ಬ್ರೇಕಿಂಗ್ ನ್ಯೂಸ್
26-05-21 03:19 pm Mangalore Correspondent ಕ್ರೈಂ
ಮಂಗಳೂರು, ಮೇ 26: ಲಾಕ್ಡೌನ್ ನಿರ್ಬಂಧಗಳ ನಡುವೆಯೂ ಮೂಡುಬಿದ್ರೆ ಪೊಲೀಸರು ಭಾರೀ ಪ್ರಮಾಣದ ಅಂತಾರಾಜ್ಯ ಗಾಂಜಾ ಸಾಗಾಟ ಜಾಲವನ್ನು ಭೇದಿಸಿದ್ದಾರೆ. ಮೀನು ಸಾಗಾಟದ ಸೋಗಿನಲ್ಲಿ ಆಂಧ್ರಪ್ರದೇಶದಿಂದ ಕೇರಳದ ಕಾಸರಗೋಡಿಗೆ ತರಲಾಗುತ್ತಿದ್ದ ಬರೋಬ್ಬರಿ 200 ಕೇಜಿ ಗಾಂಜಾ ಜೊತೆಗೆ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದ್ರೆ ಠಾಣೆಯಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದ ಚಿನ್ನ ದರೋಡೆಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನುಬಿದ್ದಿದ್ದ ಮೂಡುಬಿದ್ರೆ ಎಸ್ಐ ಸುದೀಪ್ ಮತ್ತವರ ತಂಡ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾಗ ಗಾಂಜಾ ಪೂರೈಕೆ ಜಾಲದ ಬಗ್ಗೆ ಮಾಹಿತಿ ತಿಳಿದುಬಂದಿತ್ತು. ದರೋಡೆ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ಮತ್ತೊಂದು ಖದೀಮರ ಜಾಲದ ಬಗ್ಗೆ ಸುಳಿವು ಪಡೆದು ಕಾರ್ಯಾಚರಣೆ ನಡೆಸಿದ್ದರು.




ಅಂತಾರಾಜ್ಯ ಗಾಂಜಾ ವಹಿವಾಟು ಇರುವ ಬಗ್ಗೆ ಹೊಂಚು ಹಾಕಿದ್ದ ಪೊಲೀಸರ ತಂಡ ಉಪ್ಪಿನಂಗಡಿ, ಹಾಸನ, ಸಕಲೇಶಪುರ ಹೀಗೆ ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆಯಲ್ಲಿ ತೊಡಗಿತ್ತು. ಖಚಿತ ಮಾಹಿತಿ ಮೇರೆಗೆ, ಎರಡು ದಿನಗಳ ಹಿಂದೆ ರಾತ್ರಿ ವೇಳೆ ಬರುತ್ತಿದ್ದ ಕೆಂಪು ಬಣ್ಣದ ಸ್ಕೋಡಾ ಕಾರನ್ನು ಪೊಲೀಸರು ಹಿಂಬಾಲಿಸಿದ್ದರು. ಈ ವೇಳೆ, ಕಾರಿನ ಹಿಂದಿನಿಂದ ಮೀನು ಸಾಗಾಟದ ಈಚರ್ ಲಾರಿಯೂ ಬರುತ್ತಿರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಮುಡಿಪು ಮೂಲಕ ಸಾಗುತ್ತಿದ್ದಾಗ ಕಾರನ್ನು ಅಡ್ಡಹಾಕಿದ್ದಾರೆ. ಆದರೆ ಕಾರು ನಿಲ್ಲಿಸದೆ ಪರಾರಿಯಾಗಿದ್ದು ಕೂಡಲೇ ಉಳ್ಳಾಲ ಪೊಲೀಸರ ಸಹಾಯ ಪಡೆದು ಕೇರಳ ಭಾಗಕ್ಕೆ ತಪ್ಪಿಸುವ ಯತ್ನದಲ್ಲಿದ್ದ ಕಾರನ್ನು ಅಡ್ಡಹಾಕಿದ್ದಾರೆ.




ಕೆ.ಸಿ.ರೋಡ್ ಬಳಿಯ ಕಿನ್ಯಾ ಸಮೀಪದ ಒಲವಿನಹಳ್ಳಿ ಕ್ರಾಸ್ ಬಳಿ ಕೇರಳಕ್ಕೆ ಸಾಗುವ ಒಳರಸ್ತೆಯಿಂದ ಪರಾರಿಯಾಗುತ್ತಿದ್ದ ವೇಳೆ ಕಾರು ಮತ್ತು ಈಚರ್ ಲಾರಿಯನ್ನು ಪೊಲೀಸರು ತಡೆದಿದ್ದು ಪರಿಶೀಲಿಸಿದಾಗ ಭಾರೀ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಗೋಣಿಚೀಲದಲ್ಲಿ ಕಟ್ಟಿದ್ದ 56 ಕೇಜಿ ಗಾಂಜಾ ಕಾರಿನಲ್ಲಿದ್ದರೆ, ಈಚರ್ ಲಾರಿಯಲ್ಲಿ 144 ಕೇಜಿ ಗಾಂಜಾ ಪತ್ತೆಯಾಗಿತ್ತು. ವಿಚಾರಣೆ ವೇಳೆ, ಆಂಧ್ರಪ್ರದೇಶದ ವಿಶಾಖಪಟ್ಟಣದ ಟೂನಿ ಎಂಬ ಗ್ರಾಮದಿಂದ ಗಾಂಜಾ ತರುತ್ತಿರುವ ವಿಚಾರ ಬಯಲಾಗಿದೆ. ಅಲ್ಲಿನ ಶ್ರೀನಿವಾಸ ಎಂಬ ವ್ಯಕ್ತಿ ಗಾಂಜಾವನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. 200 ಕೇಜಿ ಗಾಂಜಾದ ಮೌಲ್ಯ ಅಂದಾಜು 50 ಲಕ್ಷ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮೊಹಮ್ಮದ್ ಫಾರೂಕ್ (24), ಕುಶಾಲನಗರ ನಿವಾಸಿ ಸೈಯದ್ ಮೊಹಮ್ಮದ್(31), ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್(23), ಉಪ್ಪಳ ನಿವಾಸಿ ಮೊಯ್ದೀನ್ ನವಾಜ್ (34) ಬಂಧಿತರಾಗಿದ್ದು ಅವರಿಂದ ಮೂರು ತಲವಾರು, ಒಂದು ಚಾಕು, 4 ಮೊಬೈಲ್, ಒಂದು ವೈಫೈ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಕೆಎ 03 ಎಂಕೆ – 0649 ನಂಬರಿನ ಸ್ಕೋಡಾ ಕಾರು, ಕೆಎ 20 ಸಿ- 6345 ನಂಬರಿನ ಈಚರ್ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.



ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಮೂಡುಬಿದ್ರೆ ಎಸ್ಐ ಸುದೀಪ್ ಮತ್ತು ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ತಂಡಕ್ಕೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಗಾಂಜಾವನ್ನು ಕಾಸರಗೋಡು ಭಾಗಕ್ಕೆ ತಂದು ಅಲ್ಲಿಂದ ವಿವಿಧ ಭಾಗಗಳಿಗೆ ರವಾನಿಸುವ ಉದ್ದೇಶದಿಂದ ತರಲಾಗಿತ್ತು. ಲಾಕ್ಡೌನ್ ಇರುವುದರಿಂದ ಮೀನಿನ ಲಾರಿಯಲ್ಲಿ ತಂದರೆ ಯಾರಿಗೂ ತಿಳಿಯದು ಎಂದುಕೊಂಡು ಬಂದಿದ್ದರು ಎನ್ನೋ ಮಾಹಿತಿಯನ್ನು ಕಮಿಷನರ್ ಹೇಳಿದ್ದಾರೆ.
Video:
Four persons have been arrested for smuggling 200 Kilos of Ganja in Fish Truck by Moodbidri Police Station Sub-inspector Sudeep and team near Kasargod. The accused were smuggling Ganja from Vizag to Kasargod. 25 thousand cash price has been given by Mangalore Police Commissioner Shashi Kumar to the team for cracking the case.
28-10-25 03:40 pm
Bangalore Correspondent
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm