ಬ್ರೇಕಿಂಗ್ ನ್ಯೂಸ್
09-10-26 10:01 am HK News Staffer ಕ್ರೈಂ
ಮಂಗಳೂರು, ಅ.9: ಆಸ್ತಿಗಾಗಿ ಮಗಳೇ ತನ್ನ ತಂದೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯಕ್ರಿಯೆ ಮುಗಿಸಿದ್ದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಹೂತು ಹಾಕಿದ್ದ ತಂದೆಯ ಶವವನ್ನು ದೇರೆಬೈಲ್ ಚರ್ಚ್ ಆವರಣದಿಂದ ಹೊರ ತೆಗೆದು ಎಫ್ಎಸ್ಎಲ್ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.
ಕಳೆದ ಜುಲೈ 19ರಂದು ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ ಎಂಬವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಸ್ಥಳೀಯರಿಗೆ ಅಥವಾ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಜೊತೆಗಿದ್ದ ಮಗಳು ಮಾಯಾ ರೇಗೊ ತನ್ನ ಆಪ್ತರ ಮೂಲಕ ಶವದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೆ ಅಂತ್ಯಕ್ರಿಯೆ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಸಂಶಯಗೊಂಡ ಆಲ್ಬರ್ಟ್ ರೇಗೊ ಅವರ ಸ್ನೇಹಿತರಾದ ಹೆರಾಲ್ಡ್ ಪಿರೇರಾ ಅವರು ಉರ್ವಾ ಠಾಣೆಗೆ ದೂರು ನೀಡಿದ್ದು, ಮಾಯಾ ರೇಗೋ ಮತ್ತು ಇನ್ನಿತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.



ಮಾಯಾ ರೇಗೊ ಮಾದಕ ವ್ಯಸನಿಯೆಂಬ ಆರೋಪಗಳಿದ್ದು ಹಣಕ್ಕಾಗಿ ತನ್ನ ಇತರ ಸ್ನೇಹಿತರ ಮೂಲಕ ತಂದೆಯನ್ನು ಮುಗಿಸಿದ್ದಾರೆ, ಅದಕ್ಕೂ ಮುನ್ನ ತಂದೆಯಿಂದ ಬಲವಂತವಾಗಿ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಬೋಂದೆಲ್ ನಲ್ಲಿರುವ ವೈದ್ಯರೊಬ್ಬರು ಮತ್ತು ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆಂದೂ ದೂರಿನಲ್ಲಿ ಆರೋಪಿಸಿದ್ದಾರೆ.
ಆಲ್ಬರ್ಟ್ ರೇಗೊ ಅವರು ಹಿಂದೆ ವಿದೇಶದಲ್ಲಿದ್ದು ಸಾಕಷ್ಟು ಆಸ್ತಿ ಮಾಡಿಕೊಂಡಿದ್ದರು. ಅವರ ಇನ್ನಿಬ್ಬರು ಮಕ್ಕಳು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಒಬ್ಬಳು ಮಗಳು ಮಾತ್ರ ಜೊತೆಗಿದ್ದು, ಆಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದನ್ನು ತನ್ನ ಸ್ನೇಹಿತರಿಗೆ ಆಲ್ಬರ್ಟ್ ಹೇಳುತ್ತಿದ್ದರು. ಅಲ್ಲದೆ, ಬಲವಂತದಿಂದ ವೀಲು ನಾಮೆ ಬರೆಸಿಕೊಂಡಿದ್ದನ್ನೂ ಹೇಳಿದ್ದರು. ತನಗೇನಾದರೂ ಆದರೆ ಆಕೆಯ ಕಿರುಕುಳವೇ ಕಾರಣ. ನಿರಂತರ ಹಲ್ಲೆಗೈದು ಕಿರುಕುಳ ನೀಡುತ್ತಿದ್ದ ಬಗ್ಗೆ ಆಲ್ಬರ್ಟ್ ಹೇಳಿಕೊಂಡಿದ್ದಾಗಿ ಹೆರಾಲ್ಡ್ ಪಿರೇರಾ ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು ಹಲವು ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಇದೀಗ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾದ ಆಲ್ಬರ್ಟ್ ರೇಗೋ ಅವರ ಶವವನ್ನು ಕುಂಟಿಕಾನ ಬಳಿಯ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಅಗೆದು ಹೊರ ತೆಗೆದು ಪರೀಕ್ಷೆ ನಡೆಸಲಿದ್ದಾರೆ. ಇದಕ್ಕಾಗಿ ಎಫ್ಎಸ್ಎಲ್ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿತ ಮಾಯಾ ರೇಗೊ ಮತ್ತು ಸ್ಥಳೀಯ ದೂರುದಾರರ ಸಮ್ಮುಖದಲ್ಲಿಯೇ ಅಸ್ಥಿಪಂಜರದ ಪರೀಕ್ಷೆ ನಡೆಯಲಿದೆ.
In a rare case reported in Mangaluru, a woman has been accused of murdering her father over property and hastily completing his funeral without a post-mortem examination. Nearly two months after his death, police have initiated the process of exhuming his body from the burial ground at Derebail Church for a forensic examination. Albert Rego, a resident of Kottara First Cross in Mangaluru, died under suspicious circumstances on July 19. According to the complaint, his daughter Maya Rego, who was living with him, allegedly arranged his funeral through acquaintances without informing other family members or local residents.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
09-10-26 10:01 am
HK News Staffer
ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪ...
08-10-26 08:44 pm
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am