ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಪೊಲೀಸರೆಂದು ಹೇಳಿ ಚಿನ್ನಾಭರಣ ದೋಚಿ ಪರಾರಿ

19-08-20 12:05 pm       Hassan Reporter   ಕ್ರೈಂ

ಪೊಲೀಸರೆಂದು ಹೇಳಿಕೊಂಡು ಬಂದ ತಂಡವೊಂದು ಮನೆ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಹಾಸನದ, ಹೊಸೂರು ಗ್ರಾಮದಲ್ಲಿ ನಡೆದಿದೆ.

ಹಾಸನ: ಪೊಲೀಸರೆಂದು ಹೇಳಿಕೊಂಡು ಬಂದ ತಂಡವೊಂದು ಮನೆ ಪರಿಶೀಲಿಸುವ ನೆಪದಲ್ಲಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲವಣ್ಣಗೌಡ ಎಂಬವರ ಮನೆಯಲ್ಲಿ ನಾಲ್ವರು ಪೊಲೀಸರು ಎಂದು ಹೇಳಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾಲ್ವರು ಇನ್ನೋವಾ ಕಾರಿನಲ್ಲಿ ಲವಣ್ಣಗೌಡ ಮನೆಗೆ ಬಂದಿದ್ದಾರೆ. ನಾವು ಪೊಲೀಸ್, ನಿಮ್ಮ ತಮ್ಮ ಬೆಂಗಳೂರಿನಿಂದ ಕಳ್ಳತನ ಮಾಡಿಕೊಂಡು ಹಣ ತಂದಿದ್ದಾನೆ. ಹಣವನ್ನು ಎಲ್ಲಿ ಇಟ್ಟಿದ್ದಾನೆ ಕೊಡಿ ಎಂದು ಹೇಳಿ ಅವರ ಬಳಿಯಿದ್ದ ಫೈಲ್‍ನಿಂದ ಲವಣ್ಣಗೌಡನ ತಮ್ಮ ಕೃಷ್ಣೇಗೌಡನ ಫೋಟೋ ತೋರಿಸಿದ್ದಾರೆ.

ಈ ವೇಳೆ ಮನೆಯವರು ನನ್ನ ತಮ್ಮ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿಲ್ಲ. ಅವನು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಿರುವುದು ಎಂದು ಹೇಳಿದ್ದಾರೆ. ಕೊನೆಗೆ ನಾಲ್ವರು ಮನೆಯವರನ್ನೆಲ್ಲ ಹಾಲ್‍ನಲ್ಲಿ ಕೂರಿಸಿದ್ದಾರೆ. ನಂತರ ಹಾಲಿನಲ್ಲಿ ಬೀರು, ಸೋಫಾ ಎಲ್ಲ ಹುಡುಕಿದ್ದು, ಬೀರುವಿನ ಬಾಗಿಲನ್ನು ತೆಗೆದು ಅದರಲ್ಲಿದ್ದ 12 ಗ್ರಾಂ ಚಿನ್ನದ ಸರ, 8 ಗ್ರಾಂ ಚಿನ್ನದ ಒಂದು ಜೊತೆ ಓಲೆ, 5 ಗ್ರಾಂನ ಉಂಗುರ ಇವುಗಳನ್ನು ತೆಗೆದುಕೊಂಡಿದ್ದಾರೆ.

ಕೊನೆಗೆ ಹೋಗುವಾಗ ನಿಮ್ಮ ಮನೆಯವರೆಲ್ಲರೂ ನಾಳೆ ಬೆಳಗ್ಗೆ ಚನ್ನರಾಯ ಪಟ್ಟಣ ಪೊಲೀಸ್ ಠಾಣೆಗೆ ಬನ್ನಿ ಎಂದು ಹೇಳಿ ಹೋಗಿದ್ದಾರೆ. ಇದನ್ನು ನಂಬಿ ಮನೆಯವರು ಪೊಲೀಸ್ ಠಾಣೆಗೆ ಹೋದಾಗ ಬಂದವರು ನಕಲಿ ಪೊಲೀಸರೆಂದು ಗೊತ್ತಾಗಿದೆ. ಈ ಘಟನೆ ಸಂಬಂಧ ಚನ್ನರಾಯಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.