ಬ್ರೇಕಿಂಗ್ ನ್ಯೂಸ್
26-05-21 01:50 pm Headline Karnataka News Network ಕ್ರೈಂ
Photo credits : Representative Image
ಬಾಗಲಕೋಟೆ, ಮೇ 26 : ಮಕ್ಕಳು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸು ಕಟ್ಟಿರುತ್ತಾರೆ. ಆದರೆ ಕಂಡ ಕನಸು ಕನಸಾಗಿ ಉಳಿಯುವುದಕ್ಕೆ ಮುಖ್ಯ ಕಾರಣ ಪೋಷಕರೇ ಆಗಿರುತ್ತಾರೆ. ಬಾಲ್ಯ ವಿವಾಹದಂತಹ ಕೆಟ್ಟ ಪದ್ಧತಿಯಲ್ಲಿ ಮಕ್ಕಳನ್ನು ಸಿಲುಕಿ ಅವರ ಭವಿಷ್ಯವನ್ನೇ ಹಾಳುಮಾಡುತ್ತಾರೆ. ಈಗಲೂ ರಾಜ್ಯದ ಹಲವು ಜನರಿಗೆ ಅರಿವಿಲ್ಲ. ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ಪರಿಣಾಮ ಇನ್ನು ತಿಳಿದಿಲ್ಲ. ಈ ಬಗ್ಗೆ ಎಷ್ಟು ಅರಿವು ಮೂಡಿಸಿದರೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜಿಲ್ಲೆಯಲ್ಲಿ ಲಾಕ್ಡೌನ್ ನಡುವೆಯೂ ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಆದರೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೋಗಿ ವಿವಾಹಗಳನ್ನು ತಡೆದಿದ್ದಾರೆ.

ಬಾಗಲಕೋಟೆಯಲ್ಲಿ ಲಾಕ್ಡೌನ್ ನಡುವೆ ಬಾಲ್ಯ ವಿವಾಹ ನಿಗದಿಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್, ಮೇನಲ್ಲಿ ಸುಮಾರು 35 ಬಾಲ್ಯ ವಿವಾಹಗಳು ನಿಗದಿಯಾಗಿತ್ತು. ಈ ಪೈಕಿ 28 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಅದಾಗ್ಯೂ 7 ಬಾಲ್ಯ ವಿವಾಹಗಳು ನಡೆದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಅಶೋಕ ಬಸವಣ್ಣವರ ಮಾಹಿತಿ ನೀಡಿದ್ದಾರೆ. ಏಪ್ರಿಲ್, ಮೇ ತಿಂಗಳು ನಡೆದ 7 ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ನೂರಕ್ಕೂ ಅಧಿಕ ಬಾಲ್ಯ ವಿವಾಹಕ್ಕೆ ತಯಾರಿ
ಕಳೆದ ವರ್ಷವೂ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಬಾಲ್ಯ ವಿವಾಹಕ್ಕೆ ತಯಾರಿ ನಡೆದಿತ್ತು. 113 ಬಾಲ್ಯ ವಿವಾಹಗಳ ಬಗ್ಗೆ ಇಲಾಖೆ ಗಮನಕ್ಕೆ ಮಾಹಿತಿ ಬಂದಿತ್ತು. ಈ ಪೈಕಿ 95 ಬಾಲ್ಯ ವಿವಾಹಗಳನ್ನು ಜಿಲ್ಲಾಡಳಿತ ತಡೆದಿತ್ತು. ಅದಾಗ್ಯೂ ಸುಮಾರು 18 ಬಾಲ್ಯ ವಿವಾಹ ನಡೆದು ಹೋಗಿದೆ. ಈ ಪೈಕಿ ಪ್ರಕರಣ ಮಾತ್ರ ದಾಖಲಾಗಿದ್ದು, ಉಳಿದ ಎಂಟು ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
28 Child Marriages in the Bagalkot district were prevented by officials during this lockdown.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm