ಬ್ರೇಕಿಂಗ್ ನ್ಯೂಸ್
17-04-21 10:49 am Mangalore Correspondent ಕ್ರೈಂ
ಪಡುಬಿದ್ರೆ, ಎ.17 : ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ಮಜೂರು ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಎಂಬವರ ಕೊಲೆ ಪ್ರಕರಣದಲ್ಲಿ ಆಪಾದಿತನಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಡಾ ಎರ್ಮಾಳ್ ನಿವಾಸಿ ಇಲಿಯಾಸ್ ಯಾನೆ ಮಹಮ್ಮದ್ ಹಸನ್ (45) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಜಯರಾಮ ಶೆಟ್ಟಿ ಅವರನ್ನು 2000ನೇ ಇಸವಿಯಲ್ಲಿ ಅವರ ಸಹೋದರ ಉದಯ ಶೆಟ್ಟಿ ಯಾನೆ ದಾಡೆ ಉದಯ ಎಂಬಾತ ಆಸ್ತಿ ತಕರಾರಿನ ಹಿನ್ನೆಲೆಯಲ್ಲಿ ಸುನಿಲ್ ಶೆಟ್ಟಿ, ಇಲಿಯಾಸ್ ಯಾನೆ ಮಹಮ್ಮದ್ ಹಸನ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬವರ ಜೊತೆ ಸೇರಿಕೊಂಡು ಕೊಲೆ ಮಾಡಿದ್ದ.
ಆರೋಪಿಗಳ ಬಂಧನವಾಗಿ ಪ್ರಕರಣದ ವಿಚಾರಣೆ ಕೋರ್ಟಿನಲ್ಲಿ ಪ್ರಗತಿಯಲ್ಲಿದ್ದಾಗ, 2007ರಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಳಿಕ ಮಹಮ್ಮದ್ ರಫೀಕ್ ಎಂಬ ಹೆಸರಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ಸೌದಿ ಅರೇಬಿಯಾಕ್ಕೆ ಪರಾರಿ ಆಗಿದ್ದ. ಇತ್ತೀಚೆಗೆ ಈತ ಊರಿಗೆ ಬಂದಿರುವ ಮಾಹಿತಿ ಪಡೆದ ಕಾಪು ಠಾಣೆ ವಾರಂಟ್ ಸಿಬ್ಬಂದಿ ಹೆಡ್ ಕಾನ್ ಸ್ಟೇಬಲ್‌ಗಳಾದ ಸುಧಾಕರ ಭಂಡಾರಿ, ರಫೀಕ್, ರವೀಂದ್ರ, ಪಿ.ಸಿ. ಸಂದೇಶ್ ಭಂಡಾರಿ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
Police of Kaup station arrested a warrant accused who was absconding since 2008. Ilyas alias Mohammed Hassan alias Mohammed Rafiq is the accused who was arrested by the warrant personnel of Kaup police station.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 11:42 am
HK News Desk
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm