggling.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm