ಬ್ರೇಕಿಂಗ್ ನ್ಯೂಸ್
02-03-21 12:26 pm Mangalore Correspondent ಕ್ರೈಂ
ಪುತ್ತೂರು, ಮಾ.2 : ಪ್ರಕರಣ ಒಂದರಲ್ಲಿ ವಿಚಾರಣೆ ನಡೆಸುತ್ತಿದ್ದ ಮಹಿಳಾ ಠಾಣೆ ಎಸ್ಸೈ ಮೇಲೆ ಮಹಿಳೆಯರಿಬ್ಬರು ಹಲ್ಲೆ ನಡೆಸಿದ ಘಟನೆ ಪುತ್ತೂರು ಮಹಿಳಾ ಠಾಣೆಯಲ್ಲಿ ಸೋಮವಾರ ನಡೆದಿದ್ದು, ಹಲ್ಲೆ ನಡೆಸಿದ ಮಹಿಳೆಯರನ್ನು ಬಂಧಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ಸೇಸಮ್ಮ ಹಲ್ಲೆಗೊಳಗಾದವರು. ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿಸೋಜ (34) ಮತ್ತು ಆಕೆಯ ಸಹೋದರಿ ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ (35) ಹಲ್ಲೆ ನಡೆಸಿದ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಫೆ.28ರಂದು ಸುನಿತಾ ಡಿಸೋಜಾ ಮತ್ತು ಬೇಬಿ ಡಿಸೋಜಾ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪರಸ್ಪರ ದೂರು ನೀಡಿದ್ದರು. ದೂರಿನ ವಿಚಾರಣೆಗಾಗಿ ಅವರಿಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಬೇಬಿ ಡಿಸೋಜಳ ಸಹೋದರಿ ಹಾಸನದಲ್ಲಿರುವ ಆಶಾ ಕೂಡ ಜೊತೆಗೆ ಬಂದಿದ್ದರು. ಎಸ್ಸೈ ಸೇಸಮ್ಮ ಅವರು ಎರಡು ಕುಟುಂಬದ ಸಮಸ್ಯೆಯನ್ನು ವಿಚಾರಿಸುತ್ತಿದ್ದ ವೇಳೆ ಬೇಬಿ ಡಿಸೋಜಾ ಮಾತಿನ ವಿಚಾರದಲ್ಲಿ ವಿರೋಧ ಬಂದು ತನ್ನ ಪತಿ ಲಾರೆನ್ಸ್ ಡಿಸೋಜ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಎಸ್ಸೈ ಸೇಸಮ್ಮ ಹಲ್ಲೆ ನಡೆಯುವುದನ್ನು ತಪ್ಪಿಸಲು ಅಡ್ಡ ಬಂದಿದ್ದಾರೆ. ಈ ವೇಳೆ ಬೇಬಿ ಡಿಸೋಜ ಮತ್ತು ಆಶಾ ಅವರು ಎಸ್ಸೈ ಸೇಸಮ್ಮ ಅವರಿಗೇ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಘಟನೆಯ ಬಳಿಕ ಎಸ್ಸೈ ಸೇಸಮ್ಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಸಹೋದರಿಯರನ್ನು ಬಂಧಿಸಿದ್ದಾರೆ.
A Lady Sub-Inspector of puttur police station was assaulted by a couple when the SI went to stop them fighting. A case has been registered.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
02-08-26 11:42 am
HK News Desk
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
Mangalore Help Deeksha: ದಿಢೀರ್ ಮೆದುಳು ಜ್ವರಕ್ಕ...
31-07-26 07:03 pm
ರಾಜಸ್ಥಾನದಿಂದ ಮಂಗಳೂರಿಗೆ ಬಂದು ಬೀದಿಯಲ್ಲಿ ಅಲೆದಾಡು...
30-07-26 07:51 pm
01-08-26 08:44 pm
HK News Staffer
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm
ಅಪ್ರಾಪ್ತ ಬಾಲಕಿಯ ಪುಸಲಾಯಿಸಿ ಅತ್ಯಾಚಾರ, ಬ್ಲ್ಯಾಕ್ಮ...
31-07-26 10:53 pm
ಪಣಂಬೂರು ತೋಟ ಬೆಂಗ್ರೆ ಬೀಚ್ ನಲ್ಲಿ ಸಾಮೂಹಿಕ ಅತ್ಯಾಚ...
31-07-26 09:47 pm