ಬ್ರೇಕಿಂಗ್ ನ್ಯೂಸ್
20-01-21 10:44 am Headline Karnataka News Network ಕ್ರೈಂ
ಮಲಪ್ಪುರಂ, ಜ.20 : ಹದಿನೇಳು ವರ್ಷದ ಬಾಲಕಿಯ ಮೇಲೆ 38 ಮಂದಿ ಕಳೆದ ಹಲವು ತಿಂಗಳಿಂದ ನಿರಂತರ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಎಸಗಿರುವುದು ಮಲಪ್ಪುರದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು 44 ಮಂದಿಯ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಿದ್ದು 20 ಮಂದಿಯನ್ನು ಬಂಧಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್‌ನಲ್ಲಿ ಕಳೆದ 5 ವರ್ಷಗಳಿಂದ ಈ ಘಟನೆಗಳು ವರದಿಯಾಗಿವೆ. ಪಾಂಡಿಕ್ಕಾಡ್ ವಲಯದಲ್ಲಿರುವ ಪುಟ್ಟ ಕಾಲನಿಯಲ್ಲಿ ಬಾಲಕಿ ತಾಯಿಯೊಂದಿಗೆ ಜೀವಿಸುತ್ತಿದ್ದಳು. 2015ರಲ್ಲಿ ತಾಯಿಯ ದೂರಿನ ಆಧಾರದಲ್ಲಿ ಸ್ಥಳೀಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಬಾಲಕಿ ತನ್ನ ಗೆಳೆಯನೊಂದಿಗೆ ತೆರಳಿದ್ದಳು ಎಂದು ಕುಟುಂಬ ಆರೋಪಿಸಿತ್ತು. ತನಿಖೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಆಗ ಎರಡು ಪೋಕ್ಸೋ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕುಟುಂಬದ ದೂರಿನ ಆಧಾರದಲ್ಲಿ 2017ರಲ್ಲಿ ಕೂಡ ಇದೇ ರೀತಿಯ ಪ್ರಕರಣ ದಾಖಲಿಸಲಾಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪೋಕ್ಸೊ ಅಡಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಕೆಯ ಕುಟುಂಬ ಮತ್ತೆ ನಾಪತ್ತೆ ದೂರು ದಾಖಲಿಸಿತ್ತು. ಬಾಲಕಿಯನ್ನು ಪೊಲೀಸರು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದರು. ಹೇಳಿಕೆಯಲ್ಲಿ ಬಾಲಕಿ 2 ಲೈಂಗಿಕ ಹಲ್ಲೆ ಸೇರಿದಂತೆ 15 ಮಂದಿಯ ಕಿರುಕುಳದ ಘಟನೆಗಳನ್ನು ಉಲ್ಲೇಖಿಸಿದ್ದಳು. ತರುವಾಯ ಬಾಲಕಿಯನ್ನು ಆಶ್ರಯ ಧಾಮಕ್ಕೆ ಕಳುಹಿಸಲಾಯಿತು. ತಿಂಗಳ ನಂತರ ಬಾಲಕಿಯ ಇನ್ನೊಂದು ಹೇಳಿಕೆ ದಾಖಲಿಸಲಾಗಿತ್ತು. ಈ ಸಂದರ್ಭ ಬಾಲಕಿ 12ಕ್ಕೂ ಅಧಿಕ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಘಟನೆಗಳನ್ನು ಉಲ್ಲೇಖಿಸಿದ್ದಾಳೆ.
A 17-year-old girl from Kerala has been allegedly sexually abused and harassed by more than 44 men over the past few months, police said, adding that seven rape cases have been filed based on her accounts since 2016.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am