ಬ್ರೇಕಿಂಗ್ ನ್ಯೂಸ್
15-02-21 06:18 pm Udupi Correspondent ಕ್ರೈಂ
ಉಡುಪಿ, ಫೆ.15 : ನೆರೆಮನೆಯ ವಿವಾಹಿತ ಮಹಿಳೆಯ ಮನೆಗೆ ಯುವಕನೊಬ್ಬ ಬರುತ್ತಿದ್ದುದನ್ನು ಪ್ರಶ್ನೆ ಮಾಡಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಫೆ.14ರಂದು ರಾತ್ರಿ ಬ್ರಹ್ಮಾವರ ಬಳಿಯ ಹೊಸೂರು ಗ್ರಾಮದ ಉದ್ಧಳ್ಕ ಎಂಬಲ್ಲಿ ಘಟನೆ ನಡೆದಿದ್ದು ಕೊಲೆಯಾದವರನ್ನು ಉದ್ಧಳ್ಕ ನಿವಾಸಿ ನವೀನ್ ನಾಯ್ಕ(43) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿಗಳಾದ ಮಲ್ಪೆಯ ಗೌತಮ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬ್ರಹ್ಮಾವರ ಪೊಲೀಸರು ಕೃತ್ಯ ಎಸಗಿದ ಮೂರೇ ಗಂಟೆಯಲ್ಲಿ ಬಂಧಿಸಿದ್ದಾರೆ.
ನವೀನ್ ನಾಯ್ಕರ ನೆರೆಮನೆಯ ನಿವಾಸಿಯಾಗಿರುವ ಸರಸ್ವತಿ ಎಂಬವರ ಮನೆಗೆ ಗೌತಮ್ ಎಂಬಾತ ಬರುತ್ತಿದ್ದ. 15 ದಿನಗಳ ಹಿಂದೆ ಸರಸ್ವತಿ ಮತ್ತು ಗೌತಮ್ ಗುಡ್ಡೆಯಂಗಡಿ ಕ್ರಾಸ್ ಬಳಿ ನಿಂತಿದ್ದಾಗ ನವೀನ್ ನಾಯ್ಕ ಪ್ರಶ್ನೆ ಮಾಡಿದ್ದ. ನೀನು ಯಾಕೆ ಸರಸ್ವತಿ ಮನೆಗೆ ಆಗಾಗ ಬರುತ್ತಿದ್ದೀಯಾ ಎಂದು ಗೌಮತ್‌ನನ್ನು ಕೇಳಿದ್ದ. ಈ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿ ಗೌತಮ್ ಕೊಲೆ ಮಾಡುವುದಾಗಿ ನವೀನ್ ನಾಯ್ಕನಿಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದೇ ದ್ವೇಷದಲ್ಲಿ ಗೌತಮ್ ನಿನ್ನೆ ರಾತ್ರಿ ಇತರರೊಂದಿಗೆ ಸೇರಿ ಕಾರಿನಲ್ಲಿ ನವೀನ್ ನಾಯ್ಕನ ಮನೆಗೆ ಬಂದಿದ್ದು ಆಯುಧದಿಂದ ಎದೆಗೆ, ಮುಖಕ್ಕೆ ತಲೆಗೆ ಬಲವಾಗಿ ಹೊಡೆದು ನವೀನ್ ನನ್ನು ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Angry over youth coming to Neighbour Women's house Man kills youth at Udupi. Six persons haven been arrested in this case.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm