ಬ್ರೇಕಿಂಗ್ ನ್ಯೂಸ್
10-02-21 12:16 pm Mangalore Correspondent ಕ್ರೈಂ
ಮಂಗಳೂರು, ಫೆ.9: ಮೋಸ ಹೋಗುವವರು ಇರೋ ತನಕ ಮೋಸ ಮಾಡೋರು ತಮ್ಮ ಕೆಲಸ ಮಾಡುತ್ತಲೇ ಇರುತ್ತಾರೆ. ಹೌದು.. ಜನರನ್ನು ಮೋಸ ಮಾಡುವುದಕ್ಕಾಗಿಯೇ ಖದೀಮರು ಏನೆಲ್ಲಾ ಜಾಲ ಹೆಣೆಯುತ್ತಾರೆ. ಅದು ಬ್ಯಾಂಕ್ ಸಿಬಂದಿಯೆಂದು ಹೇಳಿ ಓಟಿಪಿ ನಂಬರ್ ಕೇಳುವುದು, ಎಟಿಎಂ ನಂಬರ್ ಕೇಳುವುದು ಹೀಗೆ.. ಕೊರೊನಾ ಬಳಿಕ ಮೋಸದ ಜಾಲದ ಹೊಸ ನಮೂನೆಗಳು ಹೊರಬರುತ್ತಿವೆ. ಇದೊಂದು ಪೂರ್ತಿ ಡಿಫರೆಂಟ್ ಆಗಿರುವ ಸ್ಟೋರಿ.
ಆಕೆ 21ರ ಹರೆಯದ ವಿದ್ಯಾರ್ಥಿನಿ. ಈಗಷ್ಟೇ ಬಿಎಸ್ಸಿ ನರ್ಸಿಂಗ್ ಮುಗಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಅಮೆರಿಕಾ, ಕೆನಡಾ ರೀತಿಯ ದೇಶಗಳಲ್ಲಿ ಬಿಎಸ್ಸಿ ನರ್ಸಿಂಗ್ ಆದವರಿಗೆ ಒಳ್ಳೆ ಆಫರ್ ಇರೋದನ್ನು ತಿಳ್ಕೊಂಡು ವೆಬ್ ಸೈಟ್ ನಲ್ಲಿ ಹುಡುಕಾಟ ನಡೆಸಿದ್ದಾಳೆ. ಈ ವೇಳೆ, ಕೆನಡಾದ ಟೊರೊಂಟೋ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನರ್ಸಿಂಗ್ ನೌಕರಿ ಇರೋದನ್ನು ತಿಳಿದು, ಅದಕ್ಕೆ ಅಪ್ಲೈ ಮಾಡಿದ್ದಾಳೆ.
ಕೂಡಲೇ ತನ್ನ ಬಯೋಡಾಟಾ, ಶೈಕ್ಷಣಿಕ ಅರ್ಹತೆ ಇನ್ನಿತರ ಮಾಹಿತಿಗಳನ್ನು ಅಪ್ಡೇಟ್ ಮಾಡಿ, ವೆಬ್ ನಲ್ಲಿಯೇ ನೌಕರಿಗಾಗಿ ಅರ್ಜಿ ಹಾಕಿದ್ದಾಳೆ. ಅರ್ಜಿ ಹಾಕಿದ ಮರುದಿನವೇ ವಾಟ್ಸಪ್ ಕರೆಯೊಂದು ಬಂದಿತ್ತು. + 1-365-602-5685 ನಂಬರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ಹುಡುಗಿಯಲ್ಲಿ ಇಂಗ್ಲಿಷ್ ನಲ್ಲೇ ಮಾತನಾಡಿದ್ದಾನೆ. ಟೊರಾಂಟೋ ಜನರಲ್ ಹಾಸ್ಪಿಟಲ್ ನಿಂದ ಕರೆ ಮಾಡುತ್ತಿದ್ದೇನೆ. ಎಚ್ ಆರ್ ಮ್ಯಾನೇಜರ್ ಆಗಿದ್ದು ತನ್ನ ಹೆಸರು ಬಿಲ್ ಕ್ಲಾಕ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿನ್ನ ಅರ್ಜಿಯನ್ನು ನೋಡಿದ್ದೇನೆ. ಒಳ್ಳೆ ಮಾರ್ಕ್ ಇದ್ದು, ನಿನ್ನನ್ನು ನರ್ಸಿಂಗ್ ನೌಕರಿಗೆ ಆಯ್ಕೆ ಮಾಡಲು ಹರ್ಷ ಪಡುತ್ತೇವೆ. ಕೂಡಲೇ ಅಪಾಯಿಂಟ್ ಮೆಂಟ್ ಲೆಟರ್ ಕಳಿಸುತ್ತೇವೆ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.
ಕೆನಡಾದಲ್ಲಿ ನೌಕರಿ ಆಗಿದ್ದನ್ನು ತಿಳಿದ ಹುಡುಗಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಒಂದೇ ವಾರದಲ್ಲಿ ಆಕೆಯ ಮನೆಗೆ ಕೊರಿಯರ್ ಬಂದಿತ್ತು. ಕೊರಿಯರ್ ನಲ್ಲಿ ಅಪಾಯಿಂಟ್ ಮೆಂಟ್ ಲೆಟರ್ ಕಳಿಸಲಾಗಿತ್ತು. ಹುಡುಗಿ ತೆರೆದು ನೋಡಿದರೆ, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು. ಯಾಕಂದ್ರೆ, ಕೆಂಪು ಅಕ್ಷರದಲ್ಲಿ ಎದ್ದು ಕಾಣುವಂತೆ ಬರೆದಿದ್ದು ನೌಕರಿಯ ಸಂಬಳ. 5500 ಕೆನಡಾ ಡಾಲರ್ ಅಂದರೆ, ಸುಮಾರು 3.14 ಲಕ್ಷ ರೂ. ತಿಂಗಳ ಸಂಬಳ ಎಂದಿತ್ತು. ಅದಲ್ಲದೆ, ಉಳಿದುಕೊಳ್ಳಲು ಮನೆ, ಟ್ರಾನ್ಸ್ ಪೋರ್ಟ್ ವ್ಯವಸ್ಥೆ, ತಿಂಗಳಿಗೆ ಹೆಚ್ಚುವರಿಯಾಗಿ ಖರ್ಚಿಗೆ 500 ಕೆನಡಿಯನ್ ಡಾಲರ್ ಕೊಡುವುದಾಗಿ ಅದರಲ್ಲಿ ಬರೆದಿತ್ತು. ಟೊರೊಂಟೋ ಜನರಲ್ ಹಾಸ್ಪಿಟಲ್ ಹೆಸರಲ್ಲಿ ಬಂದಿದ್ದ ಅಪಾಯಿಂಟ್ ಮೆಂಟ್ ಲೆಟರನ್ನು ನೋಡಿ ಮನೆಯವರಿಗೆ ಸಂತಸ ಮತ್ತೊಂದ್ಕಡೆ ದಿಗ್ಭ್ರಮೆಯೂ ಆಗಿತ್ತು.
ಇದೇನು ಕಟ್ಟುಕತೆಯಲ್ಲ. ಹೊನ್ನಾವರದ ಕ್ರಿಸ್ತಿಯನ್ ಕುಟುಂಬ ಅನುಭವಿಸಿರುವ ನೈಜ ಘಟನೆ. 22ರ ಹರೆಯದ ಹುಡುಗಿ ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಓದು ಪೂರೈಸಿದ್ದಳು. ಹೆತ್ತವರು ಹೊನ್ನಾವರ ಆಗಿದ್ದರೂ, ಈ ಹುಡುಗಿ ಮತ್ತು ಆಕೆಯ ತಮ್ಮ ಮಂಗಳೂರಿನಲ್ಲೇ ಓದುತ್ತಿದ್ದಾರೆ. ಪುತ್ರಿಗೆ ಕೆನಡಾದಿಂದ ಆಫರ್ ಬಂದಿದ್ದರಿಂದ ಕೂಡಲೇ ತಂದೆ, ಮಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಬಂದಿದ್ದಾರೆ. ಮಗಳ ಹೆಸರಲ್ಲಿ ಪಾಸ್ ಪೋರ್ಟ್ ಕೂಡ ಮಾಡಿಸಿದ್ದಾರೆ. ಆದರೆ, ಕೊರಿಯರ್ ಕೈಗೆ ತಲುಪಿದ ಮರುದಿನವೇ ಮುಂಬೈನಿಂದ ಕರೆ ಬಂದಿತ್ತು.
ಕರೆ ಮಾಡಿದ್ದ ವ್ಯಕ್ತಿ, ಟೊರಾಂಟೋ ಆಸ್ಪತ್ರೆಯ ಭಾರತೀಯರ ನೇಮಕಾತಿ ವಿಭಾಗದ ಕಚೇರಿ ಮುಂಬೈನಲ್ಲಿದೆ. ನಿಮ್ಮ ನೇಮಕಾತಿ ಕನ್ಫರ್ಮ್ ಆಗಿದ್ದು ಪ್ರೊಸೆಸಿಂಗ್ ಫೀಸ್ ಎಂದು ಮೊದಲು ಹತ್ತು ಸಾವಿರ ನೀಡಬೇಕೆಂದು ಹೇಳಿದ್ದ. ಮೂರು ವರ್ಷ ಕಾಂಟ್ರಾಕ್ಟ್ ಬೇಸಿಸಲ್ಲಿ ನೇಮಕಾತಿ ಆಗಲಿದ್ದು, ಅಪಾಯಿಂಟ್ ಮೆಂಟ್ ಲೆಟರ್ ನಲ್ಲಿ ನಮೂದಿಸಿದಂತೆ ವೇತನ ಇತ್ಯಾದಿ ಸವಲತ್ತು ನೀಡಲಾಗುವುದು ಎಂದು ಹೇಳಿದ್ದಾನೆ. ಹಣ ಕಳುಹಿಸಲು ಮುಂಬೈನ ಲಕ್ಷ್ಮೀ ವಿಲಾಸ್ ಬ್ಯಾಂಕ್ ಕಚೇರಿಯ ವಿಳಾಸ ಮತ್ತು ಐಎಫ್ ಎಸ್ ಸಿ ಕೋಡ್ ನಂಬರ್ ಕಳಿಸಿದ್ದಾನೆ. ಹುಡುಗಿ ಎಲ್ಲದಕ್ಕೂ ಓಕೆ ಅಂದಿದ್ದಾಳೆ. ತರಾತುರಿಯಲ್ಲಿ ಪಾಸ್ಪೋರ್ಟ್ ಕೆಲಸವನ್ನೂ ಮಾಡಿಸಿದ್ದಾರೆ.
ಇಷ್ಟಾಗುತ್ತಲೇ ಹುಡುಗಿ ತಾನು ಫಾರಿನ್ ಹೋಗುತ್ತಿರುವ ವಿಚಾರವನ್ನು ತನ್ನ ಗೆಳೆಯರಿಗೆ ಹೇಳಿಕೊಂಡಿದ್ದಾಳೆ. ಅಲ್ಲದೆ, ಇಷ್ಟು ಸಂಬಳ ಇತ್ಯಾದಿ ವಿಚಾರವನ್ನೂ ಹೇಳಿದ್ದಾಳೆ. ಆಕೆಯ ಗೆಳೆಯನೊಬ್ಬ ಮಾಧ್ಯಮದ ವ್ಯಕ್ತಿಗೆ ಈ ಬಗ್ಗೆ ಹೇಳಿದ್ದು, ಡೈರೆಕ್ಟ್ ಅಪಾಯಿಂಟ್ ಆಗಿರೋ ವಿಚಾರ ಹೇಳಿದ್ದಾನೆ. ನಂಬಿಕೆ ಬಾರದ್ದಕ್ಕೆ, ಆನಂತರ ಅಪಾಯಿಂಟ್ ಮೆಂಟ್ ಲೆಟರನ್ನೂ ಕಳಿಸಿದ್ದಾನೆ. ಈ ನಡುವೆ, ಯುವತಿಗೆ ಫೋನ್ ಮಾಡುತ್ತಿದ್ದ ಮುಂಬೈನ ವ್ಯಕ್ತಿ ಕೂಡಲೇ ಹತ್ತು ಸಾವಿರ ಫೀಸ್ ನೀಡುವಂತೆ ಒತ್ತಾಯ ಮಾಡಿದ್ದಾನೆ. ಇಷ್ಟೊಳ್ಳೆ ಆಫರ್ ಬಂದಿದ್ದರೆ ನೀನು ಹಿಂದೆ ಮುಂದೆ ನೋಡುತ್ತೀಯಲ್ಲಾ.. ತಿಂಗಳಿಗೆ ಅಷ್ಟು ಸಂಬಳ ಕೊಡುತ್ತಿದ್ದಾರೆ, ನೀನು ಅವಕಾಶ ಮಿಸ್ ಮಾಡಿಕೊಳ್ತೀಯಾ ಎಂದು ಹೇಳತೊಡಗಿದ್ದಾನೆ.
ಮಾಧ್ಯಮದ ವ್ಯಕ್ತಿ ಅಪಾಯಿಂಟ್ ಮೆಂಟ್ ಲೆಟರ್ ಪರಿಶೀಲನೆ ಮಾಡಿದ್ದಾರೆ. ಪಾಸ್ ಪೋರ್ಟ್, ವೀಸಾ ಇಲ್ಲದೆಯೇ ಅಪಾಯಿಂಟ್ ಮೆಂಟ್ ಲೆಟರ್ ಕಳಿಸಿದ್ದೇ ಬೋಗಸ್. ಅದು ಕೂಡ ಇಂಟರ್ ವ್ಯೂ ಇಲ್ಲದೆ ನೌಕರಿಗೆ ಕನ್ಫರ್ಮ್ ಮಾಡಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಕನಿಷ್ಠ ಸ್ಕೈಪ್ ಮೂಲಕ ಆದ್ರೂ ಇಂಟರ್ ವ್ಯೂ ಮಾಡಬೇಕಿತ್ತು. ಏನೂ ಇಲ್ಲದೆ ಉದ್ಯೋಗ ಹೇಗೆ ಸಾಧ್ಯ ಎಂದು ಕೇಳಿದ್ದಾರೆ. ಕೊನೆಗೆ, ಆ ಹುಡುಗಿ ಅಪ್ಲಿಕೇಶನ್ ಹಾಕಿದ್ದ ಸೈಟ್, ವೆಬ್ ವಿಳಾಸ ಪರಿಶೀಲನೆ ಮಾಡಿದಾಗ ಅದೊಂದು ಬೋಗಸ್ ವೆಬ್ ಪೇಜ್, ಮೋಸದ ಜಾಲ ಅನ್ನೋದು ಕನ್ಫರ್ಮ್ ಆಗಿದೆ.
ಹೀಗಿದ್ದರೂ, ಮುಂಬೈನ ವ್ಯಕ್ತಿ ಕರೆ ಮಾಡುತ್ತಲೇ ಇದ್ದ. ಇತ್ತ ಹುಡುಗಿ ಮತ್ತು ಆಕೆಯ ಹೆತ್ತವರು ಆಘಾತಕ್ಕೆ ಒಳಗಾಗಿದ್ದಾರೆ. ಕೆನಡಾದಲ್ಲಿ ಕೈಗೆ ಬಂದಿದ್ದ ಕೆಲಸ ಹೋಯಿತಲ್ಲಾ ಎಂದು ಒಂದೂ ತೋಚದೆ ಉಳಿದಿದ್ದಾರೆ. ಮೊನ್ನೆ ಫೆ. 1 ರಂದು ಈ ವಿಚಾರ ಮಾಧ್ಯಮದ ವ್ಯಕ್ತಿಯೊಬ್ಬರಿಗೆ ತಿಳಿದಿದ್ದು, ಹತ್ತು ಸಾವಿರ ನೀಡದಂತೆ ಹೋಲ್ಡ್ ಮಾಡಿದ್ದಾರೆ. ಮೋಸದ ಜಾಲದ ಬಗ್ಗೆ ಯುವತಿ ಮತ್ತು ಆಕೆಯ ಕುಟುಂಬಕ್ಕೆ ಮನವರಿಕೆ ಮಾಡಿದ್ದಾರೆ.
ಕೊರೊನಾ ಬಳಿಕ ಉದ್ಯೋಗ ಕಳಕೊಂಡ ಇಂಜಿನಿಯರ್ ಗಳೇ ಸೇರಿ ಇಂಥ ನಕಲಿ ವೆಬ್ ಗಳನ್ನು ಮಾಡಿ, ಜನರನ್ನು ಸುಲಿಗೆ ಮಾಡುತ್ತಿದ್ದಾರೋ ಏನೋ ಎನ್ನುವ ಅನುಮಾನ ಹುಟ್ಟಿದೆ. ಕೊರೊನಾ ಬಳಿಕ ನೌಕರಿ ಕಳಕೊಂಡ ಯುವಜನರನ್ನು ಉದ್ಯೋಗ, ಇನ್ನಿತರ ಆಮಿಷ ಒಡ್ಡಿ ಹಣ ಪೀಕಿಸುವ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಈ ಬಗ್ಗೆ ಯುವತಿಯ ಕುಟುಂಬ ಇನ್ನೂ ಪೊಲೀಸ್ ಕೇಸು ದಾಖಲು ಮಾಡಿಲ್ಲ. ಫೋನ್ ಮಾಡುತ್ತಿದ್ದ ಮುಂಬೈ ವ್ಯಕ್ತಿಯ ನಂಬರನ್ನು ಬ್ಲಾಕ್ ಮಾಡಿಟ್ಟಿದ್ದಾರೆ. ನಕಲಿ ವೆಬ್ ಗಳನ್ನು ನಂಬಿ ಹಣ ಕಟ್ಟಿ ಮೋಸ ಹೋಗುವ ಮಂದಿ ಬಹಳಷ್ಟು ಮಂದಿ ಇದ್ದಾರೆ. ಈಕೆಯೂ ಹಣ ಕಟ್ಟುತ್ತಿದ್ದರೆ, ಮತ್ತೆ ಮತ್ತೆ ಹಣ ಪೀಕಿಸುತ್ತಾ ಹೋಗುತ್ತಿದ್ದರು. ಇದೇ ಖದೀಮರು ಅದೆಷ್ಟು ಮಂದಿಯಿಂದ ಹಣ ಪೀಕಿಸಿಕೊಂಡಿದ್ದಾರೋ ಏನೋ..
Fake Nursing Jobs online for Canada in the name of Toronto General Hospital exposed by Headline Karnataka in Mangalore. A Nursing Student has received a fake appointment letter from an unknown person and later forced to send money to his account.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
05-05-25 11:22 am
Mangalore Correspondent
Sharan Pumpwell, Mangalore, threat: ಶರಣ್ ಪಂಪ್...
04-05-25 11:26 pm
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm