ಬ್ರೇಕಿಂಗ್ ನ್ಯೂಸ್
24-09-26 11:10 am HK News Staffer ಕ್ರೈಂ
ಮಂಗಳೂರು , ಸೆಪ್ಟೆಂಬರ್ 24: ಸೈಬರ್ ವಂಚಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರನ್ನು ವಿವಿಧ ರೀತಿಯಲ್ಲಿ ನಂಬಿಸಿ ಬ್ಯಾಂಕ್ ಖಾತೆಗಳಿಂದ ಲಕ್ಷಾಂತರ ರೂಪಾಯಿ ಎಗರಿಸುತ್ತಿರುವ ಪ್ರಕರಣಗಳು ಮತ್ತೆ ಬೆಳಕಿಗೆ ಬಂದಿವೆ. ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ದುರುಪಯೋಗ, ನಕಲಿ ಹೂಡಿಕೆ ಆ್ಯಪ್ ಮತ್ತು ಸಂಚಾರ ನಿಯಮ ಉಲ್ಲಂಘನೆಯ ನಕಲಿ ನೋಟಿಸ್ ಹೆಸರಲ್ಲಿ ವಂಚಿಸಿರುವ ನಾಲ್ಕು ಪ್ರತ್ಯೇಕ ಪ್ರಕರಣಗಳು ಮಂಗಳೂರು ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಈ ನಾಲ್ಕು ಪ್ರಕರಣಗಳಲ್ಲಿ ಸುಮಾರು ₹9.47 ಲಕ್ಷ ಹಣ ವಂಚನೆಯಾಗಿದೆ.
OTP ನೀಡದಿದ್ದರೂ ಕ್ರೆಡಿಟ್ ಕಾರ್ಡ್‌ನಿಂದ ₹1.98 ಲಕ್ಷ ಮಾಯ
45 ವರ್ಷದ ವ್ಯಕ್ತಿಯೊಬ್ಬರ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಅಕ್ರಮವಾಗಿ ಬಳಸಿ, ಅವರ ಗಮನಕ್ಕೆ ಬಾರದಂತೆ ₹1,98,500 ಹಣವನ್ನು ವರ್ಗಾಯಿಸಲಾಗಿದೆ. ಸೆಪ್ಟೆಂಬರ್ 19ರಂದು ದೂರುದಾರರ ಮೊಬೈಲ್‌ಗೆ ಬ್ಯಾಂಕ್‌ನಿಂದ ಸರಣಿ ಹಣ ಕಡಿತದ ಸಂದೇಶಗಳು ಬಂದಿವೆ. ಪರಿಶೀಲಿಸಿದಾಗ 'Amazon Pay Private Limited' ಹಾಗೂ 'Facebook Advertisement' ಹೆಸರಿನಲ್ಲಿ ಹಂತ-ಹಂತವಾಗಿ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ.
ತಾವು ಯಾವುದೇ ವಹಿವಾಟು ನಡೆಸಿರಲಿಲ್ಲ ಹಾಗೂ ಯಾರೊಂದಿಗೂ OTP ಹಂಚಿಕೊಂಡಿರಲಿಲ್ಲ ಎಂದು ದೂರುದಾರರು ತಿಳಿಸಿದ್ದಾರೆ. ಸೈಬರ್ ವಂಚಕರು ಕ್ರೆಡಿಟ್ ಕಾರ್ಡ್ ವಿವರಗಳನ್ನು ದುರುಪಯೋಗಪಡಿಸಿ ಹಣ ಎಗರಿಸಿದ್ದಾರೆ ಎಂದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಡೆಬಿಟ್ ಕಾರ್ಡ್ ಬಳಸಿ ₹2.44 ಲಕ್ಷ ವಂಚನೆ
ಇನ್ನೊಂದು ಪ್ರಕರಣದಲ್ಲಿ 47 ವರ್ಷದ ವ್ಯಕ್ತಿಯೊಬ್ಬರ ICICI ಬ್ಯಾಂಕ್ ಖಾತೆಗೆ ಸಂಬಂಧಿಸಿದ ಡೆಬಿಟ್ ಕಾರ್ಡ್ ದುರುಪಯೋಗಪಡಿಸಿ ₹2,44,691.49 ಹಣವನ್ನು ಅಪರಿಚಿತ ಖಾತೆಗೆ ವರ್ಗಾಯಿಸಲಾಗಿದೆ. ಸೆಪ್ಟೆಂಬರ್ 19ರಂದು ಮನೆಯಲ್ಲಿದ್ದ ಸಂದರ್ಭದಲ್ಲಿ ದೂರುದಾರರ ನೋಂದಾಯಿತ ಮೊಬೈಲ್‌ಗೆ ಹಣ ಕಡಿತಗೊಂಡಿರುವ ಬಗ್ಗೆ ಬ್ಯಾಂಕ್ ಸಂದೇಶಗಳು ಬಂದಿವೆ. ಯಾವುದೇ OTP ಹಂಚಿಕೊಂಡಿರದಿದ್ದರೂ ಹಾಗೂ ಯಾವುದೇ ವಹಿವಾಟು ನಡೆಸದಿದ್ದರೂ ಹಣ ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಸಂಬಂಧಪಟ್ಟ ಬ್ಯಾಂಕ್ ಖಾತೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
₹55 ಉಚಿತ ರೀಚಾರ್ಜ್ ಕೊಟ್ಟು ₹2.03 ಲಕ್ಷ ಹೂಡಿಕೆ ಮಾಡಿಸಿಕೊಂಡರು!
ಮೂರನೇ ಪ್ರಕರಣದಲ್ಲಿ, ದಿನನಿತ್ಯ ನಿಗದಿತ ಆದಾಯದ ಆಮಿಷವೊಡ್ಡಿ ₹2,03,261.70 ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ. ಜೂನ್ 27ರಂದು 58 ವರ್ಷದ ದೂರುದಾರರಿಗೆ 'ಭೂದೇವಿ' ಎಂಬ ಹೆಸರಿನ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು FBT (Future Book Sea Technology) ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ತಮ್ಮ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ ಪ್ರತಿದಿನವೂ ನಿಗದಿತ ಆದಾಯ ಗಳಿಸಬಹುದು ಎಂದು ನಂಬಿಸಿದ್ದಾನೆ. ಬಳಿಕ ವೆಬ್‌ಸೈಟ್ ಲಿಂಕ್ ಕಳುಹಿಸಿ, 'FBT' ಹೆಸರಿನ APK ಫೈಲ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಸಲಾಗಿದೆ. ಆರಂಭದಲ್ಲಿ ನಂಬಿಕೆ ಮೂಡಿಸಲು ₹55 ಉಚಿತ ರೀಚಾರ್ಜ್ ನೀಡಲಾಗಿದೆ. ನಂತರ F1, F2 ಹಾಗೂ F3 ಸೇರಿದಂತೆ ವಿವಿಧ ಹೂಡಿಕೆ ಹಂತಗಳ ಹೆಸರಿನಲ್ಲಿ ಜುಲೈ 9ರಿಂದ ಆಗಸ್ಟ್ 31ರ ವರೆಗೆ PhonePe ಮೂಲಕ ಹಂತ ಹಂತವಾಗಿ ₹2,03,261.70 ಹೂಡಿಕೆ ಮಾಡಿಸಲಾಗಿದೆ.
ಆದರೆ ಹಣ ಹೂಡಿಕೆ ಮಾಡಿದ ಬಳಿಕ ಯಾವುದೇ ದೈನಂದಿನ ಆದಾಯ ಬಂದಿಲ್ಲ. ಹೂಡಿಕೆ ಮಾಡಿದ ಅಸಲು ಹಣವೂ ವಾಪಸ್ ಸಿಗದಿದ್ದಾಗ ತಾವು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ದೂರುದಾರರಿಗೆ ತಿಳಿದಿದೆ.
'Traffic Violation' ಮೆಸೇಜ್: ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲೇ ₹3 ಲಕ್ಷ ಕಟ್
ನಾಲ್ಕನೇ ಪ್ರಕರಣದಲ್ಲಿ ಸೈಬರ್ ವಂಚಕರು ಸಂಚಾರ ನಿಯಮ ಉಲ್ಲಂಘನೆಯ ನಕಲಿ ನೋಟಿಸ್ ಮೂಲಕ ಬಲೆ ಬೀಸಿದ್ದಾರೆ. ಸೆಪ್ಟೆಂಬರ್ 20ರಂದು ಬೆಳಗ್ಗೆ 11.52ರ ಸುಮಾರಿಗೆ 52 ವರ್ಷದ ವ್ಯಕ್ತಿಯೊಬ್ಬರ WhatsAppಗೆ ಅಪರಿಚಿತ ವಿದೇಶಿ ನಂಬರ್‌ನಿಂದ ಸಂದೇಶ ಬಂದಿದೆ. ಅವರ ನಾಲ್ಕು ಚಕ್ರದ ವಾಹನದ ನಂಬರ್ ಅನ್ನು ನಿಖರವಾಗಿ ನಮೂದಿಸಿ, ಸಂಚಾರ ನಿಯಮ ಉಲ್ಲಂಘನೆಗಾಗಿ ₹1,000 ದಂಡ ವಿಧಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು. ದಂಡ ಪಾವತಿಸಲು ಹಾಗೂ ಹೆಚ್ಚಿನ ವಿವರ ವೀಕ್ಷಿಸಲು ಲಿಂಕ್ ನೀಡಲಾಗಿತ್ತು. ತಮ್ಮ ವಾಹನದ ನಂಬರ್ ಇರುವುದರಿಂದ ಸಂದೇಶ ನೈಜವಾಗಿರಬಹುದು ಎಂದು ನಂಬಿದ ದೂರುದಾರರು ಲಿಂಕ್ ಕ್ಲಿಕ್ ಮಾಡಿದ್ದಾರೆ.
ಲಿಂಕ್ ಕ್ಲಿಕ್ ಮಾಡಿದ ತಕ್ಷಣ 'mParivahan' ಹೆಸರಿನ ನಕಲಿ ಆ್ಯಪ್ ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿದೆ. ಬಳಿಕ ಮೊಬೈಲ್ ದುರುಪಯೋಗಕ್ಕೊಳಗಾಗಿದ್ದು, ದೂರುದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹3,00,353.69 ಹಣ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿದೆ. ಬ್ಯಾಂಕ್‌ನಿಂದ ಹಣ ಕಡಿತಗೊಂಡಿರುವ ಸಂದೇಶ ಬಂದ ಬಳಿಕವೇ ವಂಚನೆ ನಡೆದಿರುವುದು ದೂರುದಾರರ ಗಮನಕ್ಕೆ ಬಂದಿದೆ.
ಅಪರಿಚಿತ ವ್ಯಕ್ತಿಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು, ತಿಳಿಯದ APK ಫೈಲ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡದಿರುವುದು ಮತ್ತು ಬ್ಯಾಂಕ್ ಕಾರ್ಡ್‌ಗಳ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಅತ್ಯಂತ ಮುಖ್ಯ. ವಿಶೇಷವಾಗಿ 'Traffic Violation', 'e-Challan' ಅಥವಾ ವಾಹನ ದಂಡದ ಹೆಸರಿನಲ್ಲಿ ಬರುವ ಸಂದೇಶಗಳನ್ನು ಅಧಿಕೃತ ಮೂಲಗಳ ಮೂಲಕವೇ ಪರಿಶೀಲಿಸಿ. OTP ಕೇಳದಿದ್ದರೂ ವಂಚನೆ ಸಂಭವಿಸಬಹುದು ಎಂಬುದನ್ನು ಸಾರ್ವಜನಿಕರು ಗಮನದಲ್ಲಿಟ್ಟುಕೊಳ್ಳಬೇಕು.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
24-09-26 11:10 am
HK News Staffer
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm