ಬ್ರೇಕಿಂಗ್ ನ್ಯೂಸ್
23-09-26 09:22 pm HK News Staffer ಕ್ರೈಂ
ಉಡುಪಿ, ಸೆ.23: ಶಾರ್ಜಾದಲ್ಲಿ ಹತ್ಯೆಗೀಡಾದ ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಕೊಲೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಪೋಸ್ಟ್ ಮಾರ್ಟಮ್ ವರದಿ ಪ್ರಕಾರ ಮೃತದೇಹವನ್ನು ಒಂಬತ್ತು ಭಾಗಗಳಾಗಿ ತುಂಡರಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಎರಡು ಚೀಲಗಳಲ್ಲಿ ಮೃತದೇಹದ ಭಾಗಗಳನ್ನು ಸಾಗಿಸಿರುವುದು ಕಂಡುಬಂದಿದೆ.
ಶಾರ್ಜಾ ಪೊಲೀಸರಿಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳು ಮಹತ್ವದ ಸುಳಿವು ನೀಡಿವೆ. ಘಟನೆಯ ಬಳಿಕ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಎರಡು ಚೀಲಗಳನ್ನು ಸಾಗಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇದೇ ವೇಳೆ, ಘಟನೆ ಬಳಿಕ ಪ್ರಕಾಶ್ ಕುಂದರ್ ಅವರ ಪತ್ನಿ ಟೀನಾ ಹಾಗೂ ಪುತ್ರ ಭಾರತಕ್ಕೆ ಬಂದಿರುವುದು ದೆಹಲಿ ವಿಮಾನ ನಿಲ್ದಾಣದ ಮಾಹಿತಿಯಿಂದ ತಿಳಿದುಬಂದಿದೆ. ಆದರೆ ಭಾರತಕ್ಕೆ ಬಂದ ಬಳಿಕ ಅವರ ಚಲನವಲನದ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಇವರಿಬ್ಬರನ್ನು ಪತ್ತೆಹಚ್ಚಿ, ಪ್ರಕರಣದಲ್ಲಿ ಅವರ ಪಾತ್ರವಿದೆಯೇ ಎಂಬುದನ್ನು ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಪ್ರಕಾಶ್ ಕುಂದರ್ ಅವರ ಪತ್ನಿ ಟೀನಾ ಅವರ ಮೇಲೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪಗಳು ತನಿಖೆಯಿಂದ ದೃಢಪಟ್ಟಿಲ್ಲ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳನ್ನೂ ಪರಿಶೀಲಿಸಿ ಸತ್ಯಾಸತ್ಯತೆ ಪತ್ತೆಹಚ್ಚಬೇಕಿದೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಪ್ರಕಾಶ್ ಅವರ ಎಡ ಎದೆ ಭಾಗದಲ್ಲಿ ಎರಡು ಚುಚ್ಚಿದ ಗಾಯಗಳಿರುವುದು ಉಲ್ಲೇಖವಾಗಿದೆ. ಏಳನೇ ಮತ್ತು ಎಂಟನೇ ಪಕ್ಕೆಲುಬುಗಳ ನಡುವಿನಿಂದ ಚುಚ್ಚಿದ ಗಾಯಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೃತದೇಹದ ಭಾಗಗಳನ್ನು ಹಸಿರು ಹಾಗೂ ನೀಲಿ ಬಣ್ಣದ ಚೀಲಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎನ್ನಲಾಗಿದೆ. ತಲೆ, ಕೈಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳನ್ನು ಬೇರ್ಪಡಿಸಿದ್ದು, ಎಲುಬುಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿರುವುದು ಹಾಗೂ ಮೃದು ಅಂಗಾಂಶಗಳನ್ನು ಕತ್ತರಿಸಿ ಎಲುಬುಗಳಿಂದ ಬೇರ್ಪಡಿಸಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.
ಪ್ರಕಾಶ್ ಕುಂದರ್ ಅವರ ಮೃತದೇಹವನ್ನು ಆದಷ್ಟು ಶೀಘ್ರವಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾ ಅವರಿಗೂ ಮನವಿ ಸಲ್ಲಿಸಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಪ್ರಕರಣದಲ್ಲಿ ನಾಪತ್ತೆಯಾಗಿರುವ ಪತ್ನಿ ಹಾಗೂ ಪುತ್ರನನ್ನು ಪತ್ತೆಹಚ್ಚಲು ಭಾರತದಿಂದ ಶಾರ್ಜಾ ಪೊಲೀಸರೊಂದಿಗೆ ಸಮನ್ವಯ ಸಾಧಿಸಬೇಕು. ಕೊಲೆಯಲ್ಲಿ ಅವರ ಪಾತ್ರವಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಶಾರ್ಜಾ ಪೊಲೀಸರ ತನಿಖೆ ಮುಂದುವರಿದಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಪೋಸ್ಟ್‌ಮಾರ್ಟಮ್ ವರದಿಯಲ್ಲಿರುವ ಅಂಶಗಳು ತನಿಖೆಗೆ ಪ್ರಮುಖ ಸುಳಿವುಗಳಾಗಿವೆ.
Shocking details have emerged in the murder case of Udupi-origin man Alvin Prakash Kunder, who was killed in Sharjah. According to the post-mortem report, his body was dismembered into nine pieces, while CCTV footage reportedly shows a woman and two men carrying the remains in two bags.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm