ಬ್ರೇಕಿಂಗ್ ನ್ಯೂಸ್
18-08-26 06:02 pm HK News Staffer ಕ್ರೈಂ
ಆಲಪ್ಪುಳ, ಆಗಸ್ಟ್ 18: ಮೊಬೈಲ್ ಫೋನ್ ಅತಿಯಾಗಿ ಬಳಸಬೇಡ, ತಡವಾಗಿ ಮನೆಗೆ ಬರೋದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಕ್ಕೆ ಅಜ್ಜನ ಮೇಲಿದ್ದ ಕೋಪ ಭೀಕರ ಕೃತ್ಯಕ್ಕೆ ಕಾರಣವಾದ ಪ್ರಕರಣ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ ತನ್ನ ಪ್ರಿಯಕರ ಹಾಗೂ ಇತರ ಹದಿಹರೆಯದ ಸ್ನೇಹಿತರೊಂದಿಗೆ ಸೇರಿ ಅಜ್ಜನ ಹತ್ಯೆಗೆ ಸಂಚು ರೂಪಿಸಿದ ಆರೋಪ ಕೇಳಿಬಂದಿದ್ದು, ಬಾಲಕಿ ಸೇರಿ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಲಪ್ಪುಳ ಜಿಲ್ಲೆಯ ಕರುವಟ್ಟ ಸಮೀಪದ ಪರವೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 65 ವರ್ಷದ ಶಿವನ್‌ಕುಟ್ಟಿ ಚೆಟ್ಟಿಯಾರ್ ಆ.15ರಂದು ರಾತ್ರಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ನೇಣಿಗೇರಿಸಿ ಕೊಲೆಯಾಗಿದ್ದರು.
ಶಿವನ್ ಕುಟ್ಟಿ ಮೂಲತಃ ಕೊಲ್ಲಂನವರಾಗಿದ್ದು ಪರವೂರಿನಲ್ಲಿ ಬಂದು ನೆಲೆಸಿದ್ದರು. ಸಸಿಕಲಾ ಮತ್ತು ಶ್ರೀಕಲಾ ಎಂಬ ಇಬ್ಬರು ಪುತ್ರಿಯರಿಗಾಗಿ ಅಲ್ಲಿಯೇ ಎರಡು ಮನೆಗಳನ್ನು ಕಟ್ಟಿಸುತ್ತಿದ್ದರು. ಶ್ರೀಕಲಾ ಮತ್ತೊಂದು ಹೆರಿಗೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ಶಿವನ್ ಕುಟ್ಟಿಯವರ ಪತ್ನಿಯೂ ಅಲ್ಲಿಯೇ ಮಗಳ ಜೊತೆಗಿದ್ದರು. ಹೀಗಾಗಿ ಅಜ್ಜ ಶಿವನ್ ಕುಟ್ಟಿ ಮಾತ್ರ ಮನೆಯಲ್ಲಿದ್ದರು. 13 ವರ್ಷದ ಮೊಮ್ಮಗಳು ಸಂಜೆ ತಡವಾಗಿ ಮನೆಗೆ ಬರುವುದು, ಮೊಬೈಲ್ ನೋಡುತ್ತ ಕಾಲ ಕಳೆಯುವುದನ್ನು ನೋಡಿ ಅಜ್ಜ ಗದರುತ್ತಿದ್ದರು. ಅವಳು ಸ್ನೇಹಿತರ ಮನೆಯಲ್ಲಿದ್ದರೂ, ಅಜ್ಜ ಒಬ್ಬನೇ ಮನೆಯಲ್ಲಿರುವುದನ್ನು ತಿಳಿದು ಸ್ನೇಹಿತರ ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದಳು.

ಭಾನುವಾರ ರಾತ್ರಿ ಹರೆಯದ ಯುವಕರು ಮನೆಯ ವೆಂಟಿಲೇಟರ್ ಮೂಲಕ ಒಳನುಗ್ಗಿದ್ದು, ಎಚ್ಚರಗೊಂಡ ಶಿವನ್‌ಕುಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೈಕಾಲುಗಳನ್ನು ಬೆಡ್ಡಿಗೆ ಕಟ್ಟಿ ಉಟ್ಟಿದ್ದ ಬಟ್ಟೆಯನ್ನೇ ಕುಣಿಕೆಯಾಗಿಸಿ ಹತ್ಯೆ ಮಾಡಿದ್ದಾರೆ. ನಂತರ, ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಮನೆಯಲ್ಲಿದ್ದ ಸ್ಥಿತಿ ನೋಡಿ ಅನುಮಾನ ಮೂಡಿಸಿತ್ತು. ವ್ಯಕ್ತಿಯನ್ನು ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಸಾಯಿಸಿದ್ದು ಉದ್ದೇಶಪೂರ್ವಕ ಕೊಲೆ ಮಾಡಿದಂತೆ ಕಾಣಿಸಿತ್ತು. ಅಲ್ಲದೆ, ಬಾಲಕಿ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದು ಪೊಲೀಸರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಹೀಗಾಗಿ ಬಾಲಕಿಯ ಮೊಬೈಲ್ ಕರೆ ಪರಿಶೀಲಿಸಿದಾಗ, ಕೃತ್ಯದಲ್ಲಿ ಭಾಗಿಯಾದವರ ಜೊತೆಗೆ ಸಂಪರ್ಕ ಇದ್ದುದು ಕಂಡುಬಂದಿತ್ತು.
ಇದರ ಆಧಾರದಲ್ಲಿ 13 ವರ್ಷದ ಬಾಲಕಿ ಸೇರಿದಂತೆ ನಾಲ್ವರು ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಶನಿವಾರ ಸಂಜೆಯಿಂದ ಶಿವನ್ ಕುಟ್ಟಿ ಆಸುಪಾಸಿನಲ್ಲಿ ಕಂಡುಬಂದಿರಲಿಲ್ಲ. ಆದರೆ ಅಜ್ಜ ಎರಡು ದಿನಗಳಿಂದ ಮನೆಯಿಂದ ಹೊರಗೆ ಬಂದಿಲ್ಲ ಎಂದು ಬಾಲಕಿ ಸ್ಥಳೀಯರಿಗೆ ತಿಳಿಸಿದ್ದು ಅನುಮಾನ ಮೂಡಿಸಿತ್ತು. ಇದರಂತೆ, ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿತ್ತು.
ತನಿಖೆ ಸಂದರ್ಭದಲ್ಲಿ ಬಾಲಕಿಯ ಸ್ನೇಹಿತ ಮತ್ತು ಓರಗೆಯ ಗೆಳೆಯರಿಗೆ ಹಣದ ಅಗತ್ಯವಿತ್ತು. ಮನೆ ದೋಚಿದ ಹಣದಲ್ಲಿ ಬಾಲಕಿ ಐಫೋನ್ ಖರೀದಿ ಮತ್ತು ಯುವಕರು ಬೈಕ್ ಖರೀದಿಸಲು ಯೋಜನೆ ಹಾಕಿದ್ದರು ಎಂಬುದು ಪತ್ತೆಯಾಗಿದೆ. ಆದರೆ ಪೊಲೀಸರು ಬಾಲಕಿಯ ಮೊಬೈಲ್ ಹಿಸ್ಟರಿಯನ್ನೇ ಬಳಸಿಕೊಂಡು ಅಜ್ಜನ ಕೊಲೆಗೈದವರನ್ನು ಸೆರೆಹಿಡಿದಿದ್ದಾರೆ.
17-08-26 02:26 pm
HK News Staffer
ಜಮೀರ್ ಹಲ್ಲು ಕಿತ್ತ ಹಾವು, ನೆಪಕ್ಕಷ್ಟೇ ಸಚಿವ ಸ್ಥಾನ...
14-08-26 08:42 pm
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
18-08-26 02:42 pm
HK News Staffer
ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿಗೆ ಹೊಸ ಟೀಮ್ ;...
17-08-26 09:45 pm
ಪ್ರಧಾನಿ ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಿಜಿಜು ಅರ್ಥ...
17-08-26 05:38 pm
ನೀಟ್ ಪರೀಕ್ಷೆ ರದ್ದುಗೊಳಿಸಲು ತಮಿಳುನಾಡು ವಿಧಾನಸಭೆಯ...
11-08-26 10:25 pm
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
17-08-26 05:07 pm
HK News Staffer
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
18-08-26 10:06 pm
HK News Staffer
ಮೊಬೈಲ್ ಗೀಳು ಬೇಡ ಎಂದಿದ್ದ ಅಜ್ಜನನ್ನೇ ಕೊಲ್ಲಿಸಿದ 1...
18-08-26 06:02 pm
ಚಿಕ್ಕಬಾಣಾವರ ತಂದೆ, ಮಗು ಸಾವಿಗೆ ರೋಚಕ ಟ್ವಿಸ್ಟ್ ;...
18-08-26 03:00 pm
ಬೆಳಗಾವಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ; ವೃದ್ಧನ ಮೇಲ...
17-08-26 10:04 pm
ದಾಂಡೇಲಿ ವೈಲ್ಡರ್ ನೆಸ್ಟ್ ರೆಸಾರ್ಟ್ಗೆ ನುಗ್ಗಿದ ಬ್...
17-08-26 10:02 pm