ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ನಿರ್ಗತಿಕ ಮಹಿಳೆ ಕೊಂದು ಕಾಮತೃಷೆ ತೀರಿಸಿಕೊಂಡ ಯುವಕ ; ಕೃತ್ಯ ಬೆಳಕಿಗೆ ತಂದ ಸಿಸಿಟಿವಿ ದೃಶ್ಯ !!

27-08-20 11:45 am       Hassan Reporter   ಕ್ರೈಂ

ನಿರ್ಗತಿಕ ಮಹಿಳೆಯೊಬ್ಬಳನ್ನು ಕೊಂದು ನಂತರ ತನ್ನ ಕಾಮತೃಷೆ ತೀರಿಸಿಕೊಂಡ‌ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ವಿಕೃತ ಹೀನ ಕೃತ್ಯವನ್ನು ನೆನಪಿಸುವ ರೀತಿಯ ಹಂತಕನ ಕರಾಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ಹಾಸನ, ಆಗಸ್ಟ್ 27: ನಿರ್ಗತಿಕ ಮಹಿಳೆಯೊಬ್ಬಳನ್ನು ಕೊಂದು ನಂತರ ತನ್ನ ಕಾಮತೃಷೆ ತೀರಿಸಿಕೊಂಡ‌ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು ಗಂಭೀರವಾಗಿ ಪರಿಗಣಿಸಿರುವ ಹಾಸನ ಜಿಲ್ಲಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. 

ಸೋಮವಾರ ‌ತಡರಾತ್ರಿ ಮಹಿಳೆ ಭಿಕ್ಷಾಟನೆಯ ಬಳಿಕ ರಾತ್ರಿ 11 ಗಂಟೆ ವೇಳೆಗೆ ಎನ್.ಆರ್‌. ವೃತ್ತದ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಎದುರು ಮಲಗಲು ಅಣಿಯಾಗುತ್ತಿದ್ದಳು. ಈ‌ ವೇಳೆ ಅಲ್ಲಿಗೆ ಬಂದಿದ್ದ ನೀಲಿ ಜೀನ್ಸ್ ಪ್ಯಾಂಟ್ ಧಾರಿ ಕೀಚಕ, ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಲವಂತ ಮಾಡುತ್ತಾನೆ. ಇದಕ್ಕೆ ಮಹಿಳೆ‌ ನಿರಾಕರಿಸಿದಾಗ ಅಲ್ಲಿಂದ ತೆರಳುವ ಪಾಪಿ ಯುವಕ, ಮಹಿಳೆ ನಿದ್ದೆಗೆ  ಜಾರುವವರೆಗೂ ಬೇರೆಡೆ ಹೊಂಚು ಹಾಕಿದ್ದಾನೆ. ಮಹಿಳೆ ಮಲಗಿದ್ದನ್ನು ಖಾತ್ರಿ ಪಡಿಸಿಕೊಂಡ ದುರುಳ, ಬೃಹತ್‌ ಗಾತ್ರದ ಹಾಲೋಬ್ರಿಕ್ಸ್ ಇಟ್ಟಿಗೆಯನ್ನು ಮಲಗಿದ್ದ ಮಹಿಳೆಯ ತಲೆಗೆ ಎತ್ತಿ ಹಾಕುತ್ತಾನೆ. ನಂತರ ಆಕೆ ಸತ್ತಳೆಂದು ದೃಢವಾದ ಬಳಿಕ ಸತ್ತ ಹೆಣದ ಜೊತೆ ಮೃಗೀಯ ರೀತಿ ವರ್ತಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಾನೆ. ಈ ಎಲ್ಲಾ ಅಮಾನವೀಯ ದೃಶ್ಯ ಸಿಸಿ ಟಿವಿಯಲ್ಲಿ‌ ಸೆರೆಯಾಗಿದೆ. 

ವಿಕೃತ ಕಾಮಿ ಉಮೇಶ್ ರೆಡ್ಡಿಯ‌ ಹೀನ ಕೃತ್ಯವನ್ನು ನೆನಪಿಸುವ ರೀತಿಯ ಹಂತಕನ ಕರಾಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ಸಾರ್ವಜನಿಕ ವಲಯದಲ್ಲಿ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಆತನನ್ನು‌ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಕೃತ್ಯದ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಿಸಿ‌ಟಿವಿ ಆಧರಿಸಿ ಆರೋಪಿ ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಕ್ರಮ‌ಕೈಗೊಳ್ಳಲಾಗುವುದು ಎಂದು ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಭರವಸೆ ನೀಡಿದ್ದಾರೆ.