ಬ್ರೇಕಿಂಗ್ ನ್ಯೂಸ್
17-08-26 10:02 pm HK News Staffer ಕ್ರೈಂ
ಕಾರವಾರ , ಆಗಸ್ಟ್ 17: ದಾಂಡೇಲಿ ತಾಲೂಕಿನ ಹಾಸನ್ ಮಾಳ್ ಗ್ರಾಮದ ವೈಲ್ಡರ್ ನೆಸ್ಟ್ ರೆಸಾರ್ಟ್‌ನಲ್ಲಿ ಸೋಮವಾರ ಮುಂಜಾನೆ ಕಪ್ಪು ಚಿರತೆ ದಾಳಿ ನಡೆಸಿದ್ದು, ರೆಸಾರ್ಟ್‌ನ ಜರ್ಮನ್ ಶೆಫರ್ಡ್ ತಳಿಯ ನಾಯಿ ಮೃತಪಟ್ಟಿದೆ.
ಮುಂಜಾನೆ ಸುಮಾರು 4 ಗಂಟೆ ವೇಳೆಗೆ ರೆಸಾರ್ಟ್ ಆವರಣದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಕಪ್ಪು ಚಿರತೆ ಏಕಾಏಕಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಮೃತ ನಾಯಿ ರೆಸಾರ್ಟ್ ಮಾಲೀಕ ಅಬ್ದುಲ್ ಕರೀಂ ಖತೀಬ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
CCTVಯಲ್ಲಿ ಭೀಕರ ದೃಶ್ಯ ಸೆರೆ!
ಚಿರತೆ ನಾಯಿಯ ಮೇಲೆ ದಾಳಿ ನಡೆಸಿದ ಸಂಪೂರ್ಣ ದೃಶ್ಯ ರೆಸಾರ್ಟ್‌ನ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಂಜಾನೆಯ ವೇಳೆ ರೆಸಾರ್ಟ್ ಆವರಣಕ್ಕೆ ಪ್ರವೇಶಿಸಿದ ಕಪ್ಪು ಚಿರತೆ, ಮಲಗಿದ್ದ ನಾಯಿಯ ಮೇಲೆ ದಾಳಿ ನಡೆಸಿ ಅದನ್ನು ಎಳೆದುಕೊಂಡು ಹೋಗಲು ಯತ್ನಿಸಿರುವ ದೃಶ್ಯ ಕ್ಯಾಮೆರಾದಲ್ಲಿ ದಾಖಲಾಗಿದೆ.
ರೆಸಾರ್ಟ್ ಒಳಗೆ ನುಗ್ಗಿದ ಚಿರತೆ;
ಆತಂಕದಲ್ಲಿ ಸ್ಥಳೀಯರು ಹಾಸನ್ ಮಾಳ್ ಪ್ರದೇಶವು ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾಡುಪ್ರಾಣಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ. ಆದರೆ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿರುವ ರೆಸಾರ್ಟ್ ಆವರಣದೊಳಗೇ ಕಪ್ಪು ಚಿರತೆ ನುಗ್ಗಿ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ಕೆಲವು ದಿನಗಳಿಂದ ಇದೇ ಭಾಗದಲ್ಲಿ ಬ್ಲ್ಯಾಕ್ ಪ್ಯಾಂಥರ್ ಓಡಾಟ ಕಂಡುಬರುತ್ತಿದೆ ಎನ್ನಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ’ ಗ್ರಾಮಸ್ಥರ ಆಗ್ರಹ
ಚಿರತೆ ಓಡಾಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ರೆಸಾರ್ಟ್‌ಗಳು, ಮನೆಗಳು ಹಾಗೂ ಜನವಸತಿ ಪ್ರದೇಶಗಳ ಸುತ್ತಮುತ್ತ ಕಾಡುಪ್ರಾಣಿಗಳ ಚಲನವಲನದ ಬಗ್ಗೆ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
#Karnataka #KaliTigerReserve
— Amit Upadhye (@AmitSUpadhye) August 17, 2026
The ghost from the forests #BlackPanther grabs a dog sleeping a resort near #Dandeli Leaves back its catch after some disturbance #watch @NewIndianXpress @XpressBengaluru @KannadaPrabha @ns_subhash @aranya_kfd pic.twitter.com/C1BpvUx0P9
17-08-26 02:26 pm
HK News Staffer
ಜಮೀರ್ ಹಲ್ಲು ಕಿತ್ತ ಹಾವು, ನೆಪಕ್ಕಷ್ಟೇ ಸಚಿವ ಸ್ಥಾನ...
14-08-26 08:42 pm
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
18-08-26 02:42 pm
HK News Staffer
ನಿತಿನ್ ನಬಿನ್ ಸಾರಥ್ಯದಲ್ಲಿ ಬಿಜೆಪಿಗೆ ಹೊಸ ಟೀಮ್ ;...
17-08-26 09:45 pm
ಪ್ರಧಾನಿ ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಿಜಿಜು ಅರ್ಥ...
17-08-26 05:38 pm
ನೀಟ್ ಪರೀಕ್ಷೆ ರದ್ದುಗೊಳಿಸಲು ತಮಿಳುನಾಡು ವಿಧಾನಸಭೆಯ...
11-08-26 10:25 pm
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
17-08-26 05:07 pm
HK News Staffer
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
18-08-26 03:00 pm
HK News Staffer
ಬೆಳಗಾವಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ; ವೃದ್ಧನ ಮೇಲ...
17-08-26 10:04 pm
ದಾಂಡೇಲಿ ವೈಲ್ಡರ್ ನೆಸ್ಟ್ ರೆಸಾರ್ಟ್‌ಗೆ ನುಗ್ಗಿದ ಬ್...
17-08-26 10:02 pm
ಮೊಮ್ಮಗನಿಂದಲೇ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಅ...
17-08-26 09:39 pm
ಚಾಮರಾಜನಗರ ಶೂಟೌಟ್ ಪ್ರಕರಣ ; ರಾಜ್ಯದಲ್ಲಿ 13 ಲಕ್ಷ...
17-08-26 05:02 pm