ಬ್ರೇಕಿಂಗ್ ನ್ಯೂಸ್
09-09-26 07:44 pm HK News Staffer ಕ್ರೈಂ
ಅಮರಾವತಿ, ಸೆ 09: ಹುಲಿಗಳ ಮೇಲೆ ಪ್ರೀತಿ ಹೊಂದಿದ್ದು, ಅದರ ಡಿಪಿಯನ್ನೇ ತನ್ನ ವಾಟ್ಸ್ಆ್ಯಪ್ ಪ್ರೊಫೈಲ್ನಲ್ಲಿ ಹಾಕಿದ್ದ ಯುವತಿ ಕೊನೆಗೆ ಅದೇ ಹುಲಿಗೆ ಬಲಿಯಾದ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದ ಅಮರಾವತಿಯ ಚಂದೂರ್ ಬಜಾರ್ ತಾಲೂಕಿನ ಸೋನೋರಿ ಗ್ರಾಮದಲ್ಲಿ ವರದಿಯಾಗಿದೆ. ಅರಣ್ಯದಂಚಿನ ಗ್ರಾಮದ ಊರ್ಮಿಳಾ ಇವ್ನೆ, ಹುಲಿ ದಾಳಿಗೆ ಬಲಿಯಾದ ಯುವತಿಯಾಗಿದ್ದಾಳೆ. ಕೃಷಿ ಕೆಲಸದ ಜೊತೆಗೆ ಮನೆಗೆ ಆಧಾರ ಸ್ತಂಬವಾಗಿದ್ದ ಆಕೆಯ ಸಾವು ಕುಟುಂಬಕ್ಕೆ ಬರ ಸಿಡಿಲಿನಂತೆ ಎರಗಿ ಬಂದಿದೆ.
ಸೋನೋರಿ ಗ್ರಾಮದಲ್ಲಿ ಹುಲಿ ಸಂಚಾರದ ಬಗ್ಗೆ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಕೂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿತ್ತು. ಇಡೀ ಗ್ರಾಮವೂ ಹುಲಿ ಆತಂಕದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ಉರ್ಮಿಳಾ ನೆರೆ ಮನೆಯವರಾದ ಕಲಾ ಮಹಾದೇವ ಕಸ್ಡೇಕರ್ ಜೊತೆಗೆ ಹೊಲದ ಕೆಲಸಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಹುಲಿ ದಾಳಿ ಮಾಡಿದೆ. ಹುಲಿ ಆಗಮದ ಸುಳಿವು ಸಿಕ್ಕ ಬೆನ್ನಲ್ಲೇ ಕಲಾ ಓಡಿ ಹೋಗಿದ್ದಾರೆ. ಊರ್ಮಿಳಾ ಅಲ್ಲಿಯೇ ಇದ್ದ ಕಿತ್ತಳೆ ಮರದ ಬಳಿ ರಕ್ಷಣೆ ಪಡೆದಿದ್ದರು. ಆದರೆ, ಹುಲಿ ಯಮನಂತೆ ಎರಗಿ ಆಕೆಯನ್ನು ಹೊತ್ತೊಯ್ದಿದೆ.
ಸಹೋದರ - ಸಹೋದರಿಯರ ಶಿಕ್ಷಣಕ್ಕೆ ಆಧಾರ ಸ್ಥಂಭವಾಗಿದ್ದ ಉರ್ಮಿಳಾ ಸಾವು ಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ಆರನೇ ವಯಸ್ಸಿಗೆ ತಂದೆ ಇಲ್ಲದೇ ಕುಟುಂಬದ ಹೊಣೆ ಹೊತ್ತಿದ್ದ ಆಕೆಯನ್ನು ಕಳೆದುಕೊಂಡ ಕುಟುಂಬ ಈಗ ನಮಗ್ಯಾರು ದಿಕ್ಕು ಎಂದು ಪ್ರಶ್ನಿಸುತ್ತಿದೆ.
ಹುಲಿ ಬಗ್ಗೆ ಆಸಕ್ತಿ ಹೊಂದಿದ್ದ ಊರ್ಮಿಳಾ: ಊರ್ಮಿಳಾಗೆ ಹುಲಿ ಬಗ್ಗೆ ವಿಪರೀತ ಆಸಕ್ತಿ ಹಾಗೂ ತೀವ್ರ ಕುತೂಹಲವಿತ್ತು. ಆಕೆ ಸದಾ ಹುಲಿ ಕುರಿತು ಪ್ರಶ್ನಿಸುತ್ತಿದ್ದಳು. ಒಮ್ಮೆ ಹುಲಿಯನ್ನು ನೋಡಬೇಕು ಎಂದು ಬಯಸಿದ್ದಳು. ಆಕೆಯ ವಾಟ್ಸ್ಆ್ಯಪ್ ಪ್ರೊಫೈಲ್, ಮೊಬೈಲ್ ಪರದೆ ಮೇಲೆ ಹುಲಿ ಚಿತ್ರವನ್ನೇ ಹಾಕಿಕೊಂಡಿದ್ದಳು. ವಿಪರ್ಯಾಸ ಎಂದರೆ, ಇದೀಗ ಹುಲಿ ಬಾಯಿಗೆ ಆಕೆ ಬಲಿಯಾಗಿದ್ದಾಳೆ ಎಂದು ಆಕೆಯ ಕುಟುಂಬ ಕಣ್ಣೀರಿಟ್ಟಿದೆ.
ಹುಲಿ ದಾಳಿಗೆ ಒಳಗಾದ ಊರ್ಮಿಳಾ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಆದರೆ, ಈ ಹಣ ಆಕೆಯ ಸ್ಥಾನವನ್ಜು ತುಂಬಲು ಸಾಧ್ಯವಿಲ್ಲ. ಆಕೆಯ ಅಗಲಿಕೆ ನಮ್ಮ ಕುಟುಂಬದ ಸಂತೋಷವನ್ನೇ ಕಸಿದಿದೆ ಎಂದು ಮೃತ ಊರ್ಮಿಳಾ ತಾಯಿ ಮತಿಯಾ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಊರ್ಮಿಳಾ ಅಂತ್ಯಕ್ರಿಯೆಯಲ್ಲಿ ಸಂಬಂಧಿಕರು ಹಾಗೂ ರಾಜಕೀಯ ಮತ್ತು ಸಾಮಾಜಿಕ ವಲಯದ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗಿಯಾಗಿದ್ದರು. ಈ ನಡುವೆ ಊರ್ಮಿಳಾರನ್ನು ಬಲಿ ಪಡೆದ ಹುಲಿಯನ್ನು ತಕ್ಷಣಕ್ಕೆ ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದೆ.
09-09-26 10:52 am
HK News Staffer
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
09-09-26 09:04 pm
HK News Staffer
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
ಮಂಗಳೂರು ರೈಲ್ವೇ ಆಡಳಿತಾತ್ಮಕ ವರ್ಗಾವಣೆ ಪ್ರಕ್ರಿಯೆ...
08-09-26 05:20 pm
ದಕ್ಷಿಣ ಕನ್ನಡದಲ್ಲಿ ದಿಢೀರ್ ಲೋಕಾಯುಕ್ತ ದಾಳಿ: ಬಂಟ್...
08-09-26 03:50 pm
09-09-26 08:16 pm
HK News Staffer
ಬೆಳ್ಳಾರೆ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ಬಟ್ಟೆ...
09-09-26 07:45 pm
ಮನದಲ್ಲೂ ಹುಲಿ, ಡಿಪಿಯಲ್ಲೂ ಹುಲಿ ; ಕೊನೆಗೆ ಅದೇ ಹುಲ...
09-09-26 07:44 pm
ಹೆಂಡತಿ ಅಡುಗೆ ಮಾಡಲ್ಲ, ಅತಿಯಾಗಿ ಮೊಬೈಲ್ ಫೋನ್ ಬಳಸು...
09-09-26 06:20 pm
8 ತಿಂಗಳ ಬಳಿಕ ನಾಪತ್ತೆಯಾಗಿದ್ದ ಬೆಂಗಳೂರು ಪಿಯು ವಿದ...
09-09-26 12:16 pm