ಬ್ರೇಕಿಂಗ್ ನ್ಯೂಸ್
11-03-21 11:37 am Mangalore Correspondent ಕ್ರೈಂ
ಮಂಗಳೂರು, ಮಾ.11 : ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಒಟಿಪಿ ನಂಬರ್ ಪಡೆದು ಲಕ್ಷಾಂತರ ರೂ. ಮೊತ್ತವನ್ನು ಖಾತೆಯಿಂದ ಲಪಟಾಯಿಸಿದ ಘಟನೆ ನಡೆದಿದೆ.
ವಂಚನೆಗೆ ಒಳಗಾದ ನಿವೃತ್ತ ಪೊಲೀಸ್ ಅಧಿಕಾರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಾ.4ರಂದು ಮಧ್ಯಾಹ್ನ ಇವರ ಮೊಬೈಲ್ಗೆ ಕರೆ ಬಂದಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ, ಬಂದರು ರಸ್ತೆಯಲ್ಲಿರುವ ಸ್ಟೇಟ್ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಕಡಿತಗೊಂಡಿದ್ದು, ಅದರ ಮರುಪಾವತಿಗೆ ಒಟಿಪಿ ನಂಬರ್ ಹೇಳುವಂತೆ ಕೋರಿದ್ದರು. ಇದನ್ನು ನಿಜವೆಂದೇ ನಂಬಿದ ಈ ಅಧಿಕಾರಿಯ ಪುತ್ರ, ಮೊಬೈಲ್ಗೆ ಬಂದ ಒಟಿಪಿ ಸಂಖ್ಯೆಯನ್ನು ಹೇಳಿದ್ದರು.

ಸ್ವಲ್ಪ ಹೊತ್ತಿನಲ್ಲಿ ಸರದಿಯಂತೆ ಖಾತೆಯಿಂದ ಹಣ ಕಡಿತಗೊಳ್ಳುತ್ತಿರುವ ಬಗ್ಗೆ ಮೊಬೈಲ್ಗೆ ಎಸ್ಎಂಎಸ್ ಬರಲಾರಂಭಿಸಿತ್ತು. ಕೊನೆಗೆ ಎಸ್ಬಿಐ ಖಾತೆಯಲ್ಲಿದ್ದ ಪೂರ್ತಿ 6.24 ಲಕ್ಷ ರೂ. ಕಡಿತಗೊಂಡಿದ್ದು ಮನೆಯವರು ಗಾಬರಿಗೊಂಡಿದ್ದರು. ದಿಗಿಲುಗೊಂಡ ನಿವೃತ್ತ ಅಧಿಕಾರಿ ಮರುದಿನ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ, ವಿವಿಧ ಮೊತ್ತ ದೆಹಲಿಯ ನಾನಾ ಖಾತೆಗಳಿಗೆ ಜಮೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Mangalore Retired police officer duped of 6.24 lakhs by online fraud. A case has been registered at the cybercrime police station.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 11:42 am
HK News Desk
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm